ಮನೆಯಲ್ಲಿ ಲಾಕ್ ಆದವರ ಮನರಂಜನೆಗಾಗಿ ಫೇಸ್​ಬುಕ್ ನಿಂದ ಹೊಸ ಗೇಮಿಂಗ್ ಆ್ಯಪ್​​​​

ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಲಾಕ್ ಆದವರಿಗೆ ಮನರಂಜನೆ ನೀಡುವ  ಉದ್ದೇಶದಿಂದ ಹೊಸ ಆ್ಯಪ್ ವೊಂದನ್ನ ಫೇಸ್ ಬುಕ್ ನೀಡುತ್ತಿದೆ.

ಹೌದು… ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಜನ ಅತೀ ಹೆಚ್ಚು ಸಕ್ರಿಯರಾಗಿರುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಮುಪ್ಪಿನವರೆಗೂ ಜನ ಸ್ಮಾರ್ಟ್ ಗಳಲ್ಲಿ ವಾಟ್ಸಪ್, ಫೇಸ್ ಬುಕ್, ಟ್ವೀಟರ್, ಇನ್ ಸ್ಟಾಗ್ರಾಮ್ ಅಂತ ಫುಲ್ ಬ್ಯುಸಿ. ಹೀಗಾಗಿ ಜನರಿಗೆ ಅತೀ ಹೆಚ್ಚು ಮನರಂಜನೆ ನೀಡುವ ಉದ್ಧೇಶದಿಂದ ಫೇಸ್​ಬುಕ್ ನಿಂದ ಹೊಸ ಗೇಮಿಂಗ್ ಆ್ಯಪ್ ಲಾಂಚ್ ಮಾಡಲಾಗುತ್ತಿದೆ.

ವಿಶೇಷ ಅಂದ್ರೆ ಈ ಗೇಮಂಗ್​ ಌಪ್​ಗೆ ಫೇಸ್​ಬುಕ್​ ಯಾವುದೇ ಶುಲ್ಕ ವಿಧಿಸುತ್ತಿಲ್ಲ.  ತನ್ನ ಬಳಕೆದಾರರಿಗೆ ಫ್ರೀಯಾಗಿ  ಈ ಗೇಮಿಂಗ್​ ಆ್ಯಪ್ ಫೇಸ್​ಬುಕ್ ನೀಡಲಿದೆ. ಈ ಮೂಲಕ ಕೋಟ್ಯಾಂತರ ಜನರು ತಮ್ಮ ಸ್ಮಾರ್ಟ್​ಫೋನ್ ಮೂಲಕ ಉಚಿತವಾಗಿ ಗೇಮ್​ ಆಡಬಹುದಾಗಿದೆ. ಸದ್ಯಕ್ಕೆ ಆ್ಯಂಡ್ರಾಯ್ಡ್​​  ಫೋನ್​ಗಳಿಗೆ ಮಾತ್ರ ಈ ಆ್ಯಪ್ ಲಭ್ಯವಾಗಲಿದೆ.

ಇತ್ತೀಚೆಗೆ ಸಮಯ ಕಳೆಯಲು, ಹಾಗೂ ಮನರಂಜನೆಗಾಗಿ ಜನರು ಹೆಚ್ಚಾಗಿ ಗೇಮಿಂಗ್​ ಮೊರೆ ಹೋಗ್ತಿರೋದ್ರಿಂದ ಈ ಆ್ಯಪ್  ಲಾಂಚ್​ ಮಾಡಲು ಫೇಸ್​ಬುಕ್​ ನಿರ್ಧರಿಸಿದೆ.  ಆರಂಭದಲ್ಲಿ ಮಾಮೂಲಿ ಗೇಮ್​ಗಳು ದೊರೆಯಲಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights