ಛತ್ತೀಸ್‌ಘಡ ಹೊಸ ದಾಖಲೆ; ನರೇಗಾ ಅಡಿಯಲ್ಲಿ 16.07 ಕೋಟಿ ಉದ್ಯೋಗ ನೀಡಿದೆ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಅಡಿಯಲ್ಲಿ ಉದ್ಯೋಗ ನೀಡುವಲ್ಲಿ ದೇಶದಲ್ಲಿಯೇ ಛತ್ತೀಸ್‌ಘಡ ರಾಜ್ಯವು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಸಕ್ತ 2020-21ರ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕಿದ್ದ ಗುರಿಯನ್ನೂ ಮೀರಿಸಿ, ಶೇಕಡಾ 107 ಕ್ಕಿಂತ ಹೆಚ್ಚು ಉದ್ಯೋಗವನ್ನು ಒದಗಿಸಿದೆ.

ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಛತ್ತೀಸ್‌ಘಡವು 15 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿತ್ತು. ಆದರೆ, ಇದುವರೆಗೂ 16.07 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.

“ಪ್ರಸಕ್ತ ಹಣಕಾಸು ವರ್ಷದಲ್ಲಿ MGNREGA ಅಡಿಯಲ್ಲಿ ಅತಿ ಹೆಚ್ಚು ಮಾನವ ದಿನಗಳ ಉದ್ಯೋಗ ನೀಡುವ ಹೊಸ ದಾಖಲೆಯನ್ನು ಛತ್ತೀಸ್‌ಘಡ ದಾಖಲಿಸಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ದೃಢವಾಗಿರಿಸುವುದರಲ್ಲಿ ಈ ಸಾಧನೆಯು ಮಹತ್ವದ ಪಾತ್ರ ವಹಿಸಿದೆ. ರಾಜ್ಯ ಇದುವರೆಗೆ 107 ಪ್ರತಿಶತದಷ್ಟು ಗುರಿಯನ್ನು ಸಾಧಿಸಿದ್ದು ಅಗ್ರಸ್ಥಾನದಲ್ಲಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ 105 ಪ್ರತಿಶತದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅಸ್ಸಾಂ ಮತ್ತು ಬಿಹಾರ ತಲಾ 104 ಪ್ರತಿಶತ ಮತ್ತು ಒಡಿಶಾ ನಿಗದಿತ ಗುರಿಯ ಶೇಕಡಾ 103 ರಷ್ಟಿದೆ.

ಇದನ್ನೂ ಓದಿ: ಇಂಧನ ಬೆಲೆ ಕಡಿತ; ವಿದ್ಯಾರ್ಥಿಗಳ ಸಾಲ ಮನ್ನ; 500 ಅಂಶಗಳ DMK ಪ್ರಣಾಳಿಕೆ ಬಿಡುಗಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights