ಕೇಸರಿ ಬಣದಲ್ಲಿ ಸಿಎಂ ಬದಲಾವಣೆ ಬಡೆದಾಟ : ಸಿಎಂ ಖುರ್ಚಿಗೆ ಟವೆಲ್ ಹಾಕಿದ ನಾಯಕರು ಯಾರು..?
ಕೇಸರಿ ಬಣದಲ್ಲಿ ಸಿಎಂ ಬದಲಾವಣೆ ಬಡೆದಾಟ ಜೋರಾಗಿದ್ದು, ಸಿಎಂ ಸ್ಥಾನದ ಮುಂದಿನ ಆಕಾಂಕ್ಷಿಗಳು ಪಟ್ಟಕ್ಕಾಗಿ ಲಾಭಿ ನಡೆಸಿದ್ದಾರೆ.
ಕುಟುಂಬದ ಹಸ್ತಕ್ಷೇಪ ಹಾಗೂ ವಯಸ್ಸಿನ ಕಾರಣ ಒಡ್ಡಿ ಸಿಎಂ ಬದಲಾಗುವು ಸಾಧ್ಯತೆ ಇದೆ. ಮಾತ್ರವಲ್ಲದೇ ಸಿಎಂ ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಆಕ್ಷೇಪಗಳಿವೆ. ಹೀಗಾಗಿ ಜುಲೈ 26ಕ್ಕೆ ಬಿಜೆಪಿಯಲ್ಲಿ ಬಿರುಗಾಳಿ ಬೀಸಲಿದ್ದು, ಕೇಸರಿ ಬಣದ ಬಡಿದಾಟ ಮತ್ತಷ್ಟು ಜೋರಾಗಲಿದೆ.
ಸಿಎಂ ಸ್ಥಾನದಲ್ಲಿ ನಾನೇ ಫಸ್ಟ್ ಎಂದು ಹೇಳಿಕೊಳ್ಳುತ್ತಲೇ ಸಚಿವರು ಸಿಎಂ ಸ್ಥಾನ ಮೇಲೆ ಕಣ್ಣು ಇಟ್ಟಿದ್ದಾರೆ. ಹೀಗಾಗಿ ಕೇಸರಿ ಬಣದಲ್ಲಿ ಮುಂದಿನ ನಾಯಕರ ಚರ್ಚೆ ಜೋರಾಗಿದೆ. ಸಿಎಂ ಖುರ್ಚಿಗೆ ಟವೆಲ್ ಹಾಕಿದ ನಾಯಕರು ಯಾರು..? ಯಾರಿಗೆ ಸಿಎಂ ಪಟ್ಟ ಸಿಗಲಿದೆ ಅನ್ನೋ ಕುತೂಹಲ ಮೂಡಿಸಿದೆ.
ಜಗಧೀಶ್ ಶೆಟ್ಟರ್, ಸಚಿವ ಮುರುಗೇಶ್ ನಿರಾಣಿ ಸಿಎಂ ಖುರ್ಚಿಗಾಗಿ ತಮ್ಮದೇ ಮಟ್ಟದಲ್ಲಿ ಪ್ಲಾನ್ ನಡೆಸಿದ್ದಾರೆ. ಸಿಎಂ ರೇಶ್ ನಲ್ಲಿ ಬಸವರಾಜ್ ಬಪಮ್ಮಾಯಿ ಹೆಸರು ಕೂಡ ಮುಂಚುಣಿಯಲ್ಲಿದೆ. ಮಾಜಿ ಸಿಎಂ ಜಗದೀಶ್ ಶಟ್ಟರ್ ಲಿಂಗಾಯತ ಕೋಟಾದಲ್ಲಿ ಪ್ಲಸ್ ಪಾಯಿಂಟ್ ಹೊಂದಿದ್ದರೆ ಮತ್ತೊಮ್ಮೆ ಸಿಎಂ ಲಿಸ್ಟನಲ್ಲಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿಯೂ ಸ್ಥಾನ ಒಲಿಯುವ ನಿರೀಕ್ಷೆಯಲ್ಲಿದ್ದಾರೆ. ಸಿಎಂ ಜೊತೆ ಚೆನ್ನಾಗಿರುವುದರಿಂದ ಸಿಎಂ ಬೆಂಬಲವಿದೆ.
ಇನ್ನೂ ಅರವಿಂದ್ ಬೆಲ್ಲದ್ ಕೂಡ ಸಿಎಂ ರೇಸ್ ನಲ್ಲಿದ್ದು ಕಡಿಮೆ ವಯಸ್ಸು, ಆರ್ಎಸ್ಎಸ್ ಲೀಡರ್ಸ್ ಮೂಲಕ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಅಮಿತ್ ಶಾ ಅವರೊಂದಿಗೆ ಒಳ್ಳೆ ಸಂಬಂಧ ಹೊಂದಿದ್ದಾರೆನ್ನಲಾಗುತ್ತಿದೆ. ಜೊತೆಗೆ ಬಿವಿ ಸದಾನಂದನಗೌಡರ ಹೆಸರು ಕೂಡ ಸಿಎಂ ಸ್ಥಾನದಲ್ಲಿ ಕೇಳಿ ಬಂದಿದೆ. ಒಟ್ಟಿನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು ಒಂದು ವೇಳೆ ಜುಲೈ 26ಕ್ಕೆ ಸಿಎಂ ಬದಲವಾಣೆಯಾದರೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಅನ್ನೋ ಕಾದು ನೋಡಬೇಕಿದೆ.
ಇತ್ತ ಸಿಎಂ ಬದಲಾವಣೆಯಾದರೆ ತಮ್ಮ ಸ್ಥಾನ ಮಾನ ಬದಲಾಗುವ ಆತಂಕ ವಲಸೆ ಬಿಜೆಪಿಗರಿಗೆ ಕಾಡುತ್ತಿದೆ. ತಮ್ಮ ಸ್ಥನ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ವಲಸೆ ಬಿಜೆಪಿಗಳು ಸಭೆಗಳನ್ನ ಆಯೋಜಿಸುತ್ತಿದ್ದಾರೆ.
ಆದರೆ ಲಿಂಗಾಯತ ಸಮುದಾಯದ ಮಾಸ್ ಲೀಡರ್ ಆಗಿರುವ ಬಿಎಸ್ ವೈ ಯನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸುವುದು ಹೈಕಮಾಂಡ್ ಗೆ ಅಷ್ಟು ಸುಲಭವೇನಲ್ಲ. ಹೀಗಾಗಿ ಪಕ್ಷದಲ್ಲಿ ಅಸಮಧಾನ ಭುಗಿಲೇಳದಂತೆ ಹೈಕಮಾಂಡ್ ಎಚ್ಚರಿಕೆ ನಡೆ ಇಡುತ್ತಿದೆ.

