ಮಳೆಬಿಲ್ಲಿನ ಹೆಬ್ಬಾವು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನೋಡಿ…!

ಮಳೆಬಿಲ್ಲಿನ ಹೆಬ್ಬಾವನ್ನ ನೀವು ಎಂದಾದರೂ ನೋಡಿದ್ದೀರಾ? ನೋಡಿಲ್ಲಾ ಅಂತಾದರೆ ನೀವು ಈ ವೀಡಿಯೋವನ್ನು ನೋಡಲೇಬೇಕು. ಯಾಕಂದ್ರೆ ಈ ಹಾವು ಅಪರೂಪದ ಹಾಗೂ ನಂಬಲು ಅಸಾಧ್ಯವಾದ ಬಣ್ಣವನ್ನು ಹೊಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು 20 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರೆ.

ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದ ಸಂಸ್ಥಾಪಕರಾದ ಜೇ ಬ್ರೂವರ್, ರೆಟಿಕ್ಯುಲೇಟೆಡ್ ಪೈಥಾನ್ ನ ಈ ಅದ್ಭುತ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಹಾವಿನ ಬಣ್ಣ ನೋಡುಗರನ್ನು ಬೆರಗುಗೊಳಿಸುತ್ತದೆ. ಕಳೆದ ಮೇ ತಿಂಗಳಲ್ಲಿ ಬ್ರೂವರ್ ತಮ್ಮ ಇನ್ಸ್ಟಾ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದರು. ಈವರೆಗೆ ಇದು ಇದು 20 ಮಿಲಿಯನ್ ವೀಕ್ಷಣೆಗಳು ಮತ್ತು 998 ಕೆ ಲೈಕ್‌ಗಳನ್ನು ಹೊಂದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇಂತಹ ಅದ್ಭುತ ವೀಡಿಯೋಗಳನ್ನು ಜೇ ಬ್ರೂವರ್ ಆಗಾಗ ಹಂಚಿಕೊಳ್ಳುತ್ತಾರೆ. ಈ ಬಾರಿ ಅವರು ಮಳೆಬಿಲ್ಲು ಹೆಬ್ಬಾವಿನ ವೀಡಿಯೋ ಹಂಚಿಕೊಂಡಿದ್ದಾರೆ. 

ಹಾವಿನ ಬಣ್ಣದ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights