ಡಿಕೆ ಶಿವಕುಮಾರೇ ಯಾಕೆ ಜಮೀರ್ ಮನೆ ಮೇಲೆ ರೇಡ್ ಮಾಡಿಸಿರಬಾರದು? – ಎಸ್ ಟಿ ಸೋಮಶೇಖರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಯಾಕೆ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ರೇಡ್ ಮಾಡಿಸಿರಬಾರದು ಎಂದು ಸಚಿವ ಎಸ್ ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, “ ಜಮೀರ್ ಅಹ್ಮದ್ ಯಾವಗಲೂ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಹೇಳುತ್ತಲೇ ಇದ್ದರು. ಜಮೀರ್ ಅವರ ಈ ಹೇಳಿಕೆ ಡಿಕೆ ಶಿವಕುಮಾರ್ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಅವರೇ ಯಾಕೆ ಜಮೀರ್ ಮನೆ ಮೇಲೆ ಇಡಿ ದಾಳಿ ಮಾಡಿಸಿರಬಾರದು. ಅದು ಅಲ್ಲದೇ ಇಡಿ-ಐಟಿಯ ಲಿಂಕ್ ಡಿಕೆ ಶಿವಕುಮಾರ್ ಅವರಿಗಿದೆ. ಅವರು ಬಿಜೆಪಿ ಕಡೆಗೆ ಬೆಟ್ಟು ಮಾಡುವಾಗ ನಾವು ಹೀಗೆ ಕಾಂಗ್ರೆಸ್ ಕಡೆಗೆ ಬೆರಳು ತೋರಿಸಬಹುದು ಅಲ್ವಾ? ಅಂದು ತಿರುಗೇಟು ಕೊಟ್ಟಿದ್ದಾರೆ.
ನಿನ್ನೆ ದೆಹಲಿಯಿಂದ ಡಿಕೆ ಶಿವಕುಮಾರ್ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿಯನ್ನು ಖಂಡಿಸಿದ್ದರು. ಜೊತೆಗೆ ಇದು ಉದ್ದೇಶ ಪೂರ್ವಕ ದಾಳಿಯಾಗಿದೆ. ಬಿಜೆಪಿ ಅಧಿಕಾರವನ್ನು ದುರಪಯೋಗಪಡಿಸಿಕೊಳ್ಳುತ್ತಿದೆ ಎಂದಿದ್ದರು. ಇದಕ್ಕೆ ಇಂದು ಎಸ್ ಟಿ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.
ಇಡಿ ಮತ್ತು ಐಟಿ ಅವರ ಕೆಲಸ ಅವರು ಮಾಡುತ್ತಾರೆ. ಬೇಕಾದ ದಾಖಲಾತಿ ಹಾಗೂ ಮಾಹಿತಿಯನ್ನು ಸರಿಯಾಗಿ ನೀಡಿದರೆ ಆತ್ಯ.ಅದನ್ನು ಬಿಟ್ಟು ಬೇರೆ ರೀತಿ ಮಾತನಾಡುವುದು ಏನಿದೆ.ವ್ಯವಹಾರಗಳು ಸರಿಯಾಗಿದ್ದರೆ ಆಯ್ತು. ಇವರನ್ನು ನೋಡಿದರೆ ಏನೋ ವ್ಯವಹಾರಗಳು ಸರಿಯಿಲ್ಲ ಎಂದು ಕಾಣುತ್ತದೆ ಹೀಗಾಗಿ ಬೇರೆದ್ದೇ ಮಾತನಾಡುತ್ತಿದ್ದಾರೆಂದು ವಾಗ್ದಾಳಿ ಮಾಡಿದ್ದಾರೆ.

