12 ಮುಖ್ಯಮಂತ್ರಿಗಳು ಬಂದು-ಹೋದರು; ಆದರೂ, ಗಡಿ ತಾಲ್ಲೂಕುಗಳಿಗೆ ಹೆಚ್ಚಲಿಲ್ಲ ಅನುದಾನ!

ಗಡಿ ತಾಲೂಕುಗಳ ಅಭಿವೃದ್ಧಿಗಾಗಿ ನೀಡುತ್ತಿದ್ದ ಅನುದಾನದಲ್ಲಿ ಹೆಚ್ಚಳ ಮಾಡುವ ವಿಚಾರ ಕಳೆದ 17 ವರ್ಷಗಳಿಂದ ಪದೇ ಪದೇ ಸದನದಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೂ, ಈ ಅನುದಾನ ಹೆಚ್ಚಳದ ಭರವಸೆ ಈಡೇರಿಲ್ಲ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ 10 ವರ್ಷಗಳ ಕಳೆದಿದ್ದರೂ ಹಿ೦ದುಳಿದ ತಾಲೂಕುಗಳಿಗೆ ಅನುದಾನ ಮರೀಜಿಕೆಯಾಗಿಯೇ ಉಳಿದಿದೆ.

ಎಸ್‌ ಎ೦ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುದಾನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೂ, ಈ ತಾಲೂಕುಗಳಿಗೆ ಸ೦ಪನ್ಮೂಲ ಮತ್ತು ಆದ್ಯತೆಗಳ ಅನುಗುಣವಾಗಿ ಅನುದಾನದಲ್ಲಿ ಹೆಚ್ಚಳವಾಗಲೇ ಇಲ್ಲ. ಹೀಗಾಗಿ 15ನೇ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯು 17 ವರ್ಷಗಳ ಹಿ೦ದೆ ಸಚಿವರು ನೀಡಿದ್ದ ಭರವಸೆಯನ್ನು ಕಾಯ್ದಿದಿಸಿದೆ.

ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ರಘುಪತಿ ಭಟ್‌ ಅವರು 2021ರ ಸೆಪ್ಟೆ೦ಬರ್‌ 21ರ೦ದು ಸಲ್ಲಿಸಿರುವ 15ನೇ ವಿಧಾನಸಭೆಯ 11ನೇ ವರದಿಯು ಸದನದಲ್ಲಿ ನೀಡಲಾಗುವ ಭರವಸೆಗಳ ಸ್ಥಿತಿಗತಿಯನ್ನು ಅನಾವರಣಗೊಳಿಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ ತೊರೆದಿರುವ ಎಲ್ಲರನ್ನೂ ವಾಪಸ್ ಕರೆತರಲಾಗುತ್ತದೆ: ಡಿಕೆ ಶಿವಕುಮಾರ್

ಕನ್ನಡ, ಸ೦ಸ್ಕೃತಿ, ವಾರ್ತಾ, ಸಾರ್ವಜನಿಕ ಸ೦ಪರ್ಕ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ, ಜಲ ಸ೦ಪನ್ಮೂಲ (ಸಣ್ಣ ನೀರಾವರಿ), ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ, ಜಲ ಸ೦ಪನ್ಮೂಲ (ಭಾರೀ ನೀರಾವರಿ) ಇಲಾಖೆಗಳಿಗೆ ಸಂಬಂಧಿಸಿದ ಭರವಸೆಗಳ ಪೈಕಿ ಒಟ್ಟು 33 ಭರವಸೆಗಳ ಮೇಲೆ ಯಾವುದೇ ಕ್ರಮ ಜರುಗಿಸದ ಕಾರಣ ಕಾಯ್ದಿರಿಸಿದೆ.

ವಿಶೇಷವೆ೦ದರೆ ಗಡಿ ಅಭಿವೃದ್ದಿ ತಾಲೂಕುಗಳಿಗೆ ವೀರೇ೦ದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ತಾಲೂಕುಗಳಿಗೆ ತಲಾ 25 ಲಕ್ಷ ರೂ.ಗಳ ಅನುದಾನ ನೀಡಲಾಗುತ್ತಿತ್ತು. ಆದರೆ ಆ ನ೦ತರ ಬ೦ದ ಸರ್ಕಾರಗಳು ಅನುದಾನವನ್ನು ತಲಾ 2 ರಿ೦ದ 3 ಲಕ್ಷ ರೂ.ಗಳಿಗಿಳಿಸಿತ್ತು ಎ೦ಬ ಸ೦ಗತಿಯು ವರದಿಯಿಂದ ತಿಳಿದು ಬಂದಿದೆ.

ಗಡಿಯಂಚಿನಲ್ಲಿರುವ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕಾರ್ಯ, ಚಟುವಟಿಕೆಗಳಿಗೆ ವಾರ್ಷಿಕ ಕನಿಷ್ಠ 10 ಲಕ್ಷ ರೂ.ಗಳನ್ನಾದರೂ ನೀಡಬೇಕು ಎ೦ದು 2008ರ ಜುಲೈ 30ರ೦ದು ಸದನದಲ್ಲಿ ಎನ್‌ ಎಚ್‌ ಶಿವಶ೦ಕರರೆಡ್ಡಿ ಅವರು ಸರ್ಕಾರದ ಗಮನಸೆಳೆದಿದ್ದರು. ಆ ಸ೦ದರ್ಭದಲ್ಲಿದ್ದ ಸಚಿವರು ಸ೦ಪನ್ಮೂಲ ಮತ್ತು ಆದ್ಯತೆಗಳ ಅನುಗುಣವಾಗಿ ಅನುದಾನ ನಿಗದಿಪಡಿಸಲಾಗುವುದು ಎ೦ದು ಭರವಸೆ ನೀಡಿದ್ದರು. ಈ ಭರವಸೆ ಈಡೇರಿದೆಯೇ ಇಲ್ಲವೇ ಎ೦ಬುದನ್ನು 2020ರ ನವ೦ಬರ್‌ 27ರಂದು ಸರ್ಕಾರಿ ಭರವಸೆಗಳ ಸಮಿತಿಯು ಪರಿಶೀಲನೆಗೆ ಕೈಗೆತ್ತಿಕೊ೦ಡಿತ್ತು ಎ೦ಬುದು ವರದಿಯಿಂದ ಗೊತ್ತಾಗಿದೆ.

ಪ್ರಾಧಿಕಾರ ರಚನೆಯಾದರೂ ಹೆಚ್ಚಳವಿಲ್ಲ 

ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸ೦ಬ೦ಧಿಸಿದ೦ತೆ ಅನುದಾನದಲ್ಲಿ ಹೆಚ್ಚಳ ಮಾಡಬೇಕಿದ್ದ ಸರ್ಕಾರವೂ 17 ವರ್ಷಗಳಿ೦ದಲೂ ಹಿಂದುಳಿಯುತ್ತಲೇ ಬಂದಿದೆ. ಗಡಿ ಅಭಿವೃದ್ಧಿಯಡಿ ಯೋಜನಾ ಇಲಾಖೆಯಿಂದ ಅನುದಾನ ಹಂಚಿಕೆಯಾಗುತ್ತಿತ್ತು. 2010ರ ನ೦ತರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೂ ಹಿ೦ದುಳಿದ ತಾಲೂಕುಗಳ ಅಭಿವೃದ್ಧಿಗೆ ಅನುದಾನ ಹೆಚ್ಚಳವಾಗಿಲ್ಲ. ಆರ್ಥಿಕ ಇಲಾಖೆಯು ವಾರ್ಷಿಕ ಹಂಚಿಕೆ ಮಾಡಿದ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಅನುದಾನ ನೀಡಲಾಗುತ್ತಿದೆ.

ಅದೇ ರೀತಿ ಗಡಿ ಭಾಗಗಳ ಗಡಿ ಪ೦ಚಾಯ್ತಿಗಳನ್ನು ಗುರುತಿಸಿ ಪ೦ಚಾಯ್ತಿವಾರು ಅನುದಾನ ಹಂಚಿಕೆ ಬಗ್ಗೆ ಹಿಂದುಳಿದಿರುವಿಕೆ ಹಾಗೂ ಇತರ ಸೂಚ್ಯಂಕ ಗುರುತಿಸಿ ಅನುದಾನ ಹಂಚಿಕೆ ಮಾಡುವ ಬಗ್ಗೆ ಪ್ರಾಧಿಕಾರದ ಅಧಿನಿಯಮಕ್ಕೆ ಸೂಕ್ತ ತಿದ್ದುಪಡಿ ಕುರಿತಾದ ವಿಚಾರ ಇನ್ನೂ ಚರ್ಚೆಯ ಹಂತದಲ್ಲೇ ಇರುವುದು ವರದಿಯಿ೦ದ ತಿಳಿದು ಬ೦ದಿದೆ.

ಇದನ್ನೂ ಓದಿ: ನಾನು ಎಡಪಂಥೀಯ, ಅದಕ್ಕಾಗಿ ಬಲಪಂಥೀಯರು ನನ್ನನ್ನು ದ್ವೇಷಿಸುತ್ತಾರೆ: ಸಿದ್ದರಾಮಯ್ಯ

“ಇತ್ತೀಚಿನ ವರ್ಷಗಳಲ್ಲಿ ಗಡಿ ಭಾಗದಲ್ಲಿ ಹೊಸ ತಾಲೂಕುಗಳನ್ನು ಅಧಿನಿಯಮದಲ್ಲಿ ಸೇರ್ಪಡೆ ಮಾಡಬೇಕಾಗುತ್ತದೆ. ಅಲ್ಲದೆ ಗಡಿ ಭಾಗಗಳಲ್ಲಿ ಇರುವ ಗಡಿಗೆ ಹೊ೦ದಿಕೊ೦ಡಿರುವ ಗ್ರಾಮ ಪ೦ಚಾಯ್ತಿಗಳನ್ನು ಗುರುತಿಸುವುದು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅತ್ಯಗತ್ಯವಾಗಿದ್ದು ಹೆಸರುಗಳನ್ನು ಸೇರ್ಪಡೆ ಮಾಡಬೇಕಾಗುತ್ತದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪ೦ಚಾಯತ್‌ರಾಜ್‌ ಇಲಾಖೆಯಿ೦ದ ಮಾಹಿತಿ ಪಡೆದು ಅಧಿನಿಯಮಕ್ಕೆ ಸೂಕ್ತ ತಿದ್ದುಪಡಿ ಮಾಡಿ ಪ್ರಸ್ತಾವನೆ ಮಂಡಿಸಬೇಕು; ಎ೦ದು ಗಡಿ ಅಭಿವೃದ್ಧಿ
ಪ್ರಾಧಿಕಾರಕ್ಕೆ ಸೂಚಿಸಿರುವುದು ಗೊತ್ತಾಗಿದೆ.

ದಿವ೦ಗತ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಡಿಭಾಗದ ತಾಲೂಕುಗಳ ಅಭಿವೃದ್ಧಿಗಾಗಿ 25 ಲಕ್ಷ ರು. ಅನುದಾನ ನೀಡಲಾಗುತ್ತಿತ್ತು. ಈಗ ವಾರ್ಷಿಕ 2-3 ಲಕ್ಷ ರು.ಗಳನ್ನು ನೀಡಲಾಗುತ್ತಿದೆ. ಇದರಿ೦ದ ಅಭಿವೃದ್ಧಿ ಕಾರ್ಯ ಕು೦ಠಿತಗೊ೦ಡಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲು 2-3 ಲಕ್ಷ ರು.ಗಳಿ೦ದ ಸಾಧ್ಯವಾಗದಿರುವುದರಿ೦ದ ವೀರೇ೦ದ್ರ ಪಾಟೀಲ್‌ ಅವರ ಸರ್ಕಾರದಲ್ಲಿ ನೀಡಲಾಗುತ್ತಿದ್ದ 25 ಲಕ್ಷ ರು. ಅನುದಾನ ನೀಡುವುದನ್ನು ಮು೦ದುವರೆಸಬೇಕು ಎ೦ದು ಸಮಿತಿಯು ಸೂಚಿಸಿದೆ.

ಇವತ್ತು ಆಯಾ ಭಾಗದ ಅಸಮತೋಲನಗಳನ್ನು ಗಮನದಲ್ಲಿಟ್ಟುಕೊ೦ಡು ವಿಧಾನಸಭೆ ಕ್ಲೇತ್ರಗಳಿಗೆ ಅನುದಾನ ಮಂ೦ಜೂರು ಮಾಡುತ್ತಿಲ್ಲ. ಕೇವಲ ರಾಜಕೀಯ ಕಾರಣಗಳಿಗಾಗಿ ಮತ್ತು ಸರ್ಕಾರದಿ೦ದ ಬಿಡುಗಡೆಯಾದ ಅನುದಾನದಲ್ಲಿ ಯಾರೂ ಚೆನ್ನಾಗಿ ಪರ್ಸೆಂಟೇಜ್‌ನ್ನುಹ೦ಚಿಕೊಳ್ಳುತ್ತಾರೋ ಆಯಾ ಕ್ಲೇತ್ರಗಳಿಗೆ ಮಾತ್ರ ವಿಶೇಷವಾಗಿ ಅನುದಾನ ಬಿಡುಗಡೆ ಆಗುತ್ತಿವೆ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

ಕೃಪೆ: ದಿ ಪೈಲ್

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಇಬ್ಬರು ಬಿಜೆಪಿ ನಾಯಕರ ನಡುವೆ ವಾಕ್ಸಮರ; ವಿಡಿಯೋಗಳು ವೈರಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights