ಮಾಜಿ ಪತ್ನಿಗೆ 5,500 ಕೋಟಿ ರೂ. ವಿಚ್ಚೇದನ ಪರಿಹಾರ ನೀಡುವಂತೆ ದುಬೈ ಪ್ರಧಾನಿಗೆ ಕೋರ್ಟ್ ಆದೇಶ!
ಮಾಜಿ ಪತ್ನಿಗೆ ವಿಚ್ಚೇದನ ಪರಿಹಾರ ಮತ್ತು ಮಕ್ಕಳ ಭದ್ರತೆಗಾಗಿ ಅವರಿಗೆ 550 ಮಿಲಿಯನ್ ಪೌಂಡ್‌ಗಳ (5,509 ಕೋಟಿ ರೂ.) ಪರಿಹಾರ ನೀಡುವಂತೆ ಯುಎಇ (ಸಂಯ್ತುಕ ಅರಬ್ ಸಂಸ್ಥಾನ)ನ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್ ಅವರಿಗೆ ಲಂಡನ್ ಹೈಕೋರ್ಟ್ ಆದೇಶಿಸಿದೆ.
ಪ್ರಧಾನಿ ಮಕ್ತೌಮ್ ಆರನೇ ಪತ್ನಿ (ಮಾಜಿ ಪತ್ನಿ)ಯಾದ ಯುಕೆ ಮೂಲದ ರಾಜಕುಮಾರಿ ಹಯಾ ಬಿಂಟ್ ಅಲ್-ಹುಸೇನ್ ಅವರಿಗೆ ವಿಚ್ಚೇದನದ ಪರಿಹಾರವಾಗಿ 251.5 ಮಿಲಿಯನ್ ಪೌಂಡ್‌ಗಳು ಮತ್ತು ಮಕ್ಕಳಾದ ಮತ್ತು ಅವರ ಮಕ್ಕಳಾದ ಮಕ್ಕಳಾದ ಜಲೀಲಾ, ಮತ್ತು ಜಾಯೆದ್ ಅವರ ಭದ್ರತೆಗಾಗಿ ಹಾಗೂ ಅವರಿಗೆ ಅಗತ್ಯವಿರುವ ಐದು ಮನೆಗೆಲಸದವರನ್ನು ನೇಮಿಸಿಕೊಳ್ಳುವುಕ್ಕಾಗಿ 290 ಮಿಲಿಯನ್ ಪೌಂಡ್‌ಗಳನ್ನು ಪಾವತಿಸಬೇಕು ಎಂದು ಬ್ರಿಟನ್ ಕೋರ್ಟ್ ಆದೇಶ ನೀಡಿದೆ.
ಮಕ್ಕಳು ಅಪ್ರಾಪ್ತರಾಗಿರುವ ಕಾರಣ, ಅವರು ಅರ್ಹ ವಯಸ್ಸಿಗೆ ತಲುಪಿದ ನಂತರ ಅವರಿಗೆ ಹಣವನ್ನು ಪಾವತಿಸಲಾಗುವುದು. ಆದಾಗ್ಯೂ, ಅವರು ತಮ್ಮ ತಂದೆಯೊಂದಿಗೆ ಮಾತುಕತೆ ನಡೆಸುತ್ತಾರೆಯೇ ಎಂಬ ಅಂಶಗಳ ಆಧಾರದ ಮೇಲೆ ಅವರ ಮಕ್ಕಳು ಪಡೆಯುವ ಅಂತಿಮ ಮೊತ್ತವನ್ನು ಬದಲಾಯಿಸಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ವಿಚ್ಚೇದನ ಪರಿಹಾರದ ಮೊತ್ತವು ಬ್ರಿಟಿಷ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿಚ್ಛೇದನದ ಪರಿಹಾರವಾಗಿದೆ ಎಂದು ಹೇಳಲಾಗಿದೆ.
Also Read: ಮಾರುಕಟ್ಟೆಯಲ್ಲಿ ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು; ಐವರ ಬಂಧನ
ನ್ಯಾಯಾಲಯದ ತೀರ್ಪಿನ ಪ್ರಕಾರ, ದುಬೈ ಪ್ರಧಾನಿ ಅವರು ತಮ್ಮ ಮಾಜಿ ಪತ್ನಿ ಹಯಾ ಮತ್ತು ಮಕ್ಕಳ ಭದ್ರತಾ ವೆಚ್ಚವಾಗಿ ವರ್ಷಕ್ಕೆ 11 ಮಿಲಿಯನ್ ಪೌಂಡ್‌ಗಳ ಪರಿಹಾರ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಗಮನಾರ್ಹವಾಗಿ, ರಾಜಕುಮಾರಿ ಹಯಾ ಜೋರ್ಡಾನ್ ಅವರು ದಿವಂಗತ ಕಿಂಗ್ ಹುಸೇನ್ ಅವರ ಮಗಳು. ಅವರು 2004 ರಲ್ಲಿ ದುಬೈ ಪ್ರಧಾನಿಯಾಗಿರುವ ಮಕ್ತೌಮ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಮತ್ತು 2019 ರವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಅದೇ ವರ್ಷ ಹಯಾ ಅವರು ಮಕ್ತೌಮ್ ಅವರನ್ನು ತೊರೆದು ಯುಕೆಗೆ ವಾಪಸ್ಸಾದರು.
ತರುವಾಯ, ಹಯಾ ಅವರು ತನ್ನ ಮತ್ತು ತನ್ನ ಇಬ್ಬರು ಮಕ್ಕಳ ಪಾಲನೆಗಾಗಿ ಪರಿಹಾರ ನೀಡುವಂತೆ ಮೊಕದ್ದಮೆ ಹೂಡಿದ್ದರು.
ಶೇಖ್ ಮೊಹಮ್ಮದ್ ತನ್ನ ಹೆಂಡತಿಯ ಮೇಲೆ ಕಣ್ಣಿಡಲು ಪೆಗಾಸಸ್ ಬಳಸಿದ್ದಾನೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ನಂತರ, ಹಯಾ ಮತ್ತು ಅವರ ವಕೀಲರ ಫೋನ್‌ಅನ್ನು ದುಬೈ ಪ್ರಧಾನಿ ಹ್ಯಾಕ್ ಮಾಡಿದ್ದಾರೆ. ಅದಕ್ಕಾಗಿ, ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ನಿರ್ಮಿಸಿದ ಪೆಗಾಸಸ್ ಸ್ಪೈವೇರ್ ಬಳಸಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.
ಹಯಾ ಅವರು ದುಬೈ ತೊರೆದು ಯುನೈಟೆಡ್ ಕಿಂಗ್‌ಡಮ್‌ಗೆ ಹಿಂದಿರುಗುವ ಕುರಿತು AP ಯೊಂದಿಗೆ ಮಾತನಾಡುವಾಗ, ಹಯಾ ಅವರು ತನ್ನ ಗಂಡನ ಬಗ್ಗೆ ಭಯಭೀತಳಾಗಿರುವುದನ್ನು ಬಹಿರಂಗಪಡಿಸಿದ್ದರು. ಆತ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಗಲ್ಫ್ ಎಮಿರೇಟ್‌ಗೆ ಬಲವಂತವಾಗಿ ಕಳುಹಿಸಲು ಉದ್ದೇಶಿದ್ದನು ಎಂದು ಅವರು ಆರೋಪಸಿದ್ದರು.
Also Read: 12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ; ಎರಡು ದಿನದಲ್ಲಿ 55 ಮಂದಿ ಬಂಧನ!