ಕೊರೊನಾ ಲಸಿಕೆ ಕದ್ದು, ಹಣಕ್ಕೆ ಮಾರಾಟ ಮಾಡುತ್ತಿದ್ದ ಸರ್ಕಾರಿ ವೈದ್ಯೆ; ಇಬ್ಬರ ಬಂಧನ

ಕೊರೊನಾ ವಿರುದ್ದ ಹೋರಾಡಲು ಜನರಿಗೆ ಉಚಿತವಾಗಿ ನೀಡಲು ಒದಗಿಸಲಾಗುತ್ತಿರುವ ಕೊರೊನಾ ಲಸಿಕೆಯನ್ನು ಕದ್ದು ಖಾಸಗಿ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯೆ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆ ಡಾ. ಪುಷ್ಪಿತಾ ಹಾಗೂ ಐಟಿಐ ಲೇಔಟ್‌ ನಿವಾಸಿ ಪ್ರೇಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

“ಈ ಇಬ್ಬರೂ ಸೇರಿ ಸೇರಿ ಪ್ರೇಮಾಳ ನಿವಾಸದಲ್ಲೇ ಪ್ರತಿದಿನ ಸಂಜೆ 4 ಗಂಟೆಯಿಂದ ಲಸಿಕೆ ನೀಡುತ್ತಿದ್ದರು. ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒದಗಿಸಲಾಗಿದ್ದ ಲಸಿಕೆಯಲ್ಲಿ ಕೆಲವು ಲಸಿಕೆಗಳನ್ನು ಇವರು ತಮ್ಮ ನಿವಾಸಕ್ಕೆ ಕೊಂಡೊಯ್ದು 500 ರೂಪಾಯಿಗಳಿಗೆ ಮಾರಾಟ ಮಾಡಿ ಚುಚ್ಚುಮದ್ದು ಪಡೆಯುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ನಂತರ ನಾವು ಕಾರ್ಯಚರಣೆ ನಡೆಸಿ, ಇಬ್ಬರನ್ನೂ ಬಂಧಿಸಿದ್ದೇವೆ” ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದ್ದಾರೆ.

ಲಸಿಕೆ ಪಡೆಯುವ ಸಾರ್ವಜನಿಕರಂತೆ ಇನ್‌ಸ್ಪೆಕ್ಟರ್ ಲೋಹಿತ್ ನೇತೃತ್ವದ ತಂಡ ಪ್ರೇಮಾಳ ನಿವಾಸಕ್ಕೆ ತೆರಳಿದ್ದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಈಗಾಗಲೇ ನೂರಾರು ಜನರಿಗೆ ಲಸಿಕೆ ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಕೂಡಾ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಪ್ಕೊ ಚಳುವಳಿ ನೇತಾರ, ಪರಿಸರವಾದಿ ಸುಂದರ್‌ಲಾಲ್‌ ಬಹುಗುಣ ಕೊರೊನಾದಿಂದ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights