ಜೆಡಿಯು ರಾಜ್ಯ ಸಮಿತಿಯಲ್ಲಿ ಮಹಿಳೆಯರಿಗೆ 33% ಸ್ಥಾನಗಳು; ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಟ ಮೊದಲ ರಾಜಕೀಯ ಪಕ್ಷ!

ಬಿಹಾರ ಆಡಳಿತಾರೂಢ ಜನತಾದಳ (ಯುನೈಟೆಡ್) ಪಕ್ಷವು ತನ್ನ ರಾಜ್ಯ ಸಮಿತಿಯಲ್ಲಿ 30%ಗೂ ಹೆಚ್ಚು ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಈ ಮೂಲಕ ಉನ್ನತ ಸಮಿತಿಯಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ನೀಡಿರುವ ದೇಶದ ಮೊದಲ ರಾಜಕೀಯ ಪಕ್ಷ ತಮ್ಮದು ಎಂದು ಜೆಡಿಯು ಹೇಳಿಕೊಂಡಿದೆ.

ಪಕ್ಷದ ರಾಜ್ಯ ಸಮಿತಿಯಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡುವಂತೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಸಲಹೆ ನೀಡಿದ್ದು, ಅವರ ಸಲಹೆಯನ್ನು ಪಕ್ಷವು ಅನುಸರಿಸಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಉಮೇಶ್ ಕುಶ್ವಾಹಾ ತಿಳಿಸಿದ್ದಾರೆ.

ಒಟ್ಟು 211 (29 ಉಪಾಧ್ಯಕ್ಷರು, 60 ಪ್ರಧಾನ ಕಾರ್ಯದರ್ಶಿಗಳು, 114 ಕಾರ್ಯದರ್ಶಿಗಳು, 01 ಖಜಾಂಚಿ ಮತ್ತು 07 ವಕ್ತಾರರು) ಸದಸ್ಯರಿರುವ ಹೊಸ ಸಮಿತಿಗಳಲ್ಲಿ 66 ಮಹಿಳೆಯರನ್ನು ಸೇರಿಸಲಾಗಿದ್ದು, ಅವರ ಪ್ರಾತಿನಿಧ್ಯದ 33% ಇದೆ ಎಂದು ಪಕ್ಷವು ತಿಳಿಸಿದೆ.

ಇದನ್ನೂ ಓದಿ:ಗಂಗಾ ನದಿ ತೀರದಲ್ಲಿ ತೇಲಿದ 40ಕ್ಕೂ ಹೆಚ್ಚು ಮೃತ ದೇಹಗಳು : ಬಿಹಾರದಲ್ಲಿ ಕೋವಿಡ್ ಪ್ಯಾನಿಕ್!

ಪಕ್ಷದ ಮಹಿಳಾ ಮಾಜಿ ಸಚಿವರು ಮತ್ತು ಪಕ್ಷದ ಮುಖಂಡರಿಗೆ ಪಕ್ಷದ ಸಮಿತಿಗಳಲ್ಲಿ ಸೂಕ್ತ ಸ್ಥಾನ ನೀಡಲಾಗಿದೆ. “ಪಕ್ಷದ ಸಮಿತಿಗಳಲ್ಲಿ ಮಹಿಳೆಯರಿಗೆ 33% ಪಾಲನ್ನು ನೀಡುವ ಮೂಲಕ, ಜೆಡಿಯು ಮಹಿಳೆಯರ ರಾಜಕೀಯ ಸಬಲೀಕರಣದ ಬಗ್ಗೆ ತನ್ನ ನಿಜವಾದ ಕಾಳಜಿಯನ್ನು ಪ್ರದರ್ಶಿಸಿದೆ” ಎಂದು ಕುಶ್ವಾಹಾ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವುದಲ್ಲದೆ, ಅದರನ್ನು ಹೇಗೆ ಕಾರ್ಯಗತ ಮಾಡಬೇಕೆಂಬುದನ್ನೂ ತೋರಿಸಿದ್ದಾರೆ ಎಂದು ಕುಶ್ವಾಹ ಹೇಳಿದರು.

ಈ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಂಚಾಯತ್ ಚುನಾವಣೆಯಲ್ಲಿ ಮಹಿಳೆಯರಿಗೆ 50% ಕೋಟಾ ಘೋಷಿಸಿದ್ದರು. ಬಿಹಾರದಲ್ಲಿ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ 33% ಸೀಟುಗಳನ್ನು ಕಾಯ್ದಿರಿಸಲಾಗಿದೆ ಮತ್ತು ರಾಜ್ಯ ಪೊಲೀಸ್ ಸೇವೆಗಳ ಸರ್ಕಾರಿ ಉದ್ಯೋಗಗಳಲ್ಲಿ 35% ಕೋಟಾ ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಬಿಹಾರ LJP ಪಕ್ಷದಲ್ಲಿ ಬಂಡಾಯ; ಚಿರಾಗ್‌ ನಾಯಕತ್ವ ಬದಲಾವಣೆಗೆ ಸಿಎಂ ನಿತೀಶ್‌ ಕುಮಾರ್ ಸಂಚು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights