ಕಾಂಗ್ರೆಸ್‌ ತೊರೆದಿರುವ ಎಲ್ಲರನ್ನೂ ವಾಪಸ್ ಕರೆತರಲಾಗುತ್ತದೆ: ಡಿಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್ ಜಿ ರಾಮುಲು ಅವರು ಕೊಪ್ಪಳ ರಾಯಚೂರು ಬಳ್ಳಾರಿ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟನೆ ಮಾಡಿ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದರು. ಅವರು ಆರೋಗ್ಯ ಸಮಸ್ಯೆಯಿಂದ ನಿವೃತ್ತಿಯಾದ ನಂತರ ಪಕ್ಷ ಸಂಘಟನೆ ಕಡಿಮೆಯಾಗಿ ಅಲ್ಲಿ ಬಿಜೆಪಿ ಪಕ್ಷ ತಳವೂರಲು ಕಾರಣವಾಗಿದೆ. ಈ ಭಾಗದಲ್ಲಿ ಪಕ್ಷ ತೊರೆದಿರುವ ಹಲವರನ್ನು ಮನವೊಲಿಸಿ ರಾಜಕೀಯಕ್ಕೆ ಮರಳಿ ಕರೆ ತರಲಾಗುತ್ತದೆ ಎಂದು ಡಿಕೆ ಶಿಕೆ ಶಿವಕುಮಾರ್ ಹೇಳಿದ್ದಾರೆ.

ಎಚ್. ಜಿ. ರಾಮುಲು ಅವರ ನಿವಾಸಕ್ಕೆ ಭೇಟಿ ನೀಡದ ನಂತರ ಮಾತನಾಡಿದ ಅವರು, ಪಕ್ಷದಿಂದ ದೂರ ಉಳಿದಿರುವ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಕರಿಯಣ್ಣ ಸಂಗಟಿ ಸೇರಿದಂತೆ ಅನೇಕ ಹಿರಿಯ ಮುಖಂಡರನ್ನು ಪುನಃ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಯತ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಚ್ ಜಿ ರಾಮುಲು ಅವರ ಜತೆ ಮಾತನಾಡಲಾಗಿದೆ ಎಂದು ಹೇಳಿದ್ದಾರೆ.

ಎಚ್ ಜಿ ರಾಮುಲು ಮಾತನಾಡಿ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ತಳಹಂತದಿಂದ ಸಂಘಟನೆ ಮಾಡುತ್ತಿದ್ದಾರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾ ಗಬೇಕೆಂಬುದು ಬಹುತೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಅಭಿಪ್ರಾಯವಾಗಿದೆ. ನಾನೂ ಸಹ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಬಯಸುತ್ತೇನೆ.

ತಮ್ಮ ಪುತ್ರ ಶ್ರೀನಾಥ್ ಸೇರಿದಂತೆ ಕಾಂಗ್ರೆಸ್ ನಿಂದ ಹೊರಗೆ ಹೋಗಿರುವ ಎಲ್ಲರೂ ಪುನಃ ಕಾಂಗ್ರೆಸ್‌ಗೆ ಸೇರ್ಪಡೆಯಾಗಬೇಕು. ಈ ದೇಶದ ಜನರ ನಾಡಿ ಬಡಿತ ವಾಗಿರುವ ಕಾಂಗ್ರೆಸ್ ಅವರ ಸಮಸ್ಯೆಗೆ ಸ್ಪಂದಿಸಲಿದೆ. ಕಳೆದ ಅರುವತ್ತು ವರ್ಷಗಳಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಾಗಿ ಉಳಿಸಿ ವಿಶ್ವದ ಸ್ಪರ್ಧಾ ಮಟ್ಟಕ್ಕೆ ದೇಶವನ್ನು ತೆಗೆದುಕೊಂಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ರಾಮುಲು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಅಮೆರಿಕಾ ಭೇಟಿ: ಮೋದಿ ಎದುರೇ ಗಾಂಧಿ ತತ್ವಗಳನ್ನು ಸ್ಮರಿಸಿದ ಯುಎಸ್‌ ಅಧ್ಯಕ್ಷ ಬೈಡನ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights