ನೂತನ ಸಚಿವ ಸಂಪುಟಕ್ಕೆ ಗ್ರೀನ್ ಸಿಗ್ನಲ್; ಸಾಂಭವ್ಯ ಸಚಿವರ ಪಟ್ಟಿ ಹೀಗಿದೆ; ವಲಸಿಗರಿಗೆ ಕೋಕ್ ಕೊಟ್ಟ ಹೈಕಮಾಂಡ್!
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ, ನೂತನ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಇಂದು ಮಧ್ಯಾಹ್ನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ತಮ್ಮ ಸಂಪುಟದಲ್ಲಿ ಯಾರೆಲ್ಲಾ ಸಚಿವರಾಗಲಿದ್ದಾರೆ ಎಂಬ ಗುಟ್ಟನ್ನು ಸಿಎಂ ಬೊಮ್ಮಾಯಿ ಇನ್ನೂ ಬಿಟ್ಟು ಕೊಟ್ಟಿಲ್ಲ. ಆದರೆ, ಸ್ವತಃ ಬೊಮ್ಮಾಯಿ ಅವರೇ ನೂತನ ಸಚಿವರಿಗೆ ಕರೆ ಮಾಡಿ ಪ್ರಮಾಣವಚನಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪೈಕಿ, ಈ ನಡುವೆ ಮಾಜಿ ಸಚಿವ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ. ನನಗೆ ಬೊಮ್ಮಾಯಿ ಅವರೇ ಕರೆ ಮಾಡಿ ಪ್ರಮಾಣ ವಚನಕ್ಕೆ ಬರಬೇಕು ಎಂದು ಆಹ್ವಾನಿಸಿದ್ದಾರೆ ಎಂದು ಕಾರಜೋಳ ತಿಳಿಸಿದ್ದಾರೆ.
ಇವರಲ್ಲದೆ ಇನ್ನೂ ಹಲವರಿಗೆ ಕರೆ ಬಂದಿದೆ ಎನ್ನಲಾಗಿದ್ದು, ಆ ಪಟ್ಟಿ ಹೀಗಿದೆ:
ಗೋವಿಂದ ಕಾರಜೋಳ
ಕೆ.ಎಸ್.ಈಶ್ವರಪ್ಪ
ಬಿ.ಶ್ರೀರಾಮುಲು
ಡಾ.ಕೆ.ಸುಧಾಕರ್
ಅರವಿಂದ ಲಿಂಬಾವಳಿ
ಆರ್.ಅಶೋಕ್
ಬಿ.ಸಿ.ಪಾಟೀಲ್
ಮಾಧುಸ್ವಾಮಿ
ಅರಗ ಜ್ನಾನೇಂದ್ರ
ಎಸ್.ಅಂಗಾರ
ಪೂರ್ಣಿಮಾ ಶ್ರೀನಿವಾಸ್
ಬೈರತಿ ಬಸವರಾಜ್
ಉಮೇಶ್ ಕತ್ತಿ
ಆನಂದ್ ಸಿಂಗ್
ವಿ.ಸೋಮಣ್ಣ
ಡಾ.ಅಶ್ವತ್ಥನಾರಾಯಣ
ಶಿವರಾಮ್ ಹೆಬ್ಬಾರ್
ಎಸ್.ಟಿ.ಸೋಮಶೇಖರ್
ಮುನಿರತ್ನ
ಕೆ.ಗೋಪಾಲಯ್ಯ
ಸುನೀಲ್ ಕುಮಾರ್
ಪ್ರಭು ಚೌವ್ಹಾಣ್
ಇಷ್ಟು ಮಂದಿಗೆ ಕರೆ ಬಂದಿದೆ ಎಂದು ತಿಳಿದು ಬಂದಿದೆ. ಇವರಲ್ಲದೆ ನವಲಗುಂದ ಕ್ಷೇತ್ರದ ಬಿಜೆಪಿ ಶಾಸಕ ಶಂಕರ್ ಪಾಟೀಲ್ ಅವರಿಗೂ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

