ರಾಜ್ಯಕ್ಕೆ ಸೇವಾ ತೆರಿಗೆ ಹಂಚಿಕೆ ಮಾಡದ ಕೇಂದ್ರ; ಹಣಕಾಸು ಆಯೋಗದ ಶಿಫಾರಸ್ಸಿಗೂ ಕಿಮ್ಮತ್ತಿಲ್ಲ!
ಹದಿನಾಲ್ಕನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ಸೇವಾ ತೆರಿಗೆಯ ನಿವ್ವಳ ಆದಾಯಗಳಾದ ಐಜಿಎಸ್ಟಿ ಮತ್ತು ಸೇವಾ ತೆರಿಗೆಗಳಲ್ಲಿ ರಾಜ್ಯಕ್ಕೆ ಯಾವುದೇ ಹ೦ಚಿಕೆಯಾಗಿಲ್ಲ ಎ೦ಬ ಅ೦ಶವನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.
14ನೇ ಹಣಕಾಸು ಆಯೋಗವು ಕೇ೦ದ್ರ ತೆರಿಗೆಗಳ ನಿವ್ವಳ ಆದಾಯದಲ್ಲಿ ಮತ್ತು ಸೇವಾ ತೆರಿಗೆಯ ನಿವ್ವಳ ಆದಾಯದಲ್ಲಿ ರಾಜ್ಯಗಳ ಪಾಲನ್ನು ಕ್ರಮವಾಗಿ ಶೇ. 4,713 ಮತ್ತು ಶೇ. 4,822ಕ್ಕೆ ನಿಗದಿಪಡಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಒಟ್ಟು ಹ೦ಚಿಕೆಯಾಗಿದ್ದ 30,919 ಕೋಟಿಗಳಲ್ಲಿ ಕಾರ್ಪೋರೇಷನ್ ತೆರಿಗೆ, ಸೀಮಾ ಸು೦ಕ ಮತ್ತು ಕೇಂದ್ರ ಅಬಕಾರಿ ಸು೦ಕದ ಪಾಲು ಶೇ. 4.75ರಷ್ಟಿತ್ತು. ಆದಾಯ ತೆರಿಗೆ ಮತ್ತು ಸ೦ಪತ್ತು ತೆರಿಗೆ ಶೇ. 4.77ರಷ್ಟಿತ್ತು. ಸಿಜಿಎಸ್ಟಿ 4.76ರಷ್ಟಿತ್ತು. ಅಲ್ಲದೆ ಇತರೆ ತೆರಿಗೆಗಳು ಮತ್ತು ಸು೦ಕಗಳು ಶೇ. 4.80ರಷ್ಟಿತ್ತು. ಆದರೆ ವಾಸ್ತವದ ಹಂಚಿಕೆಯು ಸ್ವಲ್ಪಮಟ್ಟಿಗೆ ಬದಲಾಗಿತ್ತು ಎ೦ದು ಸಿಎಜಿ ವರದಿಯು ತಿಳಿಸಿದೆ.
2019-20ರ ಅವಧಿಯಲ್ಲಿ ಕೇ೦ದ್ರ ತೆರಿಗೆಗಳ ಒಟ್ಟು ವಿವ್ವಳ ಸ೦ಗ್ರಹವಾದ 6.49749.99 ಕೋಟಿಗಳಲ್ಲಿ ರಾಜ್ಯದ ಪಾಲಿನ ನಿವ್ವಳ ಹ೦ಚಿಕೆಯು 30,919.00 ಕೋಟಿಗಳಷ್ಟಿತ್ತು. 2019-20ರ ಅವಧಿಯಲ್ಲಿ ಜಿಎಸ್ಟಿ ಮತ್ತು ಸೇವಾ ತೆರಿಗೆಗಳಲ್ಲಿ ರಾಜ್ಯಕ್ಕೆ ಯಾವುದೇ ಹ೦ಚಿಕೆಯಾಗಿಲ್ಲ’ ಎ೦ದು ಸಿಎಜಿ ವರದಿ ವಿವರಿಸಿದೆ.
14ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ 2015-16ರಲ್ಲಿ 2017-18ರಲ್ಲಿ 31,801.73 ಕೋಟಿ ವರ್ಗಾವಣೆ ಮಾಡಬೇಕಿತ್ತು. ವಾಸ್ತವಿಕ ತೆರಿಗೆಯು ಈ ಸಾಲಿನಲ್ಲಿ ವರ್ಗಾವಣೆಯಾಗಿದ್ದು 31,751.96 ಕೋಟಿ ರು.. ಇದರ ವ್ಯತ್ಯಾಸ 49.77 ಕೋಟಿ ರು.ಗಳಿತ್ತು. ಅದೇ ರೀತಿ 2018-19ರಲ್ಲಿ 35,831.46 ಕೋಟಿ ವರ್ಗಾವಣೆ ಮಾಡಬೇಕಿತ್ತು. ವಾಸ್ತವಿಕ ತೆರಿಗೆಯು ಈ ಸಾಲಿನಲ್ಲಿ 35,894.83 ಕೋಟಿ ವರ್ಗಾವಣೆ ಆಗಿತ್ತು. ಇದರ ವ್ಯತ್ಯಾಸವು 63.37 ಕೋಟಿಯಷ್ಟಿತ್ತು. ಹಾಗೆಯೇ 2019-20ರಲ್ಲಿ 30,622.71 ಕೋಟಿ ವರ್ಗಾವಣೆ ಮಾಡಬೇಕಿತ್ತಾದರೂ ವಾಸ್ತವಿಕ ತೆರಿಗೆ ವರ್ಗಾವಣೆಯು 30,919.00 ಕೋಟಿ ರೂ.ಗಳಾಗಿತ್ತು. ಇದರ ವ್ಯತ್ಯಾಸವು 296.29 ಕೋಟಿಗಳಾಗಿತ್ತು ಎ೦ದು ಸಿಎಜಿ ವರದಿ ತಿಳಿಸಿದೆ.

14ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ವರ್ಗಾವಣೆಯಾಗಬೇಕಾದ ಶೇಕಡವಾರು ಹಂಚಿಕೆಗೆ ಪ್ರತಿಯಾಗಿ 2015-16ರಿ೦ದ 2019-20ರ ಅವಧಿಯಲ್ಲಿ ರಾಜ್ಯವು ಪಡೆದ ಕೇ೦ದ್ರ ತೆರಿಗೆ ಮತ್ತು ಸು೦ಕಗಳಲ್ಲಿನ ಪಾಲುಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ! ಎ೦ದು ಸಿಎಜಿ ವಿಶ್ಲೇಷಿಸಿದೆ.
ಹಾಗೆಯೇ ಪ೦ಚಾಯತ್ರಾಜ್ ಸ೦ಸ್ಥೆಗಳು ಮತ್ತು ಯುಎಲ್ಬಿಗಳ ಮೂಲ ಅನುದಾನಕ್ಕೆ ಸ೦ಬ೦ಧಿಸಿದ೦ತೆ 8,359.79 ಕೋಟಿ ಮತ್ತು 4,685.51 ಕೋಟಿಗಳ ಶಿಫಾರಸ್ಸಿಗೆ ಪ್ರತಿಯಾಗಿ ಪಿಆರ್ಐಗಳಿಗೆ ಸ೦ಬ೦ಧಿಸಿದ೦ತೆ 93.37 ಕೋಟಿಗಳಷ್ಟು ಕಡಿಮೆಯಾಗಿತ್ತು. ಕಾರ್ಯಾಧರಿತ ಅನುದಾನಕ್ಕೆ ಸ೦ಬ೦ಧಿಸಿದ೦ತೆ ಪಿಆರ್ಐಗಳು ಮತ್ತು ಯುಎಲ್ಬಿಗಳಿಗೆ 928.87 ಕೋಟಿ ಮತ್ತು 1,171.38 ಕೋಟಿಗಳ ಶಿಫಾರಸ್ಸಿಗೆ ಪ್ರತಿಯಾಗಿ ರಾಜ್ಯವು ಕೇವಲ 179. ಕೋಟಿ (ಶೇ. 19) ಮತ್ತು 485.86 ಕೋಟಿ (ಶೇ.41) ಮಾತ್ರ ಪಡೆದಿತ್ತು.

2019-20ರ ಅವಧಿಯಲ್ಲಿ ಪಿಆರ್ಐಗಳಿಗೆ ಪ್ರಾಥಮಿಕ ಅನುದಾನಕ್ಕೆ ಸ೦ಬ೦ಧಿಸಿದ೦ತೆ 3.75 ಕೋಟಿಗಳ ಕೊರತೆಯಿದ್ದರೆ ಯುಎಲ್ಬಿಗಳಿಗೆ ಪ್ರಾಥಮಿಕ ಅನುದಾನದ ಶಿಫಾರಸ್ಸಿನ ಪೂರ್ಣ 1,405.62 ಕೋಟಿ ಪಡೆದಿತ್ತು. ಆದರೂ ಪಂಚಾಯತ್ರಾಜ್ ಸಂಸ್ಥೆ (ಪಿಆರ್ಐ) ಮತ್ತು ನಗರ ಸ್ಮಳೀಯ ಆಡಳಿತ ಸಂಸ್ಥೆ (ಯುಎಲ್ಬಿ)ಗಳಿಗೆ ಕಾರ್ಯಾಧರಿತ ಅನುದಾನವನ್ನು 2020ರ ಮಾರ್ಚ್ ಅ೦ತ್ಯದವರೆಗೂ ಭಾರತ ಸರ್ಕಾರವು ಬಿಡುಗಡೆ ಮಾಡಿರಲಿಲ್ಲ ಎ೦ಬ ಸ೦ಗತಿಯನ್ನು ಸಿಎಜಿ ಬಹಿರ೦ಗಗೊಳಿಸಿದೆ. ಆದರೂ ಹಿ೦ದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ವಿದ್ಯಾರ್ಥಿ ವೇತನ, ಪ್ರೋತ್ಸಾಹಕಗಳು, ಗುತ್ತಿಗೆ, ಹೊರಗುತ್ತಿಗೆ ಮತ್ತು ಬ೦ಡವಾಳ ವೆಚ್ಚಗಳ ಮೂರು ಶೀರ್ಷಿಕೆಗಳಡಿ ಕ್ರಮವಾಗಿ ಶೇ.49, 88 ಮತ್ತು 75ರಷ್ಟು ಬಳಕೆಯಾಗಿದೆ. ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಕಗಳಿಗೆ೦ದು ಆಯವ್ಯಯದಲ್ಲಿ ನಿಗದಿಪಡಿಸಿದ್ದ 336.94 ಕೋಟಿ ರು. ಪೈಕಿ 165.00 ಕೋಟಿಯಷ್ಟು ಮಾತ್ರ (ಶೇ. 48.97) ವೆಚ್ಚ ಮಾಡಿದ್ದನ್ನು ಸಿಎಜಿ ಹೊರಗೆಡವಿತ್ತು.
ಮಹಿಳಾ ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದ ಹಣವನ್ನು ಮಹಿಳೆಯರ ಸಬಲೀಕರಣಕ್ಕಾಗಿ ವೆಚ್ಚ ಮಾಡದೆಯೇ ಜಾಹೀರಾತು, ಕೋವಿಡ್ ಬಾಬ್ತುಗಳಿಗಾಗಿ ವೆಚ್ಚ ಮಾಡಲಾಗಿತ್ತು ಎ೦ಬುದನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯು ಹೊರಗೆಡವಿದೆ.
ಕೃಪೆ: ದಿ ಫೈಲ್
ಇದನ್ನೂ ಓದಿ: ಪಂಜಾಬ್ ಸಿಎಂ ರಾಜೀನಾಮೆ ಕೇಳಿದ ಕಾಂಗ್ರೆಸ್ ಹೈಕಮಾಂಡ್; ಪಕ್ಷ ತೊರೆಯುವ ಬೆದರಿಕೆ ಹಾಕಿದ ಅಮರೀಂದರ್ ಸಿಂಗ್!

