ಮಿಲಿಟರಿ ಕ್ಯಾಂಪ್‌ನಲ್ಲಿ ಸ್ಫೋಟ : 20 ಮಂದಿ ಸಾವು :600ಕ್ಕೂ ಹೆಚ್ಚು ಮಂದಿಗೆ ಗಾಯ!

ಈಕ್ವಟೋರಿಯಲ್ ಗಿನಿಯ ಮಿಲಿಟರಿ ಕ್ಯಾಂಪ್‌ನಲ್ಲಿ ಆತಕಸ್ಮಿಕವಾಗಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದು 600 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹೌದು… ಈಕ್ವಟೋರಿಯಲ್ ಗಿನಿಯ ಮಿಲಿಟರಿ ಕ್ಯಾಂಪ್ ಮತ್ತು ನೆರೆಹೊರೆಯ ವಸತಿ ಪ್ರದೇಶಗಳ ಮೇಲೆ ಸ್ಪೋಟಕ ಸ್ಪೋಟಗೊಂಡಿದೆ. ಬಾಟಾದ ಎನ್‌ಕೋವಾ ಎನ್ಟೋಮಾ ಶಿಬಿರದ ಸುತ್ತಲೂ ವಿಶಾಲವಾದ ಕಟ್ಟಡಗಳು ಸುಟ್ಟು ಕರಕಲಾಗಿವೆ. ಕಪ್ಪು ಹೊಗೆ ಆಕಾಶದಲ್ಲಿ ದಟ್ಟವಾದ ಹರಡಿದೆ. ಕೆಲವರ ಮೃತ ದೇಶ ಪತ್ತೆಯಾಗಿದ್ದಿ ಅನೇಕ ನಿವಾಸಿಗಳನ್ನು ಇನ್ನೂ ಭಗ್ನಾವಶೇಷದಡಿಯಲ್ಲಿ ಸಿಲುಕಿಗೊಂಡಿದ್ದಾರೆ. ಕಟ್ಡಗಳು ಧರೆಗೆ ಉರುಳಿವೆ.

ಮಿಲಿಟರಿ ಕ್ಯಾಂಪ್‌ನಲ್ಲಿ ಸೈನಿಕರು ಸಂಗ್ರಹಿಸಿದ್ದ ಸ್ಫೋಟಕಗಳಿಗೆ ಸ್ಥಳೀಯ ರೈತರು ಬೆಂಕಿಯನ್ನು ಹೊತ್ತಿಸಿದ ಕಾರಣ ಸ್ಪೋಟ ಸಂಭವಿಸಿದೆ. ಸೈನಿಕರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಅಧ್ಯಕ್ಷ ಟಿಯೊಡೊರೊ ಒಬಿಯಾಂಗ್ ನ್ಗುಮಾ ಹೇಳಿದ್ದಾರೆ.

ರಕ್ಷಣಾ ಸಚಿವಾಲಯವು ಸಾವಿನ ಸಂಖ್ಯೆಯನ್ನು ಕನಿಷ್ಠ 20 ರಷ್ಟಿದೆ, ಸುಮಾರು 600 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights