ರಷ್ಯಾದಲ್ಲಿ ಕಾಣೆಯಾದ 22 ಪ್ರಯಾಣಿಕರು, ಆರು ಸಿಬ್ಬಂದಿ ಇದ್ದ ವಿಮಾನ!
28 ಜನರಿದ್ದ ವಿಮಾನ ರಷ್ಯಾದಲ್ಲಿ ಕಾಣೆಯಾಗಿದೆ. ರಷ್ಯಾದ ದೂರದ ಪೂರ್ವ ಪ್ರದೇಶದ ಕಮ್ಚಟ್ಕಾ ದ್ವೀಪದಲ್ಲಿ 28 ಜನರಿದ್ದ ಅರುಸಿಯನ್ ಎಎನ್ -26 ವಿಮಾನ ನಾಪತ್ತೆಯಾಗಿದೆ ಎಂದು ದೇಶದ ತುರ್ತು ಸಚಿವಾಲಯ ಮಂಗಳವಾರ ತಿಳಿಸಿದೆ.
ವಿಮಾನ ಇಳಿಯಲು ಪ್ರಯತ್ನಿಸುವಾಗ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು ಎಂದು TASS ಉಲ್ಲೇಖಿಸಿದೆ.
ಪ್ರಾದೇಶಿಕ ರಾಜಧಾನಿ ಪೆಟ್ರೊಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ಪರ್ಯಾಯ ದ್ವೀಪದ ಉತ್ತರ ಭಾಗದ ಪಲಾನಾ ಗ್ರಾಮಕ್ಕೆ ಹೋಗುವ ವಿಮಾನ ಹಾರಾಟದ ಸಮಯದಲ್ಲಿ ವಾಯು ಸಂಚಾರ ನಿಯಂತ್ರಣದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಸಚಿವಾಲಯ ತಿಳಿಸಿದೆ.
ಈ ಪ್ರದೇಶಕ್ಕೆ ತೆರಳಿದ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆದಿದೆ. ವಿಮಾನದಲ್ಲಿ 22 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಸಚಿವಾಲಯ ತಿಳಿಸಿದೆ.
ಸ್ಥಳೀಯ ಹವಾಮಾನ ಕೇಂದ್ರವನ್ನು ಉಲ್ಲೇಖಿಸಿ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ಈ ಪ್ರದೇಶದ ಹವಾಮಾನವು ಮೋಡವಾಗಿರುತ್ತದೆ ಎಂದು ಹೇಳಿದೆ.

