ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರೀಯ ಧ್ವಜ ನಿಷೇಧಿಸಲಾಗಿದಿಯಾ?

ಗುಜರಾತ್‌ನ ಅಹಮದಾಬಾದ್‌ನ ಮೊಟೆರಾದಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಯಿತು. ಫೆಬ್ರವರಿ 24 ರಂದು ಇದನ್ನು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಉದ್ಘಾಟಿಸಿದರು.

ಪಿಎಂ ಮೋದಿಯ ಕ್ರೀಡಾಂಗಣ ಎಂದು ಮರುನಾಮಕರಣ ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ. ಹಲವಾರು ರಾಜಕೀಯ ಮಾಡುತ್ತಿದ್ದಾರೆಂದು ದೂರಿದ್ದಾರೆ. ಉದ್ಘಾಟನಾ ದಿನದಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು.

ಈ ವೇಳೆ ಕ್ರೀಡಾಂಗಣದೊಳಗೆ ಭಾರತೀಯ ರಾಷ್ಟ್ರಧ್ವಜವನ್ನು ತೆಗೆದುಕೊಳ್ಳಲು ಅನುಮತಿ ಇಲ್ಲ ಎಂದು ಆರೋಪಿಸಿರುವ ಕ್ರಿಕೆಟ್ ಅಭಿಮಾನಿಗಳ ಗುಂಪನ್ನು ತೋರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಧಾನ ಮಂತ್ರಿಯ ಹೆಸರಿನ ಕ್ರೀಡಾಂಗಣದಲ್ಲಿ ತ್ರಿವರ್ಣವನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

“ಮೋದಿಯ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜದೊಂದಿಗೆ ಪ್ರವೇಶ ನಿಷೇಧಿಸಿದ ನಂತರ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ …” ಎಂದು ಹಿಂದಿ ಭಾಷೆಯಲ್ಲಿರುವ ಒಂದು ಶೀರ್ಷಿಕೆಗೆ ಅನುವಾದಿಸಲಾಗಿದೆ.

ಆದರೆ ಈ ವೈರಲ್ ಹೇಳಿಕೆ ತಪ್ಪಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದೊಳಗೆ ತ್ರಿವರ್ಣಕ್ಕೆ ನಿಷೇಧ ಎನ್ನುವ ಯಾವುದೇ ಆದೇಶವಿಲ್ಲ ಎಂದು ಗುಜರಾತ್ ಕ್ರಿಕೆಟ್ ಸಂಘ ನಮಗೆ ದೃಢಪಡಿಸಿದೆ. ಫೆಬ್ರವರಿ 24 ರ ಪಂದ್ಯದ ಸಮಯದಲ್ಲಿಯೂ ಧ್ವಜಗಳನ್ನು ಅನುಮತಿಸಲಾಗಿದೆ.

ವರದಿಯ ಪ್ರಕಾರ, ಫೆಬ್ರವರಿ 24 ರಂದು ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಆಗಮಿಸಿದ ಕ್ರಿಕೆಟ್ ಅಭಿಮಾನಿಗಳ ಗುಂಪು ಪ್ರವೇಶ ನಿರಾಕರಿಸಿದ ಕಾರಣ ನಿರಾಶೆಗೊಂಡಿದೆ. ಆದಾಗ್ಯೂ, ವರದಿಯು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಈ ವೀಡಿಯೊವನ್ನು ಚಿತ್ರೀಕರಿಸಿದ ಸಮಯದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಜರಿದ್ದ ವಿಟಿವಿಯ ಕ್ರೀಡಾ ವರದಿಗಾರ ನರೇಂದ್ರ ರಾಥೋಡ್, ” ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತೀಯ ಧ್ವಜಗಳನ್ನು ಕೆಲವು ಭದ್ರತಾ ಅಧಿಕಾರಿಗಳು ಆರಂಭದಲ್ಲಿ ನಿಲ್ಲಿಸಿದ್ದರೂ, ನಂತರ ಅವುಗಳನ್ನು ಒಳಗೆ ಅನುಮತಿಸಲಾಯಿತು” ಎಂದಿದ್ದಾರೆ.

“ಮುಖ್ಯ ದ್ವಾರದಲ್ಲಿದ್ದ ಕೆಲವು ಭದ್ರತಾ ಅಧಿಕಾರಿಗಳು ಭಾರತೀಯ ಧ್ವಜಗಳನ್ನು ಕ್ರೀಡಾಂಗಣಕ್ಕೆ ಪ್ರವೇಶಿಸುವುದನ್ನು ನಿರಾಕರಿಸಿದ ನಂತರ ಮೊಟೆರಾ ಕ್ರೀಡಾಂಗಣದ ಮುಂದೆ ಸಣ್ಣದೊಂದು ಆಂದೋಲನ ನಡೆದಿರುವುದು ನಿಜ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಅವರು ಇದನ್ನು ಮಾಡಿದರು. ನಂತರ, ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದರು ಮತ್ತು ಧ್ವಜವನ್ನು ಒಳಗೆ ತೆಗೆದುಕೊಳ್ಳಬಹುದಾದರೂ, ಧ್ವಜ ಕಂಬಗಳು / ಕಡ್ಡಿಗಳನ್ನು ಹೊರಗೆ ಇಡಬೇಕು ಎಂದು ಸ್ಪಷ್ಟಪಡಿಸಿದರು. ಆದ್ದರಿಂದ ಸಮಸ್ಯೆಯನ್ನು ಪರಿಹರಿಸಲಾಗಿದೆ, ಮತ್ತು ಎಲ್ಲರೂ ಪಂದ್ಯಕ್ಕಾಗಿ ತಮ್ಮ ಧ್ವಜಗಳನ್ನು ಒಳಗೆ ಸಾಗಿಸಿದರು “ಎಂದು ರಾಥೋಡ್ ಸ್ಪಷ್ಟಪಡಿಸಿದರು.

ಆದ್ದರಿಂದ, ಅಹಮದಾಬಾದ್‌ನಲ್ಲಿ ಹೊಸದಾಗಿ ಉದ್ಘಾಟನೆಯಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ನಿಷೇಧಿಸಲಾಗಿದೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights