ಮುನ್ಸೂಚನೆ ಇಲ್ಲದೆ ಲಾಕ್ಡೌನ್ : ದಿಢೀರ ನಿರ್ಧಾರದಿಂದ ವ್ಯಾಪಾರಿಗಳ ಆಕ್ರೋಶ!
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು ಇದ್ದಕ್ಕಿದ್ದಂತೆ ಹಾಫ್ ಲಾಕ್ ಡೌನ್ ಘೋಷಣೆಯಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಸರ್ಕಾರದ ದಿಢೀರ ನಿರ್ಧಾರದಿಂದ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು… ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಸ್ತೆಗಿಳಿದ ಪೊಲೀಸರು ವ್ಯಾಪಾರಿಗಳಿಗೆ ಸೂಚನೆ ಕೊಡುತ್ತಾ ಬಹುತೇಕ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಮುನ್ಸೂಚನೆ ಇಲ್ಲದೆ ಲಾಕ್ಡೌನ್ ವ್ಯಾಪಾರಿಗಳು ಸಿಡಿಮಿಡಿಗೊಂಡಿದ್ದಾರೆ.
ಈಗಾಗಲೇ ಕೊರೊನಾದಿಂದಾಗಿ ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನ ಗುಂಪು ಸೇರುವುದನ್ನು ತಡೆಯುತ್ತಾ ಅಂಗಡಿಗಳನ್ನು ಪೊಲೀಸರು ಬಲವಂತವಾಗಿ ಬಂದ್ ಮಾಡಿಸುತ್ತಿದ್ದಾರೆ.
ಇಂದು ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ರಾತ್ರಿ 9 ಗಂಟೆಯವರೆಗೆ ಯಾವೆಲ್ಲ ಅಂಗಡಿಗಳು ತೆರೆದಿರಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಈ ಹೊಸ ಆದೇಶವನ್ನು ಮೇ 4ರವರೆಗೆ ಜಾರಿಯಲ್ಲಿರಲಿದೆ.
ಮಾರ್ಗಸೂಚಿ ಪ್ರಕಾರ ದಿನಸಿ, ಹಣ್ಣು, ತರಕಾರಿ ಡೈರಿ, ಮಾಂಸ, ಔಷಧಿ, ಮಾಂಸ ಮಾರಾಟದ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಇನ್ನೂ ಹೋಲ್ ಸೇಲ್ ತರಕಾರಿ, ಹಣ್ಣು ಹೂವು ಅಂಗಡಿ ತೆರೆಯಬಹುದು, ಹೊಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಲಾಡ್ಜಿಂಗ್ ಹೊರಗಿನಿಂದ ಬಂದ ಅತಿಥಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಮದ್ಯ ಪಾರ್ಸಲ್ ತೆರೆದುಕೊಂಡು ಹೋಗಲು, ಬ್ಯಾಂಕ್, ಎಟಿಎಂ ಇನ್ಶುರೆನ್ಸ್ ಕಂಪನಿಗಳಿಗೆ ತೆರೆಯಲು ಅನುಮತಿ ನೀಡಲಾಗಿದೆ.
ಜೊತೆಗೆ ಪೇಪರ್, ಟಿವಿ, ಮೀಡಿಯಾ ಕಂಪನಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇ-ಕಾಮರ್ಸ್ ಸೇವೆಯ ಕಚೇರಿಗಳಿಗೆ, ಶೇರ್ ಮಾರ್ಕೇಟ್ ನಡೆಸುವ ಸೇವಾ ಕಚೇರಿ, ಕೋಲ್ಡ್ ಸ್ಟೋರೇಜ್, ವೇರ್ ಹೌಸ್ ಗಳನ್ನು ತೆರೆಯಲು ಅವಕಾಶವಿದೆ. ಇನ್ನೂ ಖಾಸಗಿ ಸೆಕ್ಯೂರಿಟಿ ಏಜೆನ್ಸಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ತೆರೆಯಲು ಅವಕಾಶ ಿದೆ. ಕಟ್ಟಡ ನಿರ್ಮಾಣ ಸಾಮಾಗ್ರಿ ಮಾರಾಟ ಮಾಡುವ ಅಂಗಡಿಗೆ ಅವಕಾಶ ನೀಡಲಾಗಿದೆ.
ಇದೆಲ್ಲವನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಬಂದ್ ಮಾಡಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

