FACT CHECK | ಮಣಿಪುರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ವಿರುದ್ಧ ‘ಗೋ ಬ್ಯಾಕ್ ರಾಹುಲ್’ ಎಂದು ಪ್ರತಿಭಟನೆಗಳು ನಡೆದಿದ್ದು ನಿಜವೇ?

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು.  ಮಣಿಪುರದ ಭೇಟಿಯ ವೇಳೆ “ರಾಹುಲ್ ಗಾಂಧಿ ಗೋ ಬ್ಯಾಕ್” ಎಂದು ಪ್ರತಿಭಟನೆ ನಡೆದಿವೆ. ಮಣಿಪುರದಲ್ಲಿ ರಾಹುಲ್ ಗಾಂಧಿಯವರು ಎಲ್ಲಿ ಭೇಟಿ ನೀಡಿದರೂ ಇಂತಹ ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಅನೇಕರು ಈ ವೀಡಿಯೋವನ್ನು ಹಂಚಿಕೊಂಡು “ಮಣಿಪುರದಲ್ಲಿ ಪಪ್ಪು ಹೋದಲ್ಲೆಲ್ಲಾ “ಗೋ ಬ್ಯಾಕ್ ರಾಹುಲ್” ಘೋಷಣೆಗಳು ಪ್ರತಿಧ್ವನಿಸುತ್ತವೆ. ಅವರು ತಮ್ಮ CCP ಮಾಸ್ಟರ್‌ಗಳಿಗೆ ಸಹಾಯ ಮಾಡಲು ರಾಜ್ಯದಲ್ಲಿ ಘರ್ಷಣೆಯನ್ನು ಪುನರುಜ್ಜೀವನಗೊಳಿಸುತ್ತಾರೆ ಎಂಬುದು ಜನರಿಗೆ ತಿಳಿದಿದೆ. ನೆಹರು-ಗಾಂಧಿ ಬುಡಕಟ್ಟು ಜನಾಂಗದವರು ನಮ್ಮ ಈಶಾನ್ಯ ಹಿಂದೂ ಬುಡಕಟ್ಟುಗಳನ್ನು ನಾಶಪಡಿಸಿದರು, ಸಾಧುಗಳನ್ನು ನಿರ್ಬಂಧಿಸಿ ದಶಕಗಳ ಕಾಲ ಮಿಷನರಿಗಳಿಗೆ ಅನಿಯಮಿತ ಪ್ರವೇಶವನ್ನು ಅನುಮತಿಸಿದರು, ನೆರೆಯ ದೇಶಗಳಿಂದ ನುಸುಳಲು ನಮ್ಮ ಗಡಿಗಳನ್ನು ತೆರೆದಿಟ್ಟರು? NE ನಲ್ಲಿನ ಈ ಜನಾಂಗೀಯ ಘರ್ಷಣೆಗಳು ಎಂದಿಗೂ ಅಂತ್ಯಗೊಂಡಿಲ್ಲ. ಮೋದಿ ಸರ್ಕಾರವು ಬಹುತೇಕ ಎಲ್ಲವನ್ನೂ ಕೊನೆಗೊಳಿಸಿತು ಮತ್ತು ಮಣಿಪುರವು ಗೋಲ್ಡನ್ ಟ್ರಯಾಂಗಲ್ ಡ್ರಗ್ ರಿಂಗ್‌ನಿಂದ ಪ್ರಾರಂಭವಾಯಿತು.  ಎಂದು ಮಣಿಪುರದಲ್ಲಿ ಈ ಹಿಂದೆ ನಡೆದ ಜನಾಂಗಿಯ ಕಲಹದಲ್ಲಿ ಮಡಿದ ಸಂಖ್ಯೆಯನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಈ ಕುರಿತು ನಾವು ಹುಡುಕಿದಾಗ ವೈರಲ್ ಆಗುತ್ತಿರುವ ANI ವರದಿಯು ಇದೇ ವರ್ಷದ ಜನವರಿಯಲ್ಲಿ ರಾಹುಲ್ ಗಾಂಧಿಯವರು ಅಸ್ಸಾಮಿಗೆ ಭೇಟಿ ನೀಡದ ಸಂದರ್ಭದ್ದಾಗಿದ್ದು, ನೆನ್ನೆಯ ಮಣಿಪುರದ ಭೇಟಿಯದ್ದಲ್ಲ.

ANI ಜನವರಿ 21, 2024 ರಂದು ಈ ವೀಡಿಯೋ ಹಂಚಿಕೊಂಡು” ಅಸ್ಸಾಂ: ‘ರಾಹುಲ್ ಗಾಂಧಿ ಗೋ ಬ್ಯಾಕ್’ ಮತ್ತು ‘ಅನ್ಯಯಾ ಯಾತ್ರೆ’ ಎಂಬ ಭಿತ್ತಿಪತ್ರಗಳನ್ನು ಹೊತ್ತ ಅಪಾರ ಸಂಖ್ಯೆಯ ಜನರು ಇಂದು ಸಂಜೆ ನಾಗಾಂವ್‌ನ ಅಂಬಾಗನ್ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿದರು.” ಎಂದು ವರದಿ ಮಾಡಿದೆ.

ನೆನ್ನೆ ಮಣಿಪುರಕ್ಕೆ ಮೂರನೇ ಬಾರಿ ಭೇಟಿ ನೀಡಿರುವ ರಾಹುಲ್ ಗಾಂಧಿಯವರನ್ನು ಅಲ್ಲಿನ ಸ್ಥಳೀಯ ಜನರು ಸ್ವಾಗತಿಸಿದ ವೀಡಿಯೋ ವರದಿಯನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ.

ಅವರು ಬಿಜೆಪಿ ಆಡಳಿತದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೂರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು ಮತ್ತು ಹಿಂಸಾಚಾರದಿಂದ ನಿರಾಶ್ರಿತರಾದ ಎರಡೂ ಜನಾಂಗೀಯ ಗುಂಪುಗಳಿಗೆ ಸೇರಿದ ಕೈದಿಗಳೊಂದಿಗೆ ಸಂವಾದ ನಡೆಸಿದರು.

“ಪ್ರಧಾನಿ ಅವರು ಬಹಳ ಹಿಂದೆಯೇ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಅವರು ಮಣಿಪುರಕ್ಕೆ ಭೇಟಿ ನೀಡುವುದು ಮುಖ್ಯವಾಗಿದೆ. ಮಣಿಪುರಕ್ಕೆ ಬಂದು ಇಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲು ನಾನು ಅವರನ್ನು ವಿನಂತಿಸುತ್ತೇನೆ … ಇದು ಜನರಿಗೆ ಸಾಂತ್ವನ ನೀಡುತ್ತದೆ. ಕಾಂಗ್ರೆಸ್ ಏನು ಬೇಕಾದರೂ ಬೆಂಬಲಿಸಲು ಸಿದ್ಧವಾಗಿದೆ. ಪರಿಸ್ಥಿತಿಯನ್ನು ಸುಧಾರಿಸುತ್ತದೆ”

“ಸಮಸ್ಯೆ ಪ್ರಾರಂಭವಾದ ನಂತರ ನಾನು ಇಲ್ಲಿಗೆ ಬಂದಿರುವುದು ಇದು ಮೂರನೇ ಬಾರಿ. ಇದೊಂದು ಭೀಕರ ದುರಂತವಾಗಿದೆ. ನಾನು ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ನಿರೀಕ್ಷಿಸುತ್ತಿದ್ದೆ. ಆದರೆ ಪರಿಸ್ಥಿತಿ ಇನ್ನೂ ಎಲ್ಲಿಯೂ ಇರಬೇಕಾದ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ನಾನು ಸಾಕಷ್ಟು ನಿರಾಶೆಗೊಂಡಿದ್ದೇನೆ, ”ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಜನವರಿಯಲ್ಲಿ ರಾಹುಲ್ ಗಾಂಧಿ ಅಸ್ಸಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಪ್ರತಿಭಟನೆಯ ಹಳೆಯ ವಿಡಿಯೋವನ್ನು ಮಣೀಪುರಕ್ಕೆ ಭೇಟಿ ನೀಡಿದಾಗ, ‘ರಾಹುಲ್ ಗಾಂಧಿ ಗೋ ಬ್ಯಾಕ್’ ಎಂಬ ಪ್ರತಿಭಟನೆ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | CARIPILL ಮಾತ್ರೆ ಸೇವನೆಯಿಂದ ಡೆಂಗಿ ಸೋಂಕು ನಿವಾರಿಸಬಹುದು ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights