KSRTC ಚಾಲಕನ ಮೇಲೆ ಹಲ್ಲೆ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು; ಮೂವರ ಬಂಧನ!

ಮೈಸೂರಿನ ಹುಣಸೂರು ಬಳಿ ಜನವರಿ 22ರಂದು KSRTC ಬಸ್‌ ಚಾಲಕನ ಮೇಲೆ ಚಾಕುವಿನ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಒಬ್ಬ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.

ಹಣಸೂರಿನ ಬಳಿ ಮೂವರು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ಅವರನ್ನು ಸೈಡ್‌ ಹೊಡೆದು ಮುಂದಕ್ಕೆ ಹೋಗಿದ್ದಕ್ಕಾಗಿ ಬಸ್‌ಅನ್ನು ಅಡ್ಡಗಟ್ಟಿ ಚಾಲಕನ ಮೇಲೆ ಬೈಕ್‌ನಲ್ಲಿದ್ದ ಒಬ್ಬ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್‌ ಚಾಲಕ ಮೈಸೂರಿ ಬಿಳಿಕೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳಿ ತೆರಳಿ ಜಯಂತ್, ವಿಘ್ನೇಶ್ ಹಾಗೂ ದೀಪಕ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವೇಳೆ ತಪ್ಪಿಕೊಳ್ಳಲು ಯತ್ನಿಸಿದ ಆರೋಪಿ ಜಯಂತ್‌ ಕಾಲಿಗೆಪಿಎಸ್‌ಐ ಜಯಪ್ರಕಾಶ್ ಗುಂಡೇಟು ಹೊಡೆದು ಬಂಧಿಸಿದ್ದಾರೆ.

ಘಟನೆಯ ವಿವರಕ್ಕಾಗಿ ಲಿಂಕ್‌ನಲ್ಲಿರುವ ಸುದ್ದಿ ಓದಿ:  ಹುಣಸೂರು: KSRTC ಚಾಲಕನ ಮೇಲೆ ಯುವಕನಿಂದ ಮಾರಣಾಂತಿಕ ಹಲ್ಲೆ; ನೋಡುತ್ತಾ ನಿಂತಿದ್ದ ಜನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights