ಬಲೂನ್ ಮಾರಾಟಗಾರರ ಸಿಲಿಂಡರ್ ಸ್ಫೋಟ : 2 ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಸಾವು – 10 ಮಂದಿಗೆ ಗಾಯ!

ಬಲೂನ್ ಮಾರಾಟಗಾರರ ಸಿಲಿಂಡರ್ ಸ್ಫೋಟಗೊಂಡ 2 ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು 10 ಮಂದಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ ಚಿಂದ್ವಾರಾ ಮತ್ತು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟದ ಪ್ರಕರಣದಲ್ಲಿ ನಾಲ್ವರು ಬಲೂನ್ ಮಾರಾಟಗಾರರು ಸಾವನ್ನಪ್ಪಿದ್ದು 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಜುದ್ದೀನ್ ಅನ್ಸಾರಿ ನಿಜಾಮುದ್ದೀನ್ ಅನ್ಸಾರಿ (40) ಮತ್ತು ಶೇಖ್ ಇಸ್ಮಾಯಿಲ್ (70) ಛಿಂದ್ವಾರಾ ಮಾರುಕಟ್ಟೆಯಲ್ಲಿ ನಿಧನರಾದರೆ ಗೀತಾದೇವಿ (40) ಮತ್ತು ಲಲ್ಲಾ (30) ವಾರಣಾಸಿಯ ರಾಮನಗರ ಪ್ರದೇಶದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಛಿಂದವಾರ ಮಾರುಕಟ್ಟೆಯಲ್ಲಿ ಸ್ಫೋಟವು ತುಂಬಾ ಜೋರಾಗಿತ್ತು ಮತ್ತು ಶಬ್ದದಿಂದ ಇಡೀ ಪ್ರದೇಶವು ನಡುಗಿದೆ.

ಬಲೂನ್ ಮಾರಾಟಗಾರ ಬಲೂನುಗಳಲ್ಲಿ ಗ್ಯಾಸ್ ತುಂಬುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ. ಸ್ಫೋಟದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ಆದರೆ ಅವರು ಇನ್ನೂ ಅಧಿಕೃತ ಹೇಳಿಕೆ ನೀಡಲಿಲ್ಲ.

ವಾರಣಾಸಿಯಲ್ಲಿ ಪೊಲೀಸರು ಮಾತನಾಡಿ “ಆಘಾತ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಅಪಾಯದಿಂದ ಪಾರಾಗಿದ್ದಾರೆ” ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights