ಚೆನ್ನೈ: ವಿದ್ಯಾರ್ಥಿನಿಯರ ಖಾಸಗಿ ಪೋಟೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಯುವಕನ ಹತ್ಯೆ

ಬಾಲಕಿಯರ ಖಾಸಗೀ ಫೋಟೋಗಳನ್ನು ಇಟ್ಟುಕೊಂಡು ಹುಡುಗಿಯರನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಯುವಕನೊಬ್ಬನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಅರಂಬಕ್ಕಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ, ನಿರ್ಜನ ಸ್ಥಳದಲ್ಲಿ ಕೂದಲು ಮತ್ತು ರಕ್ತಸಿಕ್ತ ಹಲ್ಲುಗಳನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಮೃತ ಯುವಕನನ್ನು 21 ವರ್ಷದ ಕಾಲೇಜು ವಿದ್ಯಾರ್ಥಿ ಒಟ್ಟೇರಿಯ ಪ್ರೇಮಕುಮಾರ್ ಎಂದು ಗುರುತಿಸಲಾಗಿದೆ.

ಚೆಂಗಲ್‌ಪೇಟ್‌ನ ಇಬ್ಬರು ವಿದ್ಯಾರ್ಥಿನಿಯರ ಖಾಸಗಿ ಫೋಟೋಗಳನ್ನು ತೆಗೆದುಕೊಂಡು ಆತ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ. ಅಲ್ಲದೆ, 50,000 ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಕೊಡಲು ಸಾಧ್ಯವಾಗದ ಬಾಲಕಿಯರು, ತಮಗೆ Instagram ನಲ್ಲಿ ಪರಿಚಯವಾಗಿದ್ದ ಸ್ನೇಹಿತ ಅಶೋಕ್‌ನ ಸಹಾಯ ಕೇಳಿದ್ದರು. ಪ್ರೇಮಕುಮಾರ್‌ನ ಫೋನ್ ಕಸಿದುಕೊಂಡು, ಫೋಟೋಗಳನ್ನು ಅಳಿಸುವಂತೆ ಅಶೋಕ್‌ ಬಳಿ ಬಾಲಕಿಯರು ಕೇಳಿಕೊಂಡಿದ್ದರು.

ಬಾಲಕಿಯರಿಗೆ ಸಹಾಯ ಮಾಡಲು ಒಪ್ಪಿಕೊಂಡ ಅಶೋಕ್‌, ಬಾಲಕಿಯರಿಗೆ ಪ್ರೇಮ್‌ಕುಮಾರ್‌ನನ್ನು ಶುಕ್ರವಾರ ಶೋಲವರಂ ಟೋಲ್ ಪ್ಲಾಜಾಕ್ಕೆ  ಕರೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ ಬಾಲಕಿಯರು ಪ್ರೇಮ್‌ಕುಮಾರ್‌ನನ್ನು ಕರೆತಂದಿದ್ದಾರೆ. ಆ ವೇಳೆ, ಆಶೋಕ್‌ ಮತ್ತು ಆತನ ಮತ್ತೊಬ್ಬ ಸ್ನೇಹಿತ ಸೇರಿ ಪ್ರೇಮಕುಮಾರ್‌ನನ್ನು ಅಪಹರಿಸಿ, ಈಚಂಗಾಡಿಗೆ ಕರೆದೊಯ್ದು ಅಲ್ಲಿ ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂಬ ಆರೋಪ ತನಿಖೆ ವೇಳೆ ಕೇಳಿಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ನಾವು ಅಶೋಕ್‌ಗಾಗಿ ಹುಡುಕಾಟ ನಡೆಸಿದ್ದೇವೆ. ನಾವು ಅವನನ್ನು ಬಂಧಿಸಿದ ನಂತರವೇ ನಿಖರವಾಗಿ ಏನಾಯಿತು ಎಂದು ನಮಗೆ ತಿಳಿಯುತ್ತದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರೇಮಕುಮಾರ್ ಅವರ ಮೃತದೇಹವನ್ನು ಸೋಮವಾರ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಂತರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ಸಿಲ್ಲಿಸಿದ ಶಾಲಾ ಆಡಳಿತ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights