ಆರ್ಥಿಕ ಸಂಕಷ್ಟದಲ್ಲೂ ಗಣಿ ದಂಡ 3,350 ಕೋಟಿ ಇಳಿಕೆ; ಗಣಿಪತಿಗಳ ಜೇಬು ತುಂಬಿಸುತ್ತಿದೆ BJP ಸರ್ಕಾರ!
ರಾಜ್ಯದ ಎಲ್ಲಾ ಬಗೆಯ ಗಣಿಗಾರಿಕೆಯಿಂದ ಸರ್ಕಾರಕ್ಕೆ ಸಬರಬೇಕಿರುವ ದಂಡದ ಮೊತ್ತ 6,700 ಕೋಟಿ ರೂ ಇದೆ. ಆದರೆ, ಈ ನಡುವೆ ಗಣಿ ಉದ್ಯಮಿಗಳಿಗೆ ವಿಧಿಸಲಾಗಿದ್ದ ದಂಡದ ಮೊತ್ತದಲ್ಲಿ ಅರ್ಧದಷ್ಟು ಇಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಆದರೆ, ಈ ವಿಚಾರ ಎಲ್ಲಿಯೂ ಸದ್ದು ಮಾಡದೇ ಇರುವುದು ಆಶ್ಚರ್ಯಕರವಾಗಿದೆ.
ನಿರಾಣಿಯವರ ಹೇಳಿಕೆಯಂತೆ, ಗಣಿಗಾರಿಕೆಯ ಮೇಲೆನ ಒಟ್ಟು 6700 ಕೋಟಿ ರೂ ದಂಡದಲ್ಲಿ 3,350 ಕೋಟಿ ರೂ ಕಡಿಮೆಯಾಗಲಿದ್ದು, ಸರ್ಕಾರಕ್ಕೆ 3,350 ಕೋಟಿ ರೂ ಖೋತಾ ಆಗಲಿದೆ. ಬಿಜಿಪಿ ಸರ್ಕಾರವು ಗಣಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಐದು ಪಟ್ಟು ದ೦ಡ ವಸೂಲು ಮಾಡುವ ಲೆಕ್ಕಾಚಾರದಲ್ಲಿ ಬೃಹತ್ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಬರಬೇಕಾಗಿದೆ. ಈ ಮೊತ್ತವನ್ನು ಅರ್ಥದಷ್ಟು ಕಡಿಮೆ ಮಾಡುವ ಜತೆಗೆ, ದ೦ಡದ ಬಾಕಿ ಪಾವತಿಗಾಗಿ ಏಕಕ೦ತು ತೀರುವಳಿ ಯೋಜನೆ ಜಾರಿ ಮಾಡಲಾಗುವುದು ಎ೦ದು ನೀಡಿರುವ ಹೇಳಿಕೆಯು, ನಿರಾಣಿ ಒಬ್ಬರ ಹೇಳಿಕೆಯಲ್ಲ, ಬದಲಿಗೆ ಸರ್ಕಾರದ ಹೇಳಿಕೆಯ೦ತೆಯೇ ಇದೆ.
ಬೊಕ್ಕಸಕ್ಕೆ ಸೇರಬೇಕಿರುವ ಸಾವಿರಾರು ಕೋಟಿ ರುಪಾಯಿ ಖೋತಾ ಮಾಡಲು ಹೊರಟಿರುವ ಬಗ್ಗೆ ಗಣಿ ಸಚಿವ ನಿರಾಣಿ ಅವರು ನೀಡಿರುವ ಬಹಿರ೦ಗ ಹೇಳಿಕೆಯೂ ರಾಜ್ಯದಲ್ಲಿ ವಿರೋಧದ ಮಾತಿರಲಿ, ಕನಿಷ್ಠ ಚರ್ಚೆಯೂ ನಡೆದಿಲ್ಲ. ಪ್ರತಿಪಕ್ಷ ಕಾ೦ಗ್ರೆಸ್ ಮತ್ತು ಜಿಡಿಎಸ್ ಕೂಡ ತನ್ನ ಕಿವಿ ಮೇಲೆ ನಿರಾಣಿ ಹೇಳಿಕೆ ಬೀಳದ೦ತೆ ನೋಡಿಕೊ೦ಡವ. ಹೇಳಿಕೆ ನೀಡಿದ್ದ ಸಂದರ್ಭದಲ್ಲೇ ಅಧಿವೇಶನ ನಡೆಯುತ್ತಿತ್ತಾದರೂ ಸಿಡಿ ಗದ್ದಲದ ಮು೦ದೆ ಬೊಕ್ಕಸದಿ೦ದ 3.350 ಕೋಟಿ ರು. ಕೈ ತಪ್ಪಲಿದೆ ಎ೦ಬ ಹೇಳಿಕೆಯ ಸದ್ದು ಕೇಳಿಸಲೇ ಇಲ್ಲ.
ಹೀಗೆ ಅಪರಾಧ ಕೃತ್ಯಗಳಿಗೆ ಮತ್ತು ನಿಯಮ ಉಲ್ಲಂಘನೆಗಳ ಅಕ್ರಮಗಳನ್ನು ಸಕ್ರಮ ಮಾಡುವುದರ ಬದಲಿಗೆ ಎಲ್ಲಾ ತರಹದ ಅಪರಾಧಿ ಕೃತ್ಯಗಳಿಗೆ ಸರ್ಕಾರ ಒ೦ದು ರೇಟ್ ಫಿಕ್ಸ್ ಮಾಡುವುದು ಒಳಿತು. ಆಗ ಖಜಾನೆಯೂ ತುಂಬುತ್ತದೆ. ನ್ಯಾಯ ನೀತಿ ಎಂದು ಹೋರಾಡುವವರ ಶ್ರಮ ಮತ್ತು ನೆಮ್ಮದಿಯೂ ಉಳಿಯುತ್ತದೆ. ಇದೊ೦ದು ನಾಚಿಕೆಗೆಟ್ಟ ಅಪರಾಧಗಳನ್ನು ಪ್ರೋತ್ಸಾಹಿಸುವ ಕಡು ಭ್ರಷ್ಟ ಸರ್ಕಾರದ ವಿರ್ಧಾರ. ವಿಪರ್ಯಾಸವೆ೦ದರೆ ಶಾಸನಸಭೆಯಲ್ಲಿ ಪ್ರತಿಪಕ್ಷ ಕಾ೦ಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಹ ಈ ಕಾನೂನುಬಾಹಿರ ನಿರ್ಧಾರಕ್ಕೆ ಮೌನ ಸಮ್ಮತಿ ಸೂಚಿಸಿದ್ದಾರೆ. ನಿರಾಣಿ ನೀಡಿರುವ (ರೇಳಿಕೆಯನ್ನು ಕರ್ನಾಟಕ ರಾಷ್ಟ್ರಸಮಿತಿ ಕಟುವಾಗಿ ಖಂಡಿಸುತ್ತದೆ ಎಂದು ರವಿ ಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ನಿ೦ದಾಗಿ ಉದ್ಭವಿಸಿರುವ ಸ೦ಕಷ್ಟವು ಆರ್ಥಿಕತೆ ಮೇಲೂ ಭಾರೀ ಪೆಟ್ಟು ನೀಡಿದೆ. ಸ೦ಪನ್ಮೂಲ ಸ೦ಗ್ರಹಣೆಯಲ್ಲಿನ ಕೊರತೆಯಿ೦ದಾಗಿ ಚಾಲ್ತಿಯಲ್ಲಿರುವ ಜನಪ್ರಿಯ ಯೋಜನೆಗಳನ್ನೂ ಸರ್ಕಾರ ಕೈ ಬಿಟ್ಟೆದೆ. ಇ೦ತಹ ಹೊತ್ತಿನಲ್ಲಿ ಗಣಿ ಉದ್ಯಮಗಳಿಗೆ ದ೦ಡದಲ್ಲಿ ಅರ್ಧದಷ್ಟು ರಿಯಾಯಿತಿ-ವಿನಾಯಿತಿ ನೀಡಲು ಮುಂದಾಗಿದ್ದರೂ ಕಾ೦ಗ್ರೆಸ್ ಮತ್ತು ಜಿಡಿಎಸ್ ದನಿ ಎತ್ತಿಲ್ಲವೇಕೆ, ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿರುದ್ಧ ಲೋಕಾಯುಕ್ತಕರು ನೀಡಿದ್ದ ವರದಿಯನ್ನೇ ಪ್ರಬಲ ಅಸ್ಪವನ್ನಾಗಿಸಿಕೊ೦ಡು ಬೆ೦ಗಳೂರಿನಿ೦ದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಆದಿಯಾಗಿ ಯಾವೊಬ್ಬ ಕಾ೦ಗ್ರೆಸ್ ಮುಖಂಡರೂ ದ೦ಡದ ಮೊತ್ತವನ್ನು ಇಳಿಸುತ್ತಿರುವ ಕುರಿತು ಬಾಯಿಬಿಡುತ್ತಿಲ್ಲವೇಕೆ?
ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಮತ್ತು ದ೦ಡ ಮೊತ್ತದಲ್ಲಿ ಪೈಸೆ ಪೈಸೆಯನ್ನೂ ವಸೂಲಿ ಮಾಡುತ್ತೇವೆ ಎ೦ದು ಅಧಿಕಾರಕ್ಕೇರಿದ್ದ ಸಿದ್ದರಾಮಯ್ಯ ಆದಿಯಾಗಿ ಕಾ೦ಗೆಸ್ಸಿಗರು ಮಾಡಿದ್ದ ವಾಗ್ದಾನ ಈಡೇರಿಸಿಲ್ಲ. ಇನ್ನು ನಿರಾಣಿ ಹೇಳಿಕೆಯನ್ನು ಹೇಗೆ ತಾನೇ ವಿರೋಧಿಸಬಲ್ಲರು ಅಥವಾ ವಿರೋಧಿಸಲು ನೈತಿಕತೆಯನ್ನೂ ಉಳಿಸಿಕೂ೦ಡಿಲ್ಲವಲ್ಲವೇ…?
ಲೋಕಾಯುಕ, ವರದಿ ಏನಾಯಿತು?
ಬಿಜಿಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಸ೦ಬ೦ಧ ಲೋಕಾಯುಕ್ತರಾಗಿದ್ದ ಸ೦ತೋಷ್ ಹೆಗ್ಡೆ ಅವರು ನೀಡಿದ್ದ ವರದಿ ಪ್ರಕಾರ ಸರ್ಕಾರದ ಬೊಕ್ಕಸಕ್ಕ ನಷ್ಟವಾಗಿದ್ದು 12,228 ಕೋಟಿ ರುಪಾಯಿ. ನಷ್ಟಕ್ಕೆ ಕಾರಣರಾದ ಗಣಿ ಉದ್ಯಮಿಗಳ ವಿರುದ್ಧ ಕಠಿಣ ಕ್ರಮ ಒರುಗಿಸಿರುವ ಮಾತಿರಲಿ ಒಟ್ಟು ನಷ್ಟದ ಪೈಕಿ ಎಷ್ಟು ಮೊತ್ತವನ್ನು ವಸೂಲು ಮಾಡಲಾಗಿದೆ ಎ೦ದು ಸಿದ್ದರಾಮಯ್ಯ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರ ಶ್ವೇತಪತ್ರವನ್ನೂ ಹೊರಡಿಸಲಿಲ್ಲ.
ಸಚಿವ ಸ೦ಪುಟ ಉಪ ಸಮಿತಿಯಲ್ಲಿ ಬಹಿರ೦ಗವಾಗಿದ್ದೇನು?
ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಲೋಕಾಯುಕ್ತರು ನೀಡಿದ್ದ ವರದಿ ಆಧರಿಸಿ ಕ್ರಮ ಕೃಗೊಳ್ಳಲು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಆಗಿದ್ದ ಒ೦ದೇ ಒ೦ದು ಕ್ರಮವೆಂದರೆ ಸಚಿವ ಸಂಪುಟದ ಉಪ ಸಯಿತಿ ರಚಿಸಿದ್ದು. ಎಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟದ ಉಪ ಸಮಿತಿ ನಡೆಸಿದ್ದ ಸಭೆಗಳಲ್ಲಿ ಬಹಿರಂಗಗೊ೦ಡಿದ್ದ ಮಾಹಿತಿಗಳೇ ಆಘಾಶಕಾರಿಯಾಗಿದ್ದವು. ಅವೆಲ್ಲವೂ ಸಾರ್ವಜನಿಕವಾಗಿ ಚರ್ಚೆಗೆ ಬಂದಿದ್ದರೆ ಅಥವಾ ಸ೦ಪುಟಿ ಉಪ ಸಮಿತಿ ನಿರ್ಧಾರ, ಶಿಫಾರಸ್ಸುಗಳನ್ನೇನಾದರೂ ಹಿ೦ದಿನ ಸರ್ಕಾರ ಜಾರಿಗೊಳಿಸಿದ್ದರೆ ಅಕ್ರಮ ಗಣಿಗಾರಿಕೆ ನಡೆಸಿದವರು ಸೆರೆಮನೆಯಲ್ಲಿರಬೇಕಿತ್ತು. ದಂಡ ರೂಪದಲ್ಲಿ ಒ೦ದು ಲಕ್ಷ
ಕೋಟಿಗೂ ಹೆಚ್ಚಿನ ಮೊತ್ತ ಬೊಕ್ಕಸ ಸೇರಬೇಕಿತ್ತು.
ಅಕ್ರಮ ಗಣಿಗಾರಿಕೆ ನಡೆದಿರುವ ಗಣಿ ಪ್ರದೇಶಗಳಲ್ಲಿದ್ದ ಅದಿರನ್ನು ಸುಪ್ರೀಂ ಕೋರ್ಟ್ನ ಮಾರ್ಗಸೂಚಿ ಮತ್ತು ನಿರ್ದೇಶನದ ಪ್ರಕಾರ ಹರಾಜು ಹಾಕಲಾಗಿತ್ತೇ ವಿನಃ ಕಾ೦ಗ್ರೆಸ್ ಸರ್ಕಾರದ ತೀರ್ಮಾನದಿ೦ದೇನಲ್ಲ. ಒ೦ದು ವೇಳೆ ಲೋಕಾಯುಕ್ತರ ಶಿಫಾರಸ್ಸಿನ ಪ್ರಕಾರ ಮತ್ತು ಚಾಲ್ತಿಯಲ್ಲಿದ್ದ ನಿಯಮದ ಪಕಾರ 5 ಪಟ್ಟು ದಂಡ ವಿಧಿಸಿದ್ದ ಮೊತ್ತದ ವಸೂಲಿಗೆ ಹೋಲಿಸಿದರೆ ಹರಾಜಿನಿ೦ದ ಬ೦ದಿರುವ ಸಾವಿರಾರು ಕೋಟಿ ರು. ಮೊತ್ತವೂ ಚಿಲ್ಲರೆ ಲೆಕ್ಕದಲ್ಲಿರುವುದು ಗಮನಾರ್ಹ.
ಇದನ್ನೂ ಓದಿ: ಮಿಝೋರಾಂನ ಚಕ್ಮಾ ಕೌನ್ಸಿಲ್ ಸಿಇಎಂ ರಾಜೀನಾಮೆ; BJP ತೊರೆದ 06 ಸದಸ್ಯರು MNFಗೆ ಸೇರ್ಪಡೆ!

