ಬಿಬಿಎಂಪಿ ಕಚೇರಿಯಲ್ಲೇ ಅರಣ್ಯಾಧಿಕಾರಿ ಮೇಲೆ ಗುತ್ತಿಗೆದಾರರಿಂದ ಹಲ್ಲೆ!

ಬಿಬಿಎಂಪಿ ಕಚೇರಿಯಲ್ಲೇ ದಾಸರಳ್ಳಿ ವಲಯದ ಅರಣ್ಯಾಧಿಕಾರಿ ಮೇಲೆ ಗುತ್ತಿಗೆದಾರರು ಹಲ್ಲೆ ಮಾಡಿದ ಘಟನೆ ನಡೆದಿದೆ.

ಅರಣ್ಯಾಧಿಕಾರಿ ರಾಜಪ್ಪ ಎಂಬುವವರ ಮೇಲೆ ಗುತ್ತಿಗೆದಾರರಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾದ ಶ್ರೀನಿವಾಸ್, ಚನ್ನಪ್ಪ, ಗೋವಿಂದಯ್ಯ ಅವರ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅರಣ್ಯ ವಿಭಾಗದ ಅಧಿಕಾರಿ ಮತ್ತು ಗುತ್ತಿಗೆದಾರರ ನಡುವೆ ಮಾರಾಮಾರಿ ನಡೆದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾ.4ರಂದು ಕರ್ತವ್ಯ ನಿರ್ವಹಿಸುವ ವೇಳೆ ಕಚೇರಿಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿಯ ಮೂವರು ಗುತ್ತಿಗೆದಾರರ ವಿರುದ್ಧ ಉಪ ವಲಯ ಅರಣ್ಯಾಧಿಕಾರಿ ಕೆ.ಎನ್‌ ರಾಜಪ್ಪ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮೂವರು ಗುತ್ತಿಗೆದಾರ ಶ್ರೀನಿವಾ ಕೂಡ ಪ್ರತಿದೂರು ಕೊಟ್ಟಿದ್ದಾರೆ. ತಮ್ಮ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ಇಬ್ಬರಿಮದಲೂ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ಧಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights