CPI-M ನಾಯಕ ಯೆಚೂರಿ ಮಗನ ಸಾವನ್ನು ವಿಕೃತವಾಗಿ ಸಂಭ್ರಮಿಸಿದ ಬಿಹಾರ BJP ಉಪಾಧ್ಯಕ್ಷ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!
ಸಿಪಿಐ(ಎಂ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಹಿರಿಯ ಮಗ, ಪತ್ರಕರ್ತ ಆಶಿಶ್ ಯಚೂರಿ ಕೊರೊನಾ ಸೋಂಕಿನಿಂದಾಗಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರ ಸಾವನ್ನು ವಿಕೃತವಾಗಿ ಸಂಭ್ರಮಿಸಿರುವ ಬಿಹಾರದ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮಿಥಿಲೇಶ್ ಕುಮಾರ್ ತಿವಾರಿ ಅವರು, ‘ಚೀನಾ ಬೆಂಬಲಿಗ ಯಚೂರಿಯ ಮಗ ಆಶಿಶ್ ಚೀನೀ ಕೊರೊನಾಗೆ ಬಲಿಯಾಗಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ವಿಥಿಲೇಶ್ ಕುಮಾರ್ ತಿವಾರಿ ಅವರು 2015 ರಲ್ಲಿ ಬೈಕುಂತ್ಪುರ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಇಂದು ಅವರು ಟ್ವೀಟ್ನಲ್ಲಿ ಅವರು, “ಚೀನಾ ಬೆಂಬಲಿಗ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಮಗ ಆಶಿಶ್ ಯಚೂರಿ ಚೀನೀ ಕೊರೊನಾದಿಂದ ನಿಧನ” ಎಂದು ಬರೆದಿದ್ದರು. ಅವರ ಟ್ವೀಟ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನಂತರ ಅವರ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ತಿವಾರಿಯ ಟ್ವೀಟ್ ಬಗ್ಗೆ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಟಿ ಸ್ವರಾ ಭಾಸ್ಕರ್, ಸಿಪಿಐಎಂ ಕಾರ್ಯಕರ್ತ ದೀಪಂಕರ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿದ್ದಾರೆ.
It takes a special category of ___________ to gloat over the death of a person’s son. You can always rely on someone in the BJP to set the bar so low that a snake wouldn’t be able to slither under it. pic.twitter.com/t1wtbCjxna
— Omar Abdullah (@OmarAbdullah) April 22, 2021
ತನಿಖಾ ಪತ್ರಕರ್ತರಾಗಿದ್ದ 35 ವರ್ಷದ ಆಶಿಶ್ ಯೆಚೂರಿ ಗುರುವಾರ ಬೆಳಿಗ್ಗೆ ಗುರಗಾಂವ್ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಎರಡು ವಾರಗಳ ಹೋರಾಟದ ನಂತರ ನಿಧನರಾಗಿದ್ದಾರೆ.
मैं कहती कि शर्म करो.. पर आप जैसे नीच निर्लज्ज लोगों से यहीं उम्मीद है.. देश को शमशान घाट पर पहुँचा दिया है… हत्यारे हैं आप लोग और आपकी सरकार! आह लगेगी आपको, इस देश के नागरिकों की, जिन्होंने एक एक साँस के लिए तड़पते अपने परिजनों की मौत देखी है! थू !! @mkrtiwari_bjp pic.twitter.com/BxUvDBT7vC
— Swara Bhasker (@ReallySwara) April 22, 2021
ಸೀತಾರಾಮ್ ಯೆಚೂರಿ ಅವರ ಪುತ್ರನ ನಿಧನಕ್ಕೆ ರಾಷ್ಟ್ರಪತಿ, ಉಪಾ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: CPI-M ನಾಯಕ ಯೆಚೂರಿ ಹಿರಿಯ ಮಗ ಆಶಿಶ್ ಯೆಚೂರಿ ಕೊರೊನಾದಿಂದ ಸಾವು

