‘ಶೂಟಿಂಗ್ ಇಲ್ಲ, ಉದ್ಯೋಗವಿಲ್ಲ’; ಫೇಸ್ಬುಕ್ ಲೈವ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ನಟ!
ಕೊರೊನಾ ಬಿಕ್ಕಟ್ಟಿನ ಮಧ್ಯೆ ಉದ್ಯೋಗವಿಲ್ಲದೆ, ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಬೆಂಗಾಲಿ ಕಿರುತೆರೆ ನಟ ಫೇಸ್ಬುಕ್ ಲೈವ್ ಬಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಾಲಿ ಭಾಷೆಯ ‘ಮಂಗಲ್ ಚಂಡಿ’ ಮತ್ತು ‘ಮಾನಸಾ’ ಸಿನಿಮಾಗಳಲ್ಲಿ ನಟಿಸಿದ್ದ ನಟ ಲಾಕ್ಡೌನ್ ಕಾರಣದಿಂದಾಗಿ ಶೂಟಿಂಗ್ ಇಲ್ಲ, ಉದ್ಯೋಗವೂ ಇಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸ್ವತಃ ಸುವೊ ತಿಳಿಸಿದ್ದಾರೆ.
“I quit (ನಾನು ತ್ಯಜಿಸುತ್ತಿದ್ದೇನೆ)” ಎಂದು ಶೀರ್ಷಿಕೆ ಹಾಕಿ ಫೇಸ್ಬುಕ್ ಲೈವ್ ಬಂದ ನಟ ಗಿಟಾರ್ ನುಡಿಸುತ್ತಾ, ಹಾಡು ಹಾಡುತ್ತಾ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಾರೆ.
“ಪ್ರತಿ ಮನೆಯಲ್ಲೂ ಈ ಸಮಸ್ಯೆ ಇದೆ. ನನ್ನ ಮಗ 31 ನೇ ವಯಸ್ಸಿನಲ್ಲಿಯೂ ನಿರುದ್ಯೋಗಿ ಎಂದು ನನ್ನ ತಾಯಿ ಹೇಳುವರು. ನನ್ನ ತಂದೆ ಕಳೆದ ವರ್ಷ ಸಾವನ್ನಪ್ಪಿದರು. ನಾವು ಪಿಂಚಣಿ ಹಣದಲ್ಲಿ ವಾಸಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಒಬ್ಬರು ಖಿನ್ನತೆಗೆ ಒಳಗಾದಾಗ, ಅವರು ಬದುಕಬೇಕೆಂದು ಅನಿಸುವುದಿಲ್ಲ. ನಾನು ತೋರಿಕೆಗಾಗಿ ಇದನ್ನು ಮಾಡುತ್ತಿಲ್ಲ. ನಾನು ನಿದ್ರೆ ಮಾತ್ರೆಗಳನ್ನು ಸೇವಿಸುತ್ತಿದ್ದೇನೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಅವರು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯ ಗಡ್ಡ ತೆಗೆಸಲು 100 ರೂ ಮನಿ ಆರ್ಡರ್ ಮಾಡಿದ ಚಾಯ್ ವಾಲಾ!
“ನನಗೆ ಮಹಡಿ ಮೇಲಿಂದ ಜಿಗಿಯುವುದು, ಕೈ ಕತ್ತರಿಸುವುದು, ಇದೆಲ್ಲ ನನಗೆ ಇಷ್ಟವಿಲ್ಲ. ಅಂತಿಮವಾಗಿ, ನಾನು ಮಲಗುವ ಮಾತ್ರೆಗಳನ್ನು ಕಂಡುಕೊಂಡೆ. ಅಧಿಕ ರಕ್ತದೊತ್ತಡ ಇರುವವರಿಗೆ ಹೃದಯಘಾತ ಬರುವ ಸಾಧ್ಯತೆ ಇದೆ” ಎಂದು ಅವರು ಹೇಳಿದ್ದಾರೆ.
ಸುವೊ ಅವರ ಅಭಿಮಾನಿಯೊಬ್ಬರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಫೇಸ್ಬುಕ್ ಅನ್ನು ಪರಿಶೀಲಿಸಿ ನಟನ ಲೈವ್ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ನಂತರ, ಕೋಲ್ಕತಾ ಪೊಲೀಸರು ಆತನ ನಿವಾಸಕ್ಕೆ ತೆರಳಿ ರಕ್ಷಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಚಕ್ರವರ್ತಿಯ ತಾಯಿ ಮತ್ತು ಸಹೋದರಿ ಕೂಡ ಮನೆಯಲ್ಲಿದ್ದರು. ಆದರೆ, ಸುವೊ ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿರಲಿಲ್ಲ.
ಇದನ್ನೂ ಓದಿ: ನನ್ನ ವರ್ಗಾವಣೆಗೆ ಭೂ ಮಾಫಿಯಾ ಕಾರಣ; ದಾಖಲೆಗಳನ್ನು ಬಹಿರಂಗಪಡಿಸಿದ ಸಿಂಧೂರಿ!

