ದೇಶದಲ್ಲಿ ಬುರ್ಕಾ ನಿಷೇಧಕ್ಕೆ ಆಗ್ರಹಿಸಿದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ದೂರು..!

ಕೆಲದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಭಾರತದಲ್ಲಿ ಬುರ್ಕಾ ಪದ್ಧತಿಯನ್ನು ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ದೂರು ದಾಖಲಿಸಲಾಗಿದೆ.

‘ಬುರ್ಕಾ ತೊಡುವುದು ನಮ್ಮ ಸಂಸ್ಕೃತಿಯಲ್ಲಿ ಯಾವತ್ತು ಇರಲಿಲ್ಲ. ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು.ಯಾರು ಬುರ್ಖಾ ಬೇಕು ಎನ್ನುತ್ತಿದ್ದಾರೆ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಬಂಧಿಸಬೇಕು. ದೇಶದ ಕಾನೂನು ಬೇಡ ಎನ್ನುವವರು ಎಲ್ಲರೂ ತಾಲಿಬಾನಿಗಳು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

ಈ ಹೇಳಿಕೆಗೆ ಆಕ್ರೋಶಗೊಂಡು ಕಾಂಗ್ರೆಸ್ ಮುಖಂಡ ಬುರ್ಹಾನ್ ಎಂಬುವವರು ತುಮುಕೂರು ಪೊಲೀಸ್ ಠಾಣೆಯಲ್ಲಿ ಸೊಗಡು ಶಿವಣ್ಣ ವಿರುದ್ಧ ದೂರು ದಾಖಲಿಸಿದ್ದಾರೆ. ಮಾಜಿ ಸಚಿವರು ತಮ್ಮ ಪೈಶಾಚಿಕ ಮನಸ್ಸನ್ನು ಸೀಮಿತದಲ್ಲಿ ಇಡದೆ ಈ ರೀತಿ ಮಾತನಾಡಿದ್ದಾರೆ. ಧಾರ್ಮಿಕ ಭಾವನೆ ಹಾನಿ ಮಾಡುವ ುದ್ಧೆಶದಿಂದ ಹೇಳಿಕೆ ನೀಡಿದ್ದಾರೆ. ಹೀಗಾಗಿ ಶಿವಣ್ಣ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ.

ಈ ಹಿಂದೆ ಸೊಗಡು ಶಿವಣ್ಣ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ತಾಲಿಬಾನಿಗಳು ಇದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಒಂಥರಾ ತಾಲಿಬಾನೇ ಎನ್ನುವ ಸ್ಪೋಟಕ ಹೇಳಿಕೆ ನೀಡಿದ್ದರು. ಅಖಂಡ ಶ್ಋಈನಿವಾಸ್ ಮನೆಗೆ ಬೆಂಕಿ ಹಾಕಿದ್ದ ಪ್ರಕರಣದಲ್ಲಿ ಕೆಲವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ. ಈ ತಾಲಿಬಾನಿಗಳು ಪೊಲೀಸ್ ಠಾಣೆಗೆ ನುಗ್ಗಿ ಹೊಡಿದಿದ್ದು ಮರೆತು ಹೋಯಿತಾ ಎಂದು ಪ್ರಶ್ನೆ ಮಾಡಿದ್ದರು. ಹಿಂದೂಗಳೆಲ್ಲಾ ಒಂದೇ ಆಗಿದ್ದರೆ ಅವರು ಉಸಿರು ಬಿಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights