50 ಸಾವಿರ ಜನರ ದಾದ್ರಿ ಮಹಾಪಂಚಾಯತ್‌; ರೈತರು ಕೈಗೊಂಡ 5 ನಿರ್ಣಯಗಳು ಹೀಗಿವೆ!

ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಯತ್ನಿಸಿದ ನಂತರ ರೈತ ಹೋರಾಟಕ್ಕೆ ಮತ್ತಷ್ಟು ಬೆಂಬಲ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ – ಹರಿಯಾಣ ರಾಜ್ಯಗಳ ಪಂಚಾಯತ್‌ ವ್ಯಾಪ್ತಿಗಳಲ್ಲಿ ಮಹಾ ಪಂಚಾಯತ್‌ಗಳು ನಡೆಯುತ್ತಿದ್ದು, ದಿನ ಕಳೆದಂತೆ ಮಹಾಪಂಚಾಯತ್‌ಗಳ ಸಂಖ್ಯೆ ಹೆಚ್ಚಿತ್ತಿವೆ. ಅಂತೆಯೇ, ಹರಿಯಾಣದ ಬಿವಾನಿ ದಾದ್ರಿ ಟೋಲ್ ಪ್ಲಾಜಾದ ಬಳಿ ನಡೆದ ಪಂಚಾಯತ್‌ನಲ್ಲಿ 50 ಸಾವಿರ ರೈತರು ಭಾಗಿಯಾಗಿ 5 ನಿರ್ಣಯಗಳನ್ನು ಅಂಗೀಕರಿಸಿದ್ದಾರೆ.

ದಾದ್ರಿ ಮಹಾಪಂಚಾಯತ್ 5 ನಿರ್ಣಯಗಳನ್ನು ಅಂಗೀಕರಿಸಿದ್ದು ಅವುಗಳು ಈ ಕೆಳಗಿನಂತಿವೆ:

1. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ.
2. ಎಂಎಸ್‌ಪಿ ಖಾತ್ರಿಗಾಗಿ ಕಾಯ್ದೆ ತನ್ನಿ.
3. ರೈತರ ವಿರುದ್ಧ ಹಾಕಲಾಗಿರುವ ಎಫ್‌ಐಆರ್ ರದ್ದುಮಾಡಿ ಮತ್ತು ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಿ.
4. ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ರೈತರಿಗೆ ಹಸ್ತಾಂತರಿಸಬೇಕು.
5. ಎನ್ಎಚ್ 122 ಬಿ ಗಾಗಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು.

ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ಬಿಕೆಯುನ ರಾಕೇಶ್ ಟಿಕಾಯತ್, ಬಲ್ವೀರ್ ಸಿಂಗ್ ರಾಜೇವಾಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತ ಮುಖಂಟ ರಾಕೇಶ್ ಟಿಕಾಯತ್ ಮಾತನಾಡಿ “ಕೇಂದ್ರ ಸರ್ಕಾರ ಈ ಮೂರು ಕರಾಳ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು. ಇದಕ್ಕಾಗಿ ಅಕ್ಟೋಬರ್ ವರೆಗೂ ಸಮಯ ನೀಡುತ್ತೇವೆ. ಅಕ್ಟೋಬರ್ ನಲ್ಲಿ ಮತ್ತೊಮ್ಮೆ ಟ್ರ್ಯಾಕ್ಟರ್ ರ್ಯಾಲಿ ಮಾಡಬೇಕಾಗುತ್ತದೆ. 40 ಲಕ್ಷ ಟ್ರ್ಯಾಕ್ಟರ್‌ಗಳು ಪಾಲ್ಗೊಳ್ಳುತ್ತವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ BJP ಯಾತ್ರಾ ರಾಜಕೀಯ: ವಸುಂಧರಾ ರಾಜೇ ಮತ್ತು ಸತೀಶ್ ಪೂನಿಯಾ ನಡುವೆ ನಾಯಕತ್ವ ಸೆಣೆಸಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights