ಮುಳ್ಳುತಂತಿಯ ಮೇಲೆ ಮಕ್ಕಳನ್ನು ಎಸೆದು ಕಾಪಾಡುವಂತೆ ಯುಎಸ್ ಸೈನ್ಯವನ್ನು ಬೇಡುತ್ತಿರುವ ಕಾಬೂಲ್ ಜನ!

ಮುಳ್ಳುತಂತಿಯ ಮೇಲೆ ಮಕ್ಕಳನ್ನು ಎಸೆದು ಕಾಪಾಡುವಂತೆ ಯುಎಸ್ ಸೈನ್ಯವನ್ನು ಕಾಬೂಲ್ ಜನ ಬೇಡಿಕೊಳ್ಳುತ್ತಿರುವ ಕರುಣಾಜನಕ ದೃಶ್ಯದ ಬಗ್ಗೆ ಪ್ರತ್ಯಕ್ಷ ದರ್ಶಿಯೊಬ್ಬರು ಹಂಚಿಕೊಂಡಿದ್ದಾರೆ.

ತಾಲಿಬಾನಿಗಳು ಅಫ್ಘನ್ ಆಕ್ರಮಿಸಿಕೊಂಡ ಬಳಿಕ ಕಾಬೂಲ್ ಜನ ದೇಶ ತೊರೆಯಲು ಹರಸಾಹಸಪಡುತ್ತಿದ್ದಾರೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಪ್ರಾಣದ ಹಂಗು ತೊರೆದು ಚಲಿಸುವ ವಿಮಾನದತ್ತ ಓಡುತ್ತಿರುವ ದೃಶ್ಯಗಳು ಕರಳನ್ನೇ ಚುರುಕೆನ್ನಿಸುತ್ತಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಡೆಗೋಡೆಯಂತೆ ಹಾಕಿರುವ ಮುಳ್ಳುತಂತಿಯ ಮೇಲೆ ಚಿಕ್ಕಮಕ್ಕಳನ್ನು ಎಸೆದು ಕಾಪಾಡುವಂತೆ ಯುಎಸ್ ಸೈನ್ಯವನ್ನು ಮಹಿಳೆಯರು ಕೇಳಿಕೊಳ್ಳುವ ದೃಶ್ಯವನ್ನು ಕಂಡು ಯುಎಸ್ ಸೈನಿಕರು ಮರುಕ ವ್ಯಕ್ತಪಡಿಸಿದ್ದಾರೆ.

ಎಸ್.. ಇದು ತಾಲಿಬಾನ್ ಅಟ್ಟಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಾವಿರಾರು ಹತಾಶ ಅಫ್ಘನ್ನರು ಸೈನ್ಯದ ಸಹಾಯಕ್ಕಾಗಿ ಕಣ್ಣೀರಾಕುತ್ತಿದ್ದಾರೆ. ಸ್ಕೈ ನ್ಯೂಸ್‌ನ ವರದಿ ಪ್ರಕಾರ, ತಾಲಿಬಾನ್‌ಗಳ ವಿರುದ್ಧ ಕಾವಲು ಕಾಯುವ ದೈನಂದಿನ ಅನುಭವದ ಬಗ್ಗೆ ಮತ್ತು ಸಾವಿರಾರು ಅಫ್ಘಾನಿಸ್ತಾನಿಗಳು ಸೈನ್ಯವನ್ನು ಹೇಗೆ ಬೇಡಿಕೊಳ್ಳುತ್ತಿದ್ದಾರೆಂದು ವಿವರಿಸಿದೆ. ಹಿರಿಯ ಬ್ರಿಟಿಷ್ ಸೇನಾ ಅಧಿಕಾರಿಯೊಬ್ಬರು ವರದಿಗಾರರಿಗೆ ಹೇಳುವಂತೆ,  ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ಮುಳ್ಳುತಂತಿಯ ಮೇಲೆ ಎಸೆದು ಸೈನ್ಯವನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಿದ್ದಾರೆ.

“ಈ ದೃಶ್ಯಗಳು ನಿಜಕ್ಕೂ ಭಯಾನಕವಾಗಿದೆ. ಮಹಿಳೆಯರು ತಮ್ಮ ಶಿಶುಗಳನ್ನು ರೇಜರ್ ತಂತಿಯ ಮೇಲೆ ಎಸೆಯುತ್ತಿದ್ದರು. ಸೈನಿಕರನ್ನು ಕರೆದುಕೊಂಡು ಹೋಗುವಂತೆ ಕೇಳುತ್ತಿದ್ದರು. ಹೀಗೆ ಎಸೆದ ಮಕ್ಕಳಲ್ಲಿ ಕೆಲ ಮಕ್ಕಳು ಮುಳ್ಳು ತಂತಿಯಲ್ಲಿ ಸಿಲುಕಿಕೊಂಡಿರುವ ದೃಶ್ಯಗಳನ್ನು ನಾವು ಕಂಡಿದ್ದೇವೆ” ಎಂದು ಬ್ರಿಟಿಷ್ ಸೈನಿಕರೊಬ್ಬರು ಹೇಳಿಕೊಂಡಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಸಾವಿರಾರು ಅಫ್ಘನ್ನರು ಹತಾಶರಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights