ಮೋದಿ ಸರ್ಕಾರದ ಭಾರತ ಮಾತೆಯ ಎದೆ ಬಗೆಯುತ್ತಿದೆ; ಕೇಂದ್ರ ವಿರುದ್ದ ರಾಹುಲ್‌ ಆಕ್ರೋಶ

ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಶೂನ್ಯ ವ್ಯಾಕ್ಸೀನ್ ನೀತಿಯು ಭಾರತ ಮಾತೆಯ ಎದೆ ಬಗೆಯುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ನಿರ್ವಹಣೆಯನ್ನು ಕೇಂದ್ರವು ಕಲಪೆಯಾಗಿ ಮಾಡುತ್ತಿದ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಇತ್ತೀಚೆಗೆ ಬಿಜೆಪಿ ಸರ್ಕಾರದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.

ಇಂದು ಹಿಂದಿಯಲ್ಲಿ ಟ್ವೀಟ್ ರಾಹುಲ್ ಗಾಂಧಿ, “ಮೋದಿ ಸರ್ಕಾರದ ಶೂನ್ಯ ವ್ಯಾಕ್ಸೀನ್ ಭಾರತ ಮಾತೆಯ ಎದೆ ಬಗೆಯುವ ಕೆಸಲ ಮಾಡುತ್ತಿದೆ. ದುಃಖದ ಸತ್ಯ” ಎಂದು ಹೇಳಿದ್ದಾರೆ.

ಇದು ಬೆಳಿಗ್ಗೆ ಟ್ವಿಟ್ ಮಾಡಿದ್ದ ಅವರು, ಪ್ರಧಾನಿ ಮೋದಿ ಅಹಂಕಾರದಿಂದ 97% ದಷ್ಟು ಭಾರತೀಯರು ತಮ್ಮ ಆದಾಯದ ಇಳಿಕೆಯನ್ನು ಕಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ತಂದೆಗಾಗಿ 1200 ಕಿ.ಮೀ ಸೈಕಲ್‌ ತುಳಿದಿದ್ದ ಬಾಲಕಿಯ ತಂದೆ ಸಾವು!

ಅವರು ತನ್ನ ಟ್ವೀಟ್‌ನಲ್ಲಿ, ಕೊರೊನಾ ಎರಡನೆ ಅಲೆಯು 90% ಭಾರತೀಯರನ್ನು ಬಡವರನ್ನಾಗಿ ಮಾಡಿದೆ ಎಂಬ ವರದಿಯ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಮತ್ತು ಈ ಬಡತನ್ನಕ್ಕೆ “ಒಂದನೆ ಕಾರಣ ಒಬ್ಬ ಮತ್ತು ಮನುಷ್ಯ ಮತ್ತು ಅಹಂಕಾರ, ಎರಡನೆ ಕಾರಣ ಒಂದು ವೈರಸ್ ಮತ್ತು ಅದರ ರೂಪಾಂತರ” ಎಂದು ಟ್ಟೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಹಂಚಿಕೊಂಡ ವರದಿಯು, ಕೊರೊನಾ ಎರಡನೇ ಅಲೆಯು ಭಾರತದ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಸಂಬಳ ಪಡೆಯುವ ಉದ್ಯೋಗಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಇದಲ್ಲದೆ, ಶೇಕಡಾ 97 ರಷ್ಟು ಭಾರತೀಯರು ತಮ್ಮ ಆದಾಯದಲ್ಲೂ ಇಳಿಕೆ ಕಂಡಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ‘ಮಾಸ್ಕ್ ಅಪ್ ರಾಯಪುರ’ ಅಭಿಯಾನ; ಪೊಲೀಸರಿಂದ ಉಚಿತ ಮಾಸ್ಕ್‌ ವಿತರಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights