ಅಮಿತ್‌ ಶಾ ವಿರುದ್ಧ ಟಿಎಂಸಿ ಸಂಸದರ ಮಾನನಷ್ಟ ಮೊಕದಮೆ; ಗೃಹ ಸಚಿವರಿಗೆ ಸಮನ್ಸ್‌ ನೀಡಿದ ಕೋರ್ಟ್‌!

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ದ ಮಾನನಷ್ಟ ಮೊಕದಮೆ ಹೂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯವು ಅಮಿತ್‌ ಶಾಗೆ ಸಮನ್ಸ್‌ ನೀಡಿದ್ದು, ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದೆ.

2018ರ ಆಗಸ್ಟ್‌ 11ರಂದು ನಡೆದ ಬಿಜೆಪಿ ರ್ಯಾಲಿಯಲ್ಲಿ ಅಭಿಷೇಕ್‌ ಬ್ಯಾನರ್ಜಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಟಿಎಂಸಿ ನಾಯಕರು ಸರಣಿ ಭ್ರಷ್ಟಾಚಾರ ನಡೆಸಿದ್ದಾರೆ. ನಾರದ, ಶಾರದಾ, ರೋಸ್ ವ್ಯಾಲಿ, ಸಿಂಡಿಕೇಟ್‌ ಭ್ರಷ್ಟಾಚಾರವನ್ನು ಟಿಎಂಸಿ ನಡೆಸಿದೆ. ಮಮತಾ ಬ್ಯಾನರ್ಜಿ ಅವರ ಸೋದರಳಿಯನೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಟಿಎಂಸಿಗರದ್ದು ಸರಣಿ ಭ್ರಷ್ಟಾಚಾರ ಎಂದು ಆರೋಪಿಸಿದ್ದರು.

ಅಲ್ಲದೆ, ‘ಬಂಗಾಳದ ಹಳ್ಳಿಗಳ ನಿವಾಸಿಗಳೇ, ನಿಮ್ಮ ಹಳ್ಳಿಗೆ ಹಣ ತಲುಪಿದೆಯೇ? ದಯವಿಟ್ಟು ಜೋರಾಗಿ ಕೇಳಿ ಆ ಹಣ ಎಲ್ಲಿ ಹೋಯಿತು? ಪ್ರಧಾನಿ ಮೋದಿ ಕಳಿಸಿದ್ದ 3,59,000 ಕೋಟಿ ರೂ.ಗಳು ಎಲ್ಲಿ ಹೋಯಿತು? ಇದನ್ನು ಟಿಎಂಸಿ ನಾಯಕಿ ಅವರ ಸೋದರಳಿಯ ಮತ್ತು ಸಿಂಡಿಕೇಟ್ ಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಅಮಿತ್‌ ಶಾ ಅವರ ಈ ಅರೋಪಗಳ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಅವರು 2018ರ ಆಗಸ್ಟ್ 28ರಂದು ಅಮಿತ್‌ ಶಾ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಮೊಕದಮೆಯ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯವು ಫೆಬ್ರವರಿ 22ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

Read Also: ಬಿಜೆಪಿ ಕಟ್-ಮನಿ ಸಂಸ್ಕೃತಿಯನ್ನು ಕೊನೆಗೊಳಿಸುತ್ತದೆ; ಅಕ್ರಮ ವಲಸಿಗರನ್ನು ತಡೆಯುತ್ತದೆ: ಅಮಿತ್‌ ಶಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights