ಬೆಂಗಳೂರಿನಲ್ಲಿ ಭಾರೀ ಮಳೆ : ವರುಣನ ಅರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಸುಸ್ತೋ ಸುಸ್ತು…!

ಕಳೆದ ಮೂರು ನಾಲ್ಕು ದಿನದಿಂದ ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಬೆಂಗಳೂರಿನ ಕಥೆಯಂತೂ ಹೇಳೋ ಹಾಗೇ ಇಲ್ಲ. ವರುಣನ ಅರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಸುಸ್ತಾಗಿದ್ದಾರೆ. ರಸ್ತೆಗಳು ಹಳ್ಳಗಳಾಗಿ ಮಾರ್ಪಟ್ಟಿವೆ. ಮನೆಗಳು ನೀರು ತುಂಬಿ ಹೋಗಿವೆ. ತಗ್ಗು ರಸ್ತೆಗಳಲ್ಲಿ ಜನ ವಾಹನ ಚಾಲನೆ ಮಾಡಲು ಸಾಧ್ಯವಾಗದೇ ಹೈರಾಣಾಗಿ ಹೋಗಿದ್ದಾರೆ.

ಹೌದು… ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ನಗರದಲ್ಲಿ ಮಳೆಯಾಗುತ್ತಿದೆ. ಕಳೆದೆರೆಡು ದಿನದಿಂದ ಸುರಿಯುತ್ತಿದ್ದ ಮಳೆಗೆ ಸಮಯ ನಿಗಧಿಯಾದಂತೆ ಕಾಣುತ್ತಿದ್ದಾರೂ ಇಂದು ಸಂಜೆ ಸುರಿದ ಮಳೆಗೆ ಬ್ರೇಕೇ ಇರಲಿಲ್ಲ. ನಗರದಾದ್ಯಂತ ಭಾರೀ ಮಳೆ ಬೆಂಬಿಡದೇ ಸುರಿಯುತ್ತಿದೆ. ನಿರಂತರ ಮಳೆಗೆ ಜನ ಬೇಸತ್ತು ಹೋಗಿದ್ದಾರೆ. ಮನೆ ಮುಂದೆ ನಿಲ್ಲಿಸಿ ವಾಹನಗಳು ಒಂದು ಕಡೆ ಇರಲಿ ರಸ್ತೆ ಮೇಲೆ ಚಲಿಸುವ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.

ಬಸವನಗುಡಿ, ಕೆಂಗೇರಿ, ಹೊಸಕೇರೆಹಳ್ಳಿ ಹೈದರಾಬಾದ್ ಪ್ರವಾಹವನ್ನು ಶಪಿಸುತ್ತಿವೆ. ನೀರು ತುಂಬಿದ ಮನೆಗಳಲ್ಲಿ ಜನ ಕರೆಂಟೂ ಇಲ್ದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮಳೆರಾಯನ ಮುನಿಸಿಗೆ ಬಲಿಯಾದ ಸಿಲಿಕಾನ್ ಸಿಟಿಯಲ್ಲಿ ಶನಿವಾರವೂ ಭಾರೀ ಮಳೆಯ ಬಗ್ಗೆ ಹವಮಾನ ಇಲಾಖೆ ಮನ್ಸೂಚನೆ ನೀಡಿದೆ.

ಮೆಜೆಸ್ಟಿಕ್, ಮಲ್ಲೇಶ್ವಂ, ಕತ್ರಿಗುಪ್ಪೆ ಯಲ್ಲಿ  ಗುಡುಗು ಸಮೇತ ಬಾರೀ ಮಳೆಯಾಗಿದೆ. ವಿವಿಪುರ ನಲ್ಲಿ 71 ಮಿ.ಮೀ ಮಳೆಯಾಗಿದ್ದು, ಉತ್ತರಹಳ್ಳಿಯಲ್ಲಿ 87 ಮಿ.ಮೀ, ವಿದ್ಯಾಪೀಠ 95 ಮಿ.ಮೀ, ಬಸವನಗುಡಿ 81 ಮಿ.ಮೀ, ಆರ್ ಆರ್ ನಗರ 102 ಮಿ.ಮೀ, ಕೆಂಗೇರಿ 103 ಮಿ.ಮೀ, ಕೋಣಕುಂಟೆ 83 ಮಿ.ಮೀ, ಕುಮಾರಸ್ವಾಮಿ ಲೇಔಟ್ ನಲ್ಲಿ 79 ಮಿ.ಮೀ ಮಳೆಯಾಗಿದೆ.

ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನವೇ ಅಸ್ತವ್ಯಸ್ಥವಾಗಿದೆ. ಇಂದು ಸಂಜೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಜನ ತತ್ತರಿಸಿ ಹೋಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights