ಕರಾವಳಿಯ ಸಮುದ್ರದಲ್ಲಿ ಎರಡು ಬೋಟ್ ನಡುವೆ ಅಪಘಾತ! ಇಬ್ಬರು ಸಾವು-12 ಜನರಿಗಾಗಿ ಶೋಧ!
ಕರಾವಳಿಯ ಆಳ ಸಮುದ್ರದಲ್ಲಿ ಹಡಗು ಮತ್ತು ಮೀನುಗಾರಿಕಾ ಬೋಟ್ ನಡುವೆ ಅಪಘಾತ ಸಂಭಿವಿಸಿದ್ದು ಇಬ್ಬರು ಮೀನುಗಾರರು ಸಾವನ್ನಪ್ಪಿದ್ದಾರೆ.
ಕೇರಳ-ಕರ್ನಾಟಕ ಸಮುದ್ರ ಗಡಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಇದಾಗಿದ್ದು, ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.
In a swift sea-air #SAR operation @IndiaCoastGuard deployed 03 #ICG ships & aircraft to search for 14 fishermen of IFB ‘Rabah’ approx 43 NM west #NewMangalore #today. 02 crew found, search for other crew in progress.@DefenceMinIndia @Min_FAHD @shipmin_india @SpokespersonMoD
— Indian Coast Guard (@IndiaCoastGuard) April 13, 2021
ಅಪಘಾತದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬೇಪೋರ್ ನಿಂದ ಮೀನುಗಾರಿಕಾ ಬೋಟ್ ಹೊರಟಿತ್ತು. ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು. ಸದ್ಯ ಿಂಡಿಯನ್ ಕೋಸ್ಟ್ ಗಾರ್ಡ್ ನ ಮೂರು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ಬಗ್ಗೆಯೂ ಇಂಡಿಯನ್ ಕೋಸ್ಟ್ ಗಾರ್ಡ್ ಟ್ವಿಟ್ಟರ್ ಖಾತೆ ಮಾಹಿತಿ ನೀಡಿದೆ.

