ಯುಗಾದಿ ಹಬ್ಬದಂದು ಸಾರಿಗೆ ನೌಕರರು ಭಿಕ್ಷಾಟನೆ : ಮನನೊಂದು ಭಿಕ್ಷೆ ಹಾಕಿದ ಅಂಗವಿಕಲ!

ಸಾರಿಗೆ ನೌಕರರ ಮುಷ್ಕರ ಇಂದಿಗೆ 7ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಸಾರಿಗೆ ನೌಕರರ ಮನವೊಲಿಸಲು ಸಾಧ್ಯವಾಗಿಲ್ಲ. ಜೊತೆಗೆ ಸಂಬಳವೂ ಕೊಟ್ಟಿಲ್ಲ. ಹೀಗಾಗಿ ಯುಗಾದಿ ಹಬ್ಬ ಆಚರಿಸಲು ಹಣವಿಲ್ಲದ ಸಾರಿಗೆ ನೌಕರರು ಭಿಕ್ಷಾಟನೆ ಮಾಡಿದ್ದಾರೆ.

ಹೌದು… ಯುಗಾದಿ ಹಬ್ಬದಂದು ಸಾರಿಗೆ ನೌಕರರು ಭಿಕ್ಷಾಟನೆ ಮನನೊಂದು ಅಂಗವಿಕಲನೊಬ್ಬ ಭಿಕ್ಷೆ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೆ ವೀಡಿಯೋದಲ್ಲಿ ಅವರು ‘ ನೀವು ನಮ್ಮನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯತ್ತೀರಿ. ನಿಮ್ಮಂಥವರು ನಮಗೆ ಬೇಕು’ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights