101 ಕೌರವರ ಹೆಸರನ್ನು ಒಂದು ನಿಮಿಷದಲ್ಲಿ ಹೇಳುವ ಬಾಲಕ; ಹಲವು ದಾಖಲೆಗಳನ್ನು ನಿರ್ಮಿಸಿದ್ದಾನೆ!

ತಾಥ್ವಿಕ್ ಆರ್ ಎಸ್ ಎಂಬ ಆರು ವರ್ಷದ ಈ ಹುಡುಗ ಮಹಾಭಾರತದ 101 ಕೌರವರ ಹೆಸರನ್ನು ಒಂದು ನಿಮಿಷದಲ್ಲಿ ಹೇಳಿ ಮುಗಿಸುತ್ತಾನೆ. ಕೇರಳದ ತಿರುವನಂತಪುರಂ ಮೂಲದ ಈ ಬಾಲಕ ಒಂದು ನಿಮಿಷ 14 ಸೆಕೆಂಡುಗಳಲ್ಲಿ ಮಹಾಭಾರತದ ಧೃತರಾಷ್ಟ್ರನ ಎಲ್ಲಾ 100 ಗಂಡು ಮಕ್ಕಳು ಮತ್ತು ಒಬ್ಬ ಮಗಳ ಹೆಸರನ್ನು ಪಠಪಠನೇ ಹೇಳಿಬಿಡುವ ಈ ಹುಡುಗ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಆಕ್ಸ್‌ಫರ್ಡ್ ನಿಘಂಟಿನಲ್ಲಿ ಕಂಡುಬರುವ ಹತ್ತು ಉದ್ದದ ಇಂಗ್ಲಿಷ್ ಪದಗಳನ್ನು ಅವುಗಳ ಸ್ಪೆಲ್ಲಿಂಗ್‌ನೊಂದಿಗೆ ಕೇವಲ ಒಂದು ನಿಮಿಷ 35 ಸೆಕೆಂಡುಗಳಲ್ಲಿ ವೇಗವಾಗಿ ಓದಿ ಮುಗಿಸುವ ಸಾಮರ್ಥ್ಯವನ್ನೂ ಹೊಂದಿರುವ ಈ ಹುಡುಗ, ಇದರಲ್ಲಿಯೂ ದಾಖಲೆ ನಿರ್ಮಿಸಿದ್ದಾನೆ.

ಈ ಚಿಕ್ಕ ವಯಸ್ಸಿನಲ್ಲಿಯೇ ತಾಥ್ವಿಕ್ ಹಲವಾರು ದಾಖಲೆಗಳಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ. ಅದರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಅಸಾಧಾರಣ ಪ್ರತಿಭೆಯನ್ನು ತೋರಿಸಿ ಸ್ಥಾನ ಪಡೆದುಕೊಂಡಿದ್ದಾನೆ.

“ನಾನು ರಾಜ್ಯಗಳು ಮತ್ತು ರಾಜಧಾನಿಗಳ ಹೆಸರನ್ನು ನೆನಪಿಟ್ಟುಕೊಳ್ಳಲು ಪ್ರಾರಂಭಿಸಿದೆ. ದೊಡ್ಡ ಪದಗಳು ಬಂದಾಗ, ನಾನು ಅವುಗಳನ್ನು ವಿಭಜಿಸುತ್ತೇನೆ ಮತ್ತು ಅದನ್ನು ಮನಸ್ಸಿಟ್ಟು ಕಲಿಯುತ್ತೇನೆ. 101 ಕೌರವರ ಹೆಸರುಗಳನ್ನು ನಾನು ಪ್ರತಿದಿನ ಹತ್ತು ಹೆಸರುಗಳಂತೆ ವಿಂಗಡಿಸಿ ಕಲಿತೆ. ಅಂತಿಮವಾಗಿ, ನಾನು ಅವೆಲ್ಲವನ್ನೂ ಹೇಳಬಲ್ಲೆ” ಎಂದು ಬಲರಾಮಪುರಂನ ಉಚ್ಚಕ್ಕಡಾದ ಸೇಂಟ್ ಪಾಲ್ಸ್ ಸಿಎಸ್‌ಐಡಬ್ಲ್ಯೂಎಫ್ ಸೆಂಟ್ರಲ್ ಶಾಲೆಯ  ನೇ ತರಗತಿಯ ವಿದ್ಯಾರ್ಥಿ ತಾಥ್ವಿಕ್ ಹೇಳುತ್ತಾರೆ.

