ಬೆಂಗಳೂರಲ್ಲಿ ಬದಲಾಯಿತು ಸಿಎಂ ಹೆಸರು? ಬೆಲ್ಲದ್ ಬದಲು ಬೊಮ್ಮಾಯಿಗೆ ಕುದುರಿತು ಲಕ್!

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿರುವ ಬಿಜೆಪಿ ಹೈಕಮಾಂಡ್‌, ಸಿಎಂಗಿರಿಯನ್ನು ಬಸವರಾಜ್‌ ಬೊಮ್ಮಾಯಿ ಅವರಿಗೆ ನೀಡಿದೆ.ಈ ಮಧ್ಯೆ, ಬಿಜೆಪಿಯ ವಿಕ್ಷಕರು ದೆಹಲಿಯಿಂದ ಬೆಂಗಳೂರಿಗೆ ಹೊರಟಾಗ ಅರವಿಂದ್‌ ಬೆಲ್ಲದ್‌ ಅವರನ್ನು ಸಿಎಂ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅವರು ಬೆಂಗಳೂರಿಗೆ ಬಂದ ನಂತರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿ ಬೊಮ್ಮಾಯಿ ಅವರನ್ನು ಸಿಎಂ ಎಂದು ಘೋಷಿಸಲಾಯಿತು. ಬಿಜೆಪಿ ವೀಕ್ಷಕರ ದೆಹಲಿ ಟು ಬೆಂಗಳೂರು ಪ್ರಯಾಣದ ಮಧ್ಯೆ ಆಗಿದ್ದೇನು, ಬೊಮ್ಮಾಯಿಗೆ ಲಕ್‌ ಕುದುರಿತಾ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆೆ ರಾಜೀನಾಮೆ ಸಲ್ಲಿಸಿದಾಗ ಬಹಿರಂಗವಾಗಿ ಯಾರನ್ನೂ ಮುಖ್ಯಮಂತ್ರಿ ಮಾಡುವಂತೆ ಸೂಚಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ತಾವು ಹುದ್ದೆೆ ತ್ಯಾಗ ಮಾಡಿದರೆ ತಮ್ಮ ಆಪ್ತ ಬಸವರಾಜ್ ಬೊಮ್ಮಾಾಯಿ ಅವರನ್ನು ಸಿಎಂ ಸ್ಥಾನಕ್ಕೆೆ ಪರಿಗಣಿಸುವಂತೆ ಹೈಕಮಾಂಡ್ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಅವರ ಬೇಡಿಕೆಯನು ಹೈಕಮಾಂಡ್ ನಾಯಕರು ಗಂಭೀರವಾಗಿ ಪರಿಗಣಿಸದೇ ಬೇರೆಯದೇ ಲೆಕ್ಕಾಾಚಾರದಲ್ಲಿ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಲೆಕ್ಕಾಾಚಾರದಲ್ಲಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಬರುಷ್ಟರಲ್ಲಿ ಬದಲು:

ರಾಜ್ಯ ಬಿಜೆಪಿ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ದೆಹಲಿಯಿಂದ ವೀಕ್ಷಕರಾಗಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಕಿಶನ್ ರೆಡ್ಡಿಿ ದೆಹಲಿ ಬಿಡುವಾಗ ಪಕ್ಷದ ಹೈಕಮಾಂಡ್ ನಾಯಕರು ಅರವಿಂದ ಬೆಲ್ಲದ್ ಅವರ ಹೆಸರು ಸೂಚಿಸಿ ಕಳುಹಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ, ಆರ್‌ಎಸ್‌ಎಸ್ ಕೂಡ ಅರವಿಂದ ಬೆಲ್ಲದ್ ಅವರನ್ನೇ ಮುಖ್ಯಮಂತ್ರಿ ಸ್ಥಾಾನಕ್ಕೆೆ ಪರಿಗಣಿಸಲು ಸೂಚನೆ ನೀಡಿತ್ತು ಎಂದು ಹೇಳಲಾಗುತ್ತಿದೆ.

ಆದರೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿರುವುದರಿಂದ ವೀರಶೈವ ಲಿಂಗಾಯತ ಸಮುದಾಯ ಸ್ವಾಾಮೀಜಿಗಳು ಬಹಿರಂಗವಾಗಿ ಪ್ರತಿಭಟನೆ ನಡೆಸುತ್ತಿರುವುದು ಹಾಗೂ ಸಮುದಾಯಕ್ಕೆೆ ಯಡಿಯೂರಪ್ಪ ಅವರ ಮೇಲೆ ಗೌರವದ ಹಾಗೂ ರಾಜ್ಯದ ಪ್ರಸ್ತುತ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ವಿರುದ್ದ ಹಾಕಿಕೊಂಡು ನಾಯಕನ ಆಯ್ಕೆೆ ಮಾಡಿದರೆ, ಸಂಘರ್ಷಕ್ಕೆೆ ಕಾರಣವಾಗುವ ಸಾಧ್ಯತೆ ಇದೆ ಅಲ್ಲದೇ ಪ್ರತಿಪಕ್ಷ ಕಾಂಗ್ರೆೆಸ್ ಕೂಡ ಅದರ ಲಾಭ ಪಡೆಯುವ ಪ್ರಯತ್ನ ನಡೆಸಬಹುದು ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆೆ ತೆಗೆದುಕೊಂಡು ನಾಯಕನ ಆಯ್ಕೆ ಮಾಡುವುದು ಸೂಕ್ತ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆಯಿಂದ ಮನನೊಂದ ಅಭಿಮಾನಿ ಆತ್ಮಹತ್ಯೆ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ, ಯಡಿಯೂರಪ್ಪ ಅವರನ್ನು ವಿಶ್ವಾಾಸಕ್ಕೆೆ ತೆಗೆದುಕೊಂಡು ಅವರು ಸೂಚಿಸಿದವರಿಗೆ ಆದ್ಯತೆ ನೀಡಲು ಮನವರಿಕೆ ಮಾಡಿದ್ದಾಾರೆ ಎಂದು ಹೇಳಲಾಗುತ್ತಿದೆ.
ಆ ನಂತರ ರಾಜ್ಯಕ್ಕೆೆ ಆಗಮಿಸಿದ ವೀಕ್ಷಕರು ಯಡಿಯೂರಪ್ಪ ಅವರ ನಿವಾಸ ಕಾವೇರಿಗೆ ತೆರಳಿ ಅಲ್ಲಿಯೇ ತಾವು ಸೂಚಿಸಿದವರಿಗೆ ಮುಖ್ಯಮಂತ್ರಿ ಮಾಡಲು ಪಕ್ಷ ಸಿದ್ದವಿದೆ ಎಂದು ಹೈಕಮಾಂಡ್‌ನ ಸಂದೇಶ ತಿಳಿಸಿದ್ದಾರೆ ಎನ್ನಲಾಗಿತ್ತು. 

ತಿಳಿದವರನ್ನು ಆಯ್ಕೆ ಮಾಡಿ:

ಕೇಂದ್ರದಿಂದ ಆಗಮಿಸಿದ ವೀಕ್ಷಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗಲೂ ಯಡಿಯೂರಪ್ಪ ನಿಮಗೆ ಬೇಕಾದವರನ್ನು ಆಯ್ಕೆೆ ಮಾಡಿ ಎಂದು ಬೇಸರದಿಂದಲೇ ಹೇಳಿದ್ದರು ಎನ್ನಲಾಗಿದ್ದು, ಆದರೆ, ತಮ್ಮ ಆಯ್ಕೆಯಾದರೆ, ತಾವು ಮೊದಲೇ ಸೂಚಿಸಿರುವಂತೆ ಬಸವರಾಜ್ ಬೊಮ್ಮಾಾಯಿ ಅವರನ್ನು ಮಾಡಬೇಕೆಂದು ಹೇಳಿದ್ದರು ಎಂದು ತಿಳಿದು ಬಂದಿದೆ. ಅವರ ಸೂಚನೆಯಮತೆ ಬಿಜೆಪಿ ಹೈಕಮಾಂಡ್ ಬಸವರಾಜ್ ಬೊಮ್ಮಾಾಯಿ ಅವರ ಹೆಸರನ್ನು ಯಡಿಯೂರಪ್ಪ ಅವರಿಂದಲೇ ಘೋಷಣೆ ಮಾಡಿಸಿ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಪದಚ್ಯುತಿಯಿಂದ ಭವಿಷ್ಯದಲ್ಲಿ ಪಕ್ಷದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮದಿಂದ ಪಾರಾಗುವ ಪ್ರಯತ್ನ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಸಿಎಂ ಆಗಿ 2 ತಿಂಗಳಾದರೂ ಸಂಪುಟ ರಚನೆಗೆ ಕೇಂದ್ರದವರು ಬಿಡಲಿಲ್ಲ; ಹುಚ್ಚನಂತೆ ತಿರುಗಿದೆ: ಯಡಿಯೂರಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights