ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಜಗ್ಗೇಶ್ ಹೇಳಿದ್ದೇನು? : ಪಟ್ಟು ಬಿಡದೆ ಕ್ಷಮೆ ಕೇಳಿಸಿದ ಫ್ಯಾನ್ಸ್!

ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ವಾರ್ ಸೃಷ್ಟಿಸಲಾಗುತ್ತಿದಿಯಾ ಅನ್ನೋ ಅನುಮಾನ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕೀಳಾಗಿ ನಟ ಜಗ್ಗೇಶ್ ಮಾತನಾಡಿದ್ದಾರೆ ಎಂದು ಆರೋಪಿಸಿ ತೋತಾಪುರಿ ಸೆಟ್ ನಲ್ಲಿ ನಟ ದರ್ಶನ್ ಅಭಿಮಾನಿಗಳು ನುಗ್ಗಿ ಪ್ರತಿಭಟನೆ ಮಾಡಿದ್ದಾರೆ.

ಮೈಸೂರಿನ ಟಿ ನರಸೀಪುರದಲ್ಲಿ ನಡೆಯುತ್ತಿದ್ದ ತೋತಾಪುರಿ ಶೂಟಿಂಗ್ ಗೆ ನುಗ್ಗಿದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಜಗ್ಗೇಶ್ ವಿರುದ್ಧವಾಗಿ ಘೋಷಣೆ ಕೂಗಿ, ದರ್ಶನ್ ಅವರ ಬಳಿ ಕ್ಷಮೆ ಕೇಳಬೇಕು. ಒಬ್ಬ ಹಿರಿಯ ನಟರಾಗಿ ನೀವು ಹೇಗಿರಬೇಕು ಎಂದು ಅಭಿಮಾನಿಗಳು ಜಗ್ಗೇಶ್ ಅವರನ್ನು ಕೇಳಿದ್ದಾರೆ. ನಟ ದರ್ಶನ್ ಗೂ ಕರೆ ಮಾಡಲು ನಟ ಜಗ್ಗೇಶ್ ಯತ್ನಿಸಿದ್ದಾರೆ.

ಅಭಿಮಾನಿಗಳ ಒತ್ತಾಯಕ್ಕೆ ಜಗ್ಗೇಶ್ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್, “ ನನ್ನ ಮತ್ತು ದರ್ಶನ್ ಮಧ್ಯೆ ತಂದಿಡುವ ಕೆಲಸ ಮಾಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ರಾಜಕೀಯ ಇದೆ. ಪಿತೂರಿ ಮಾಡಿದ್ದಾರೆ. ನಾನು ದರ್ಶನ್ ಬಗ್ಗೆ ಆ ರೀತಿ ಮಾತನಾಡಲೇ ಇಲ್ಲ. ನಾನು ಒಂದು ಪತ್ರಿಕೆಯ ಬಗ್ಗೆ ಮಾತನಾಡಿದೆ. ಈ ವಿಚಾರವನ್ನು ಒಟ್ಟುಕೊಂಡು ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. ನನಗೆ ಇದಕ್ಕೂ ಸಂಬಂಧವಿಲ್ಲ, ಇಂಡಸ್ಟ್ರೀಯಲ್ಲಿ ದೊಡ್ಡ ರಾಜಕೀಯ ನಡೆಯುತ್ತಿದೆ” ಎಂದು ದರ್ಶನ್ ಅಭಿಮಾನಿಗಳಿಗೆ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights