ಹುಣಸೂರು: KSRTC ಚಾಲಕನ ಮೇಲೆ ಯುವಕನಿಂದ ಮಾರಣಾಂತಿಕ ಹಲ್ಲೆ; ನೋಡುತ್ತಾ ನಿಂತಿದ್ದ ಜನ!

ಬಸ್ ಅಡ್ಡಗಟ್ಟಿದ ಪಲ್ಸರ್ ಬೈಕ್ ನಲ್ಲಿದ್ದ ಮೂವರು ಯುವಕರು ಚಾಲಕರೊಬ್ಬರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕಿನ ಬೋಳನಹಳ್ಳಿಯಲ್ಲಿ ಜರುಗಿದೆ. ಹೆಲ್ಲೆಗೊಳಗಾದ ಪಿರಿಯಾಪಟ್ಟಣ ಡಿಪೋದ ಚಾಲಕ ವೆಂಕಟೇಶ್ ಅವರನ್ನು ಮೈಸೂರಿನ ಗೊಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಿರಿಯಾಪಟ್ಟಣ ಘಟಕಕ್ಕೆ ಸೇರಿದ KSRTC ಬಸ್ ನಂ KA-45 F 007 ರೂಟ್ ನಂ 59/60 ಬಸ್‌ ಮೈಸೂರು ಕಡೆಯಿಂದ ಹಾಸನ ಕಡೆಗೆ ಹುಣಸೂರು ತಾಲೂಕು ಹೊಸ ರಾಮೇನಹಳ್ಳಿ ಬಳಿ ಹೋಗುತ್ತಿದ್ದಾಗ ರಸ್ತೆ ಮಧ್ಯಕ್ಕೆ ಹಸುಗಳು ಬಂದಿದ್ದರಿಂದ ಬಸ್ ಅನ್ನು ಸ್ವಲ್ಪ ಬಲಭಾಗಕ್ಕೆ ಚಾಲಕ ವೆಂಕಟೇಶ್ ತಿರಿಗಿಸಿದ್ದಾರೆ.

ಅದೇ ವೇಳೆ ರಸ್ತೆಯಲ್ಲಿ ಕೆಆರ್ ನಗರ ಕಡೆಯಿಂದ ಮೈಸೂರು ಕಡೆಗೆ ಪಲ್ಸರ್ ಬೈಕ್ ನಂಬರ್ KA 09 0939 ರಲ್ಲಿ ಹೋಗುತ್ತಿದ್ದ ಮೂವರು ಯುವಕರು ಬಸ್‌ ಚಾಲಕ ಡಿಕ್ಕಿ ಹೊಡೆಯಲು ಬಂದಿದ್ದಾರೆಂದು ಬಸ್ಸನ್ನು ಅಡ್ಡಗಟ್ಟಿ ಚಾಲಕ-ನಿರ್ವಾಹಕರ ಜೊತೆ ಜಗಳ ತೆಗೆದ ಗಲಾಟೆ ಮಾಡಿದ್ದಾರೆ. ಮೂವರ ಪೈಕಿ ಒರ್ವ ಒಬ್ಬ ಯುವಕ ತನ್ನ ಬಳಿ ಇಟ್ಟುಕೊಂಡಿದ್ದ ಚಾಕುವಿನಿಂದ ಚಾಲಕ ವೆಂಕಟೇಶ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಗಲಾಟೆ ಕಂಡ ಜನರ ಜನಸಂದಣಿ ಹೆಚ್ಚಾಗುತಗತಿದ್ದಂತೆ ಅಲ್ಲಿಂದ ಮೂರು ಯುವಕರು ತಮ್ಮ ಬೈಕ್ ನಲ್ಲಿ ಮೈಸೂರು ಕಡೆಗೆ ಪರಾರಿಯಾಗಿದ್ದಾರೆ. ಬಸ್ ನಿರ್ವಾಹಕ ಹರೀಶ್ ರವರು ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಬಿಳಿಕೆರೆ ಪೋಲೀಸರು ತಿಳಿಸಿದ್ದಾರೆ.

ಚಾಲಕ ವೆಂಕಟೇಶ್‌ ಅವರನ್ನು ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಡಿವೈಎಸ್ ಪಿ ರವಿಪ್ರಸಾದ್ ತಿಳಿಸಿದ್ದಾರೆ.

ಚಾಲಕನಿಗೆ ಚಾಕುವಿನಿಂದ ಇರಿಯುತ್ತಿರುವ ದೃಷ್ಯವನ್ನು ವಿಡಿಯೋ ಮಾಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಘಟನಾ ಸ್ಥಳದಲ್ಲಿ ಹಲವಾರು ಮಂದಿ ಗ್ರಾಮಸ್ಥರಿದ್ದರೂ ಯಾರೊಬ್ಬರೂ ಸಹ ಹಲ್ಲೆಯನ್ನು ತಡೆಯಲು ಮುಂದಾಗಿಲ್ಲ.

ಇದನ್ನೂ ಓದಿ: ಶಿವಮೊಗ್ಗ ಸ್ಪೋಟ : ಐವರ ದುರ್ಮರಣ – ಮೃತರ ಗುರುತು ಪತ್ತೆ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights