‘ಬಟ್ಟೆ ಬಿಚ್ಚಲು ಹೇಳಿದವರ್ಯಾರು ಷಡ್ಯಂತ್ರ ಮಾಡೋಕೆ?’ ಸಾಹುಕಾರನಿಗೆ ಡಿಕೆ ಸುರೇಶ್ ಪ್ರಶ್ನೆ!
ಸಿಡಿ ತಯಾರಿಕೆ ಹಿಂದೆ ಮಹಾನಾಯಕನ ಷಡ್ಯಂತ್ರವಿದೆ. ಆ ಮಹಾನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆ ಸುರೇಶ್ ಕಿಡಿ ಕಾರಿದ್ದಾರೆ.
ಸಿಡಿ ಲೇಡಿ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಸಿಡಿ ಯುವತಿ ಪೋಷಕರು ಆರೋಪಿಸುತ್ತಿದ್ದಂತೆ ರಮೇಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ಜಟಾಪಟಿ ತಾರಕಕ್ಕೇರಿದೆ. ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದು ಇಂದು ಬೆಂಗಳೂರಿನಲ್ಲಿ ಡಿಕೆಶಿ ಬೆಂಬಲಿಗರಿಂದ ಪ್ರತಿಭಟನೆ ಮಾಡಲಾಗುತ್ತಿದೆ.
ಇದರ ಬೆನ್ನಲ್ಲೆ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದು, “ಸಿಡಿಯಲ್ಲಿ ಬಟ್ಟೆ ಬಿಚ್ಚಿಲು ಹೇಳಿದವರು ಯಾರ? ಇದು ಸಿಡಿಗಳಿಂದ ಉಳಿದಿರುವ ಸರ್ಕಾರ. ರಮೇಶ್ ಜಾರಕಿಹೊಳಿಗೆ ಬಟ್ಟೆ ಬಿಚ್ಚಲು ಹೇಳಿದವರು ಡಿಕೆ ಶಿವಕುಮಾರಾ? ಎದುರು ಸಿಕ್ಕರೆ ಸರಿಯಾಗೇ ಹೇಳ್ತೀನಿ. ಅವರಿಗಿಂತ ಹತ್ತು ಪಟ್ಟು ಮಾತನಾಡಲು ನಮಗೆ ಬರುತ್ತದೆ. ಇದು ಸರ್ಕಾರದ ವಾಸ್ತಾವಿಕ ಡ್ರಾಮಾ. ಒಬ್ಬ ಮಗಳು ವಯಸ್ಸಿನ ಹೆಣ್ಣುಮಗಳ ನೋವನ್ನು ಸರ್ಕಾರ ಚರ್ಚೆ ಮಾಡುತ್ತಿಲ್ಲ. ಇಂಥ ಕೆಲವನ್ನು ಬೇರೆ ಯಾರೇ ಮಾಡಿದ್ದರೂ ಇಷ್ಟರಲ್ಲಾಗಲೇ ಅವರು ಬಂಧನಕ್ಕೆ ಒಳಗಾಗುತ್ತಾರೆ. ಆದರೆ ರಮೇಶ್ ಅವರನ್ನು ಉಳಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆ ” ಎಂದು ಡಿಕೆ ಶುರೇಶ್ ಕಿಡಿಕಾರಿದರು.
” ಈ ಸರ್ಕಾರ ಅಭಿವೃದ್ಧಿ ಬಗ್ಗೆ ಚಿಂತೆ ಮಾಡುತ್ತಿಲ್ಲ. ನೀರಿಗಾಗಿ ಜನ ಆಹಾಕಾರ ಪಡುತ್ತಿರುವುದು ಚಿಂತೆನೆ ಇಲ್ಲ, ಕೇವಲ ತಮ್ಮ ಅವ್ಯವಹಾರಗಳು ಮತ್ತು ಸಿಡಿ ಬಗ್ಗೆ ಮುಚ್ಚಿಕೊಂಡು ಸರ್ಕಾರ ನಡೆಸುತ್ತಿದೆ. ಯಾರು ಸರ್ಕಾರವನ್ನು ಕಂಟ್ರೋಲ್ ಮಾಡುತ್ತಿದ್ದಾರೆ? ಅವರೇ ಹೇಳಿದ್ದಾರೆ ಸರ್ಕಾರವನ್ನು ಉಳಿಸ್ತೀನಿ ಇಲ್ಲ ತೆಗೆಸ್ತೀನಿ ಅಂತ. ಹೀಗಾಗಿ ಸರ್ಕಾರವೇ ಇವರ ಕೈಗೊಂಬೆ ಮಾಡಿಕೊಂಡಿದ್ದಾರೆ. ಬಟ್ಟೆ ಬಿಚ್ಚಲು ಯಾರ್ ಹೇಳಿದ್ರು. ? ಶಿವಕುಮಾರ್ ಬಟ್ಟೆ ಬಿಚ್ಚಿದ್ನಾ ಷಡ್ಯಂತ್ರ ಮಾಡೋದಕ್ಕೆ? ” ಎಂದು ಕಟೂವಾಗಿ ಪ್ರಶ್ನಿಸಿದ್ದಾರೆ.

