ಅತ್ಯಾಚಾರ ಆರೋಪದ ಮೇಲೆ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆಗೆ ಶರಣು..!

ಅತ್ಯಾಚಾರದ ಆರೋಪದಿಂದ ಕಸ್ಟಡಿಯಲ್ಲಿದ್ದ ಆರೋಪಿ ಅತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರದ ಸಿಂಧಗಿಯಲ್ಲಿ ನಡೆದಿದೆ.

ದೇವಿಂದ್ರ ಸಂಗೋಗಿ ಎಂಬ ಆರೋಪಿ ಸ್ಟೇಷನ್ ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿಂಧಗಿ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪ ಹೊತ್ತಿದ್ದ ದೇವಿಂದ್ರ ಸಂಗೋಗಿಯನ್ನು ಪೊಲೀಸರು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದರು. ನಿನ್ನೆ ರಾತ್ರಿ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಮಧ್ಯರಾತ್ರಿ ಬಂಧಿತ ಆರೋಪಿ ಶೌಚಾಲಯಕ್ಕೆ ತೆರಳುವುದಾಗಿ ಹೇಳಿದ್ದಾನೆ. ಎಲ್ಲರನ್ನೂ ಬಿಡುವಂತೆ ಪೊಲೀರು ಈತನನ್ನು ಬಿಟ್ಟಿದ್ದಾರೆ.

ಈ ವೇಳೆ ದೇವಿಂದ್ರ ಬೆಳಗಿನ ಜಾವ 3 ಸುಮಾರಿಗೆ ವಾಹನಗಳನ್ನು ಕಟ್ಟಲು ಇಟ್ಟಿದ ಹಗ್ಗದಿಂದ ನೇಣಿಗೆ ಶರಣಾಗಿದ್ದಾನೆ. ತಕ್ಷಣ ಈತನ್ನು ಸಿಂಧಗಿ ಆಸ್ಪತ್ರೆಗೆ ದಾಖಲಾಯಿತು. ತುರ್ತು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಈತನನ್ನು ಸಾಗಿಸಿದರೂ ಈತ ಬದುಕುಳಿಯಲಿಲ್ಲ. ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಆಕ್ರೋಶಗೊಂಡು ಠಾಣೆಯ ಮುಂದೆ ಪ್ರತಿಭಟನೆ ಮಾಡಿದರು. ದಲಿತ ಸಂಘಟನೆಗಳು ಪ್ರತಿಭಟಯಲ್ಲಿ ಭಾಗಿಯಾದರು.  ಈ ವೇಳೆ ಎಸ್ಪಿ ಪ್ರಕರಣದಲ್ಲಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ.

ಇನ್ನೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights