ವಿದ್ಯಾರ್ಥಿಗಳ ನೃತ್ಯವನ್ನು ‘ಡಾನ್ಸ್ ಜಿಹಾದ್’ ಎಂದ ಸಂಘಿಗಳು; ಕೇರಳ ತಿರುಗೇಟು ಕೊಟ್ಟಿದ್ದು ಹೀಗೆ!
ಕೇರಳದ ವೈದ್ಯಕೀಯ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳು ಹಾಡೊಂದಕ್ಕೆ ನೃತ್ಯ ಮಾಡಿ ಸೋಷಿಯಲ್ ನೀಡಿದಲ್ಲಿ ಹಂಚಿಕೊಂಡಿದ್ದರು. ಇದನ್ನು ಬಲಪಂತೀಯರು ‘ಡಾನ್ಸ್ ಜಿಹಾದ್’ ಎಂದು ಕೋಮು ಬಣ್ಣ ಹಚ್ಚಲು ಮುಂದಾಗಿದ್ದು, ಬಲಪಂತೀಯರ ಉನ್ನಾರಕ್ಕೆ ಕೇರಳ ಅದೇ ನೃತ್ಯವನ್ನು ಮಾಡುವ ಮೂಲಕ ತಿರುಗೇಟು ನೀಡಿದೆ.
ಕೇರಳದ ತ್ರಿಶೂರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಂಕುಮಾರ್ ಮತ್ತು ನವೀನ್ ರಜಾಕ್ ಅವರು ‘ರಾಸ್‌ಪುಟಿನ್’ ಸಂಗೀತಕ್ಕೆ ಹೆಜ್ಜೆ ಹಾಕಿದ 30 ಸೆಕೆಂಡುಗಳ ವಿಡಿಯೋವನ್ನು ಎರಡು ವಾರಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಬಲಪಂಥೀಯರು ‘ಡ್ಯಾನ್ಸ್ ಜಿಹಾದ್’ ಎಂದು ದ್ವೇಷ ಹರಡಲು ಪ್ರಯತ್ನಿಸಿದ್ದರು. ಆದರೆ, ಇದೀಗ ಆ ಇಬ್ಬರು ವಿದ್ಯಾರ್ಥಿಗಳ ಕೇರಳದಾದ್ಯಂತ ಜನಪ್ರಿಯರಾಗಿದ್ದಾರೆ..!
Grooving all the way in their scrubs, two medical students from #Kerala — Janaki Omkumar and Naveen Razak — are breaking the internet with their electrifying performance.
VC: Janaki Omkumar (https://t.co/BZ96QKBkQh)
Naveen Razak (https://t.co/7sOUcZyQCl) pic.twitter.com/XDiiVex22b— The Better India (@thebetterindia) April 7, 2021
ಬಲಪಂಥಿಯರ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೇರಳದಾದ್ಯಂತ ಅವರ ವಿರುದ್ದ ವ್ಯಾಪಕ ಆಕ್ರೋಶಗಳೆದ್ದಿದ್ದು, ವಿದ್ಯಾರ್ಥಿ ಸಂಘಟನೆಗಳು, ಕೋಮುವಾದ ಮತ್ತು ಜನಾಂಗಿಯವಾದದ ವಿರುದ್ದವಾಗಿ ‘ರಾಸ್‌ಪುಟಿನ್’ ಸಂಗೀತಕ್ಕೆ ಹೆಜ್ಜೆ ಹಾಕಿ ಪ್ರತಿರೋಧಿಸುವಂತೆ ಕೋರಿ ಸ್ಪರ್ಧೆ ಏರ್ಪಡಿಸಿದ್ದಾರೆ. ಇದಕ್ಕೆ ರಾಜ್ಯದಾದ್ಯಂತ ಯುವ ಜನರು ವ್ಯಾಪಕವಾಗಿ ಸ್ಪಂದಿಸಿದ್ದು, ವಿದ್ಯಾರ್ಥಿಗಳಿಬ್ಬರಿಗೆ ಡ್ಯಾನ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
https://twitter.com/Cow__Momma/status/1380768430400229378?s=20
ಅಷ್ಟೇ ಅಲ್ಲದೆ ಕೇರಳ ಸರ್ಕಾರ ಕೂಡಾ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಕೇರಳದ ಆರೋಗ್ಯ ಇಲಾಖೆ ‘ರಾಸ್‌ಪುಟಿನ್’ ಸಂಗೀತಕ್ಕೆ ಅನಿಮೇಷನ್ ವಿಡಿಯೋ ತಯಾರಿಸಿ ಕೊರೊನಾ ವಿರುದ್ದ ಹೋರಾಡಲು ಲಸಿಕೆ ಪಡೆಯುವಂತೆ ಕೇಳಿಕೊಂಡಿದೆ. ಜೊತೆಗೆ ಹಾಲು ಉತ್ಪಾದಕರ ಸಂಘವಾದ ‘ಮಿಲ್ಮಾ’ ‘ನೃತ್ಯ ಮಾಡುತ್ತಲೇ ಇರಿ’ ಎಂದು ವಿದ್ಯಾರ್ಥಿಗಳ ಪರವಾಗಿ ಜಾಹಿರಾತನ್ನೂ ನೀಡಿ ಕೋಮುವಾದಕ್ಕೆ ವಿರುದ್ದವಾಗಿ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿದೆ.
#StepWithRasputin dance by CUSAT SFI.
In protest against Communalism spewed by the Right Wing against the dance of two medical students.
Kerala fighting Sanghis and communalism like it always does — in style. pic.twitter.com/M5gf3IigU2
— Advaid അദ്വൈത് (@Advaidism) April 10, 2021
ಇದನ್ನೂ ಓದಿ: ಕೇರಳ ಚುನಾವಣೆ: ಸಿಪಿಎಂ 80-85 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷ ಅಂದಾಜು!