ಆತನ ತಾಯಿ ಶ್ರೀತು ಶ್ಯಾಮ್ ಅವರು ಸರ್ಕಾರಿ ಶಿಕ್ಷಕಿ. ಆಕೆಯ ಪ್ರಕಾರ, ತಾಥ್ವಿಕ್ ತನ್ನ ಎರಡೂವರೆ ವರ್ಷದವನಿದ್ದಾಗ ಮಲಯಾಳಂ ಪತ್ರಿಕೆಗಳನ್ನು ಓದಲು ಆರಂಭಿಸಿದನು. ನನ್ನ ತಂದೆ ಶ್ಯಾಮಪ್ರಸಾದ್ ಬೆಳಿಗ್ಗೆ ಪತ್ರಿಕೆ ಓದುತ್ತಿದ್ದಾಗ, ತಾಥ್ವಿಕ್ ಕೂಡ ಅವರೊಂದಿಗೆ ಕುಳಿತು ಪತ್ರಿಕೆಗಳನ್ನು ಓದುತ್ತಿದ್ದ. ಆತನ ಓದುವ ಆಸಕ್ತಿಯನ್ನು ನೋಡಿ, ನಾವು ಆತನಿಗೆ ಜಿಕೆ ಸೇರಿದಂತೆ ಅನೇಕ ಪುಸ್ತಕಗಳನ್ನು ಖರೀದಿಸಿದೆವು. ನನ್ನ ಮಗನ ಐಕ್ಯೂವನ್ನು ಹೆಚ್ಚಿಸಲು ನಾನು ಆತನಿಗೆ ಮಹತ್ವದ ಸಂಗತಿಗಳನ್ನು ಹೇಳುತ್ತಿದ್ದೆ ಎಂದು ಅವರು ಹೇಳುತ್ತಾರೆ.

ತನ್ನ ವಯಸ್ಸಿನ ಇತರ ಮಕ್ಕಳು ನೃತ್ಯ ಮತ್ತು ಸಂಗೀತವನ್ನು ಕಲಿಯುತ್ತಿದ್ದರೆ, ತಾಥ್ವಿಕ್ ರಾಜ್ಯ, ರಾಜಧಾನಿಗಳು, ಕೇರಳದ ಪ್ರಸಿದ್ಧ ಜಲಪಾತಗಳು, ಪಕ್ಷಿಗಳ ಹೆಸರುಗಳನ್ನು ಕಲಿಯುತ್ತಿದ್ದ. ಅಲ್ಲದೆ, ಸಂಖ್ಯೆಗಳನ್ನು ಮತ್ತು ವರ್ಣಮಾಲೆಗಳನ್ನು ಹಿಂದಿನಿಂದ ಹೇಳುತ್ತಿದ್ದ ಎಂದು ಆತನ ತಾಯಿ ಹೇಳಿದ್ದಾರೆ.

ದಾಖಲೆಗಳ ಆಯ್ಕೆ ಸಮಿತಿಯು ಮೇ 2021 ರಂದು ತಾಥ್ವಿಕ್ ಅವರ ದಾಖಲೆಯನ್ನು ಅನುಮೋದಿಸಿತು. “ನನ್ನ ಸಹೋದ್ಯೋಗಿಯೊಬ್ಬರು ದಾಖಲೆಗಳ ಪುಸ್ತಕಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ನಂತರ ನಾವು ದೀರ್ಘವಾದ ಪದಗಳನ್ನು ಮತ್ತು 101 ಕೌರವರ ಹೆಸರುಗಳನ್ನು ತಾಥ್ವಿಕ್ ಹೇಳುತ್ತಿರುವ ವಿಡಿಯೋವನ್ನು ಆಯ್ಕೆ ಸಮಿತಿಗೆ ಕಳುಹಿಸಿದೆವು” ಎಂದು ಶ್ರೀತು ಹೇಳುತ್ತಾರೆ.

ಇತ್ತೀಚೆಗೆ ಶಶಿ ತರೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾಥ್ವಿಕ್ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. “ಶಶಿ ತರೂರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವುದು ತಾಥ್ವಿಕ್ ಅವರ ಕನಸು” ಎಂದು ಶ್ರೀತು ಹೇಳುತ್ತಾರೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ 2022: ಕಾಂಗ್ರೆಸ್‌ಗೆ ಬಿಗ್‌ಶಾಕ್‌; ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೇ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights