ಕಳೆದ 24 ಗಂಟೆಗಳಲ್ಲಿ 15 ರಾಜ್ಯಗಳಲ್ಲಿ ಕೋವಿಡ್ ಸಾವುಗಳೇ ಸಂಭವಿಸಿಲ್ಲ..
ಕಳೆದ 24 ಗಂಟೆಗಳಲ್ಲಿ ಹದಿನೈದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಸರ್ಕಾರ ಹೇಳಿದೆ. ಇದು ದೇಶಾದ್ಯಂತ ವೈರಸ್ ದುರ್ಬಲಗೊಳ್ಳುವುದನ್ನು ಎತ್ತಿ ತೋರಿಸುತ್ತದೆ.
ಕಳೆದ ವಾರದಲ್ಲಿ, ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಸಾವುನೋವುಗಳನ್ನು ದಾಖಲಿಸಿಲ್ಲ ಎಂದು ಕೇಂದ್ರ ತಿಳಿಸಿತ್ತು.
ದೇಶದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ರೋಗದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. ಜನವರಿ 16 ರಂದು ಲಸಿಕೆ ನೀಡಲು ಆರಂಭವಾಯಿತು. ಅದಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಇದು ಫೆಬ್ರವರಿ 13 ರ ವೇಳೆಗಾಗಲೇ ಇನ್ನಷ್ಟು ಮಹತ್ತರ ಬದಲಾವಣೆಯಾಗುವ ನಿರೀಕ್ಷೆಯಿದೆ.

