ಪೋಟೋ ವೈರಲ್: ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾದ ಯುವಕ!
ಯುವಕನೊಬ್ಬ ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾಗಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವರು ಈ ಆ ಫೋಟೊವನ್ನು ಹಂಚಿಕೊಂಡು ಹಾಸ್ಯ ಮಾಡುತ್ತಿದ್ದಾರೆ. ಆದರೆ, ಆತ ಬಲವಾದ ಕಾರಣದಿಂದಾಗಿ ಇಬ್ಬರನ್ನೂ ಒಂದೇ ಮಂಟಪದಲ್ಲಿ ವಿವಾಹವಾಗಿದ್ದಾನೆ ಎಂದು ನಂತರದಲ್ಲಿ ತಿಳಿದು ಬಂದಿದೆ.
ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ವೇಗಮಡಗು ಗ್ರಾಮದಲ್ಲಿ ಉಮಾಪತಿ ಎಂಬಾತ ಅಕ್ಕ-ತಂಗಿಯರಾದ ಸುಪ್ರಿಯ ಮತ್ತು ಲಲಿತ ಎಂಬ ಯುವತಿಯರನ್ನು ಮೇ 7 ರಂದು ವಿವಾಹವಾಗಿದ್ದಾನೆ.
ವಿವಾದ ಯುವತಿಯರ ತಾಯಂದಿರಾದ ರಾಣೆಮ್ಮ ಮತ್ತು ಸುಬ್ಬಮ್ಮ ಅವರು ಉಮಾಪತಿ ಅವರ ಸೋದರಿಯರು. ಹೀಗಾಗಿ ಉಮಾಪತಿ ಅವರು ಯುವತಿಯರಿಗೆ ಸಂಬಂಧದಲ್ಲಿ ಸೋದರ ಮಾವನಾಗಬೇಕು. ಆ ಇಬ್ಬರು ಯುವತಿಯರ ಪೈಕಿ ಸುಪ್ರಿಯಾ ಎಂಬುವವರಿಗೆ ಮಾತು ಬಾರದು ಮತ್ತು ಕಿವಿ ಕೇಳುವುದಿಲ್ಲ. ಹೀಗಾಗಿ ಆಕೆಯನ್ನು ಬೇರಾವ ವರನೂ ಮದುವೆಯಾಗಲು ಮುಂದೆ ಬರುವುದಿಲ್ಲ ಎಂದು ಲಲಿತಾ ಭಾವಿಸಿದ್ದಳು.
ಹೀಗಾಗಿ ತನ್ನ ಅಕ್ಕನನ್ನೂ ಮದುವೆಯಾದರೆ ಮಾತ್ರ ತಾನು ಮದುವೆಯಾಗುವುದಾಗಿ ಲಲಿತಾ ಪಟ್ಟು ಹಿಡಿದಿದ್ದಾಳೆ. ಈ ಕಾರಣದಿಂದಾಗಿ ಉಮಾಪತಿ ಆ ಇಬ್ಬರೂ ಅಕ್ಕ-ತಂಗಿಯರನ್ನು ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಟೌಕ್ಟೇ ಚಂಡಮಾರುತ : ಕಾಸರ್ಗೋಡ್ನಲ್ಲಿ ಕುಸಿದ ಮನೆ – ಕೇರಳದಲ್ಲಿ ವಿದ್ಯುತ್ ಕಡಿತ!