ದೇಶದ ಸಕ್ರಿಯ ಕೊರೊನಾ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ..

ಭಾರತದಲ್ಲಿ ಬುಧವಾರ ಒಂದೇ ದಿನ ಹೊಸದಾಗಿ 29,429 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ  970,169 ಕ್ಕೆ ಏರಿಕೆಯಾಗಿದೆ. ಇದೇ ವೇಳೆ 606 ಮಂದಿ ಮಹಾಮಾರಿ ವೈರಸ್’ಗೆ ಒಂದೇ ದಿನ ಬಲಿಯಾಗಿದ್ದು, ಈ ವರೆಗೆ ವೈರಸ್’ಗೆ ಬಲಿಯಾದವರ ಸಂಖ್ಯೆ 24,915ಕ್ಕೆ ಮತ್ತು ಟ್ಟು ಗುಣಮುಖರಾದವರ ಸಂಖ್ಯೆ 6,12,815ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಮೊದಲ ಬಾರಿಗೆ, ಕರ್ನಾಟಕವು ಕೋವಿಡ್-19 ನಲ್ಲಿ ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 3,000 ಕ್ಕೂ ಹೆಚ್ಚು ಜನರು ಧನಾತ್ಮಕ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ, ಕರ್ನಾಟಕ 47,253 ಕ್ಕೆ ತಲುಪಿದ್ದು, ಇದು ದೇಶದ ಮೂರನೇ ಅತಿಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ.

ದೇಶದ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮುಂಚುಣಿಯಲ್ಲಿರುವ ಮಹಾರಾಷ್ಟ್ರದಲ್ಲಿ 2,75,640 ಕೋರೊನಾ ಪ್ರಕರಣಗಳು ಇದ್ದು, ಇದರಲ್ಲಿ 1,11,801 ಸಕ್ರಿಯ ಪ್ರಕರಣಗಳಿವೆ, ಜೊತೆಗೆ 1,52,613 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ ತಮಿಳುನಾಡಿನಲ್ಲಿ 1,51,820 ಕೊರೊನಾ ಸೋಂಕಿತರಿದ್ದು, 47,343 ಮಾತ್ರ ಸಕ್ರಿಯ ಪ್ರಕರಣಗಳಿವೆ ಮತ್ತು 1,02,310 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ ಮೂರನೇ ಸ್ಥಾನದಲ್ಲಿ ದೆಹಲಿ ಇದ್ದು, ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,16,993 ಇದ್ದು ಸಕ್ರಿಯ ಪ್ರಕರಣಗಳು17,807 ಮಾತ್ರ ಇವೆ. ಗುಣಮುಖರಾದವರ ಸಂಖ್ಯೆ 95,699 ಜನರಿದ್ದಾರೆ. ಆದರೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47,253 ಇದ್ದು, ಸಕ್ರಿಯ ಪ್ರಕರಣಗಳು 27,849 ಇವೆ, ಇದರಲ್ಲಿ 18,467 ಸೋಂಕಿತರು ಮಾಥ್ರ ಗುಣಮುಖರಾಗಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights