ವಿದ್ಯಾರ್ಥಿ ಬದಲಾಗಿ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡಿದ ಗೊಂಬೆ..!

ಕೊರೊನಾ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿನೇ ಮಕ್ಕಳಿಗೆ ಪೋಷಕರು ದುಬಾರಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳನ್ನ ಕೊಡಿಸಿರುವುದಿದೆ. ಆದರೆ ಈ ಆನ್ ಲೈನ್ ಶಿಕ್ಷಣವನ್ನು ತಪ್ಪಿಸಲು ಕೆಲ ಮಕ್ಕಳು ಮಾಡುತ್ತಿರುವ ಪ್ಲ್ಯಾನ್ ಕೆಲವರನ್ನ ಹುಬ್ಬೇರಿಸುವಂತೆ ಮಾಡಿದೆ. ಇನ್ನೂ ಕೆಲವರನ್ನು ಆಶ್ಚರ್ಯಗೊಳಿಸಿದರೆ ಮತ್ತೂ ಕೆಲವರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿರೋದಿದೆ.

ಇಂಥದ್ದೇ ಘಟನೆಯೊಂದು ಆನ್ ಲೈನ್ ಶಿಕ್ಷಣದಿಂದ ತಪ್ಪಿಸಲು ವಿದ್ಯಾರ್ಥಿಯೊಬ್ಬಳು ಮಾಡಿದ ಪ್ಲ್ಯಾನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹೌದು.. ವಿದ್ಯಾರ್ಥಿನಿಯೊಬ್ಬಳು ಆನ್ ಲೈನ್ ಶಿಕ್ಷಣವನ್ನು ತಪ್ಪಿಸಲು ಶಿಕ್ಷಕರನ್ನೇ ಮೂರ್ಖರನ್ನಾಗಿ ಮಾಡಿದ್ದಾಳೆ. ಲಾಪ್ ಟಾಪ್ ಮುಂದೆ ತಾನು ಕುಳಿತು ಪಾಠ ಕೇಳುವಂತೆ ಗೊಂಬೆಯೊಂದರ ಮುಖವನ್ನ ಕ್ಯಾಮರಾ ಸ್ಕ್ರೀನ್ ಗೆ ಇಟ್ಟಿದ್ದಾಳೆ. ಗೊಂಬೆಗೆ ಮಾಸ್ಕ್ ಹಾಕಿ ಸೋಫಾ ಮೇಲೆ ನಿದ್ರೆ ಮಾಡುತ್ತಿರುವ ವಿದ್ಯಾರ್ಥಿನಿಯ ಪ್ಲ್ಯಾನ್ ನಿಜಕ್ಕೂ ನೋಡುಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ.

https://twitter.com/derrickdmv/status/1438470947841970183?ref_src=twsrc%5Etfw%7Ctwcamp%5Etweetembed%7Ctwterm%5E1438470947841970183%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fkannada%2Fworld%2Fgirl-keeps-dolls-head-for-online-class-while-napping-herself-54750

ತರಗತಿಯಿಂದ ಬೇಜಾರಾದಾಗ ತನ್ನದೇ ರೀತಿಯ ಗೊಂಬೆಯೊಂದನ್ನು ಸಿದ್ಧಪಡಿಸಿ ಅದನ್ನು ಲ್ಯಾಪ್‌ಟಾಪ್ ಮುಂದೆ ಕುರಿಸಿದ್ದಾಳೆ. ಇದನ್ನು ನೋಡಿದರೆ ಹುಡುಗಿ ಆನ್‌ಲೈನ್ ಕ್ಲಾಸ್ ಕೇಳುತ್ತಿದ್ದಾಳೆಂಬಂತೆ ಕಾಣುತ್ತದೆ. ಯಾರಿಗೂ ಸಂಶಯ ಬಾರದಂತೆ ಪ್ಲಾನ್ ಮಾಡಿದ ಹುಡುಗಿ ಪಕ್ಕದಲ್ಲಿಯೇ ನಿದ್ರೆಗೆ ಹೋಗಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights