ಉತ್ತರ ಪ್ರದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ಹೈಕೋರ್ಟ್‌ ಆದೇಶ; ಸಾಧ್ಯವಿಲ್ಲ ಎಂದ ಸರ್ಕಾರ!

ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ 05 ನಗರಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡುವಂತೆ ಅಲಹಬಾದ್‌ ಹೈಕೋರ್ಟ್‌ ಆದೇಶ ನೀಡಿದೆ. ಆದರೆ, ಕೋರ್ಟ್‌ ಆದೇಶವನ್ನು ಯೋಗಿ ಆಧಿತ್ಯನಾಥ್‌ ಸರ್ಕಾರ ನಿರಾಕರಿಸಿದ್ದು, ಲಾಕ್‌ಡೌನ್‌ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಲಕ್ನೋ, ವಾರಣಾಸಿ, ಕಾನ್ಪುರ ನಗರ ಮತ್ತು ಗೋರಖ್‌ಪುರ ನಗರಗಳಲ್ಲಿ ಏ. 26ರವರೆಗೆ ಲಾಕ್ ಡೌನ್ ವಿಧಿಸಬೇಕು ಎಂದು ಅಲಹಾಬಾದ್ ಹೈಕೋರ್ಟ ಆದೇಶಿಸಿದೆ. ಗೋರಖಪುರ ಮುಖ್ಯಮಂತ್ರಿ ಯೋಗಿಯವರ ಕ್ಷೇತ್ರವಾಗಿದ್ದರೆ, ವಾರಣಾಸಿ ಪ್ರಧಾನಿ ಮೋದಿ ಅವರು ಪ್ರತಿನಿಧಿಸುವ ಕ್ಷೇತ್ರವಾಗಿದೆ.

ಅಲಹಾಬಾದ್ ಹೈಕೋರ್ಟ್ ಸೋಮವಾರ ಉತ್ತರ ಪ್ರದೇಶದಲ್ಲಿನ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಅತ್ಯಂತ ನಿರ್ಧಾರ ತೆಗೆದುಕೊಂಡಿತು ಮತ್ತು ಯುಪಿಯ ಐದು ನಗರಗಳಲ್ಲಿ ಏಪ್ರಿಲ್ 26 ರವರೆಗೆ ಲಾಕ್‌ಡೌನ್‌ಗೆ ಕಾರಣವಾಗುವ ನಿರ್ದೇಶನಗಳನ್ನು ಜಾರಿಗೊಳಿಸಿತು.

ನ್ಯಾಯಮೂರ್ತಿಗಳಾದ ಅಜಿತ್ ಕುಮಾರ್ ಮತ್ತು ಸಿದ್ಧಾರ್ಥ ವರ್ಮಾ ಅವರ ನ್ಯಾಯಪೀಠವು ಸರ್ಕಾರದ ಪ್ರತಿಕ್ರಿಯೆಯ ಕೊರತೆಯಿಂದಾಗಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ವೈದ್ಯಕೀಯ ವ್ಯವಸ್ಥೆಯು ಕುಸಿಯಬಹುದು ಎಂದು ಹೇಳಿದೆ.

ರಾಜ್ಯದ ಮುಖ್ಯಮಂತ್ರಿ ಕೂಡ ಕೊರೊನಾ ಸೋಂಕು ತಗುಲಿ ಪ್ರತ್ಯೇಕವಾಗಿದ್ದಾರೆ ಮತ್ತು ವಿಐಪಿಗಳು ಮಾತ್ರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

“ಐಸಿಯುಗಳಿಗೆ ರೋಗಿಗಳ ಪ್ರವೇಶವನ್ನು ಹೆಚ್ಚಾಗಿ ವಿಐಪಿಗಳ ಶಿಫಾರಸಿನ ಮೇರೆಗೆ ಮಾಡಲಾಗುತ್ತಿದೆ ಎಂದು ಸರ್ಕಾರಿ ಆಸ್ಪತ್ರೆಗಳಿಂದ ಹೊರಹೊಮ್ಮುವ ಸನ್ನಿವೇಶದಿಂದ ನಾವು ಕಂಡುಕೊಂಡಿದ್ದೇವೆ. ಜೀವ ಉಳಿಸುವ ಆಂಟಿ ವೈರಲ್ ಔಷಧಿ ರೆಮ್‌ಡಿಸಿವಿರ್ ಅನ್ನು ವಿಐಪಿಗಳ ಶಿಫಾರಸಿನ ಮೇರೆಗೆ ಮಾತ್ರ ಒದಗಿಸಲಾಗುತ್ತಿದೆ.. ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದರೆ, ಹೈಕೋರ್ಟ್‌ ಆದೇಶವನ್ನು ನಿರಾಕರಿಸಿರುವ ಸರ್ಕಾರ, ಲಾಕ್ಡೌನ್ ಜಾರಿ ಮಾಡಲು ಸಾಧ್ಯವೇ ಇಲ್ಲ. ಕೊರೊನಾ ಸೋಂಕು ತಡೆಗೆ ಸರ್ಕಾರದಿಂದ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿರ್ಬಂಧ ಜಾರಿಗೊಳಿಸಲಾಗುವುದು ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ಯಾವುದೇ ಚುನಾವಣೆ ಇಲ್ಲ; ಆದರೂ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸುತ್ತೆವೆ ಎಂದು ಬಿಜೆಪಿ ಘೋಷಿಸಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights