ಸಿಡಿ ಲೇಡಿ ಟ್ರಾವೆಲ್ ಹಿಸ್ಟರಿ : ಸಿಡಿ ಅಪ್ಲೋಡ್ ಬಳಿಕ ಯುವತಿ ಹೋಗಿದ್ದೆಲ್ಲಿಗೆ? ಯಾರೊಂದಿಗೆ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಚುರುಕಾಗಿದ್ದು ನಾನಾ ವಿಚಾರಗಳು ಬಯಲಾಗುತ್ತಿವೆ. ಸಿಡಿ ಲೇಡಿ ಗೆಳತಿ ಮಾಹಿತಿ ಹಿನ್ನೆಲೆಯಲ್ಲಿ ಸಿಡಿ ಯುವತಿ ಟ್ರಾವೆಲ್ ಹಿಸ್ಟರಿ ಬಯಲಾಗಿದೆ.
ಹೌದು.. ಮಾರ್ಚ್ 2 ರಂದು ಸಿಡಿ ಬಿಡುಗಡೆಯಾಗುತ್ತಿದ್ದಂತೆ ಬೆಂಗಳೂರಿನಿಂದ ಗೋವಾಕ್ಕೆ ಶಿಫ್ಟ್ ಆಗಿದ್ದ ಯುವತಿ ಅಲ್ಲಿಂದಲೇ ಎಲ್ಲಾ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಿದ್ದಾಳೆ ಎನ್ನಲಾಗುತ್ತಿದೆ. ಯುವತಿ ಜೊತೆ ಕೆಲ ವರ್ಷಗಳಿಂದ ಗೆಳೆಯನಾಗಿದ್ದವನು ಗೋವಾಕ್ಕೆ ಹೋಗಿ ಅಲ್ಲಿ ಮೂರು-ನಾಲ್ಕು ದಿನಗಳಿಂದ ಹೊರಬಾರದಂತೆ ಉಳಿದುಕೊಂಡಿದ್ದರು ಎನ್ನಲಾಗುತ್ತಿದೆ.
ಬೆಂಗಳೂರಿನಿಂದ ಹೊರಡುವಾಗಲೂ ಸಿಡಿ ಯುವತಿ ತನ್ನ ಗೆಳತಿಯಿಂದಲೇ ರೂಮ್ ಬುಕ್ ಮಾಡಿಸಿಕೊಂಡಿದ್ದಳು. ಜೊತೆಗೆ ಯುವತಿ ಗೋವಾ ತೆರಳುವಾಗ ತನ್ನ ಫೋನ್ ಮತ್ತು ಸಿಮ್ ಕಾರ್ಡ್ ಎಲ್ಲವನ್ನು ಬದಲಾಯಿಸಿಕೊಂಡಿದ್ದಾಳೆ. ವಾಟ್ಸಆಪ್ , ವೀಡಿಯೋ ಕಾಲ್ ಮೂಲಕ ಬೆಂಗಳೂರಿನಲ್ಲಿರುವ ಗ್ಯಾಂಗ್ ನೊಂದಿಗೆ ಯುವತಿಯ ಗೆಳೆಯ ಗೋವಾದಿಂದ ಸಂಪರ್ಕದಲ್ಲಿದ್ದನು.
ಅಂದಹಾಗೆ ಯುವತಿ ಗೆಳೆಯ ಬಾಲ್ಕಿ ಮೂಲದವನು. ಈ ವ್ಯಕ್ತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನೇ ಸಿಡಿ ಲೇಡಿಯೊಂದಿಗೆ ಗೋವಾಕ್ಕೆ ತೆರಳಿದ್ದಾನೆ. ಇವರು ಪ್ರತಿನಿತ್ಯ ಬೆಂಗಳೂರಿನಲ್ಲಿರುವ ಟೆಕ್ನಿಕಲ್ ಹ್ಯಾಕರ್ ನಿಂದ ಮಾಹಿತಿ ಪಡೆದಿದ್ದಾರೆ. ಟೆಕ್ನಿಕಲ್ ಹ್ಯಾಕರ್ ಜಾಡು ಹಿಡಿದು ಹೋದಾಗ ಎಸ್ಐಟಿಗೆ ಈ ಎಲ್ಲಾ ವಿಚಾರಗಳು ತಿಳಿದಿವೆ. ಮಾತ್ರವಲ್ಲ ಅವರು ಪ್ರಯಾಣ ಮಾಡಿದ ಸಿಸಿಟಿವಿ ಫೂಟೇಜ್ ಕೂಡ ಎಸ್ಐಟಿಗೆ ಲಭ್ಯವಾಗಿದೆ. ಯುವತಿ ಬಗ್ಗೆ ಇನ್ನಷ್ಟು ಮಾಹಿತಿ ಎಸ್ಐಟಿ ಕಲೆ ಹಾಕಲಾಗುತ್ತಿದೆ.
ಈ ಪ್ರಕರಣದಲ್ಲಿ ತುಮಕೂರು ಪತ್ರಕರ್ತ ಹಾಗೂ ವಿಜಯನಗರದ ವ್ಯಕ್ತಿ ಸಿಡಿ ಬಿಗುಗಡೆಗೆ ಪ್ಲ್ಯಾನ್ ಮಾಡಿದ್ದರು. ಮಾರ್ಚ್ 1ಕ್ಕೆ 12 ಗಂಟೆ ಸುಮಾರಿಗೆ ಮೀಟಿಂಗ್ ಬಳಿಕ ಮಾರ್ಚ್ 2ಕ್ಕೆ ಸಿಡಿ ರಿಲೀಸ್ ಮಾಡಲಾಗಿದೆ ಎಂದು ತನಿಖೆಯಿಂದ ಬಯಲಾಗಿದೆ.

