ನಿರ್ಮಾಣ ಹಂತದ ಫ್ಲೈಓವರ್ ವಾಹನಗಳ ಮೇಲೆ ಕುಸಿದ ವೀಡಿಯೋ ಹೈದರಾಬಾದ್‌ನದ್ದಾ?

ಹೈದರಾಬಾದ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಬಾಲನಗರ-ಜೀಡಿಮೆಟ್ಲಾ ಫ್ಲೈಓವರ್ ಚಲಿಸುತ್ತಿದ್ದ ವಾಹನಗಳ ಮೇಲೆ ಕುಸಿದಿದೆ ಎಂದು ಕೆಲವರು ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ನಿಮಿಷದ ವೀಡಿಯೋದಲ್ಲಿ ಸಾಲುಗಟ್ಟಿ ನಿಂತ ವಾಹನಗಳ ಮೇಲೆ ಫ್ಲೈಓವರ್ ಕುಸಿದಿದ್ದು, ಜನ ಚಾಲಕರು ಹಾಗೂ ಕಾರುಗಳಲ್ಲಿರುವವರನ್ನು ರಕ್ಷಣೆ ಮುಂದಾಗಿದ್ದಾರೆ. 

ಆದರೆ ಈ ವೀಡಿಯೋ ಹೈದರಾಬಾದ್‌ನಿಂದ ಬಂದಿದ್ದಲ್ಲ. ಇದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕುಸಿದ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ನ 2018 ರಲ್ಲಿ ತೆಗೆದ ವೀಡಿಯೊವಾಗಿದೆ. 2018 ರಲ್ಲಿ ಹಲವಾರು ಸುದ್ದಿ ವರದಿಗಳಿಂದ ಈ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ.

ಎನ್‌ಡಿಟಿವಿ ಪ್ರಕಟಿಸಿದ ವರದಿಯ ಪ್ರಕಾರ, 2018 ರ ಮೇ 16 ರಂದು ವಾರಣಾಸಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನ ಎರಡು ಸ್ತಂಭಗಳು ಕುಸಿದುಬಿದ್ದಿವೆ.

ಹಲವಾರು ಕಾರುಗಳು ಮತ್ತು ಸ್ಥಳೀಯ ಬಸ್ ಕಾಂಕ್ರೀಟ್ ಕಂಬಗಳ ಕೆಳಗೆ ಪುಡಿಪುಡಿಯಾಗಿ ಸುಮಾರು 19 ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. “ದಿ ಕ್ವಿಂಟ್” ಘಟನೆಯ ವೀಡಿಯೊ ವರದಿಯನ್ನು ಕೆಳಗೆ ನೋಡಬಹುದು.

ಈ ಘಟನೆಗೆ ಸಂಬಂಧಿಸಿದಂತೆ ಯುಪಿ ಬ್ರಿಡ್ಜ್ ಕಾರ್ಪೊರೇಶನ್‌ನ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಜುಲೈ 28, 2018 ರಂದು “ದಿ ಟೈಮ್ಸ್ ಆಫ್ ಇಂಡಿಯಾ” ವರದಿ ಮಾಡಿದೆ.

ಫೆಬ್ರವರಿ 24 ರಂದು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ತೆಲಂಗಾಣ ಪೊಲೀಸ್, ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ ಮತ್ತು ತೆಲಂಗಾಣ ನಗರ ಅಭಿವೃದ್ಧಿ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ಗಳು ಹೈದರಾಬಾದ್ನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಖಚಿತಪಡಿಸಲು ಟ್ವೀಟ್ ಮಾಡಿದೆ.

ಅಲ್ಲದೆ, ಉತ್ತರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕುಸಿದಿರುವ ಯಾವುದೇ ಇತ್ತೀಚಿನ ವರದಿಯನ್ನು ಕಂಡುಬಂದಿಲ್ಲ. ಆದ್ದರಿಂದ ಪ್ರಶ್ನೆಯಲ್ಲಿರುವ ವೀಡಿಯೊ ಸುಮಾರು ಮೂರು ವರ್ಷ ಹಳೆಯದು ಮತ್ತು ಇತ್ತೀಚಿನದಲ್ಲ ಎಂಬುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights