ಅಫ್ಘಾನಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ : ತಾಲಿಬಾನ್ ನಿಂದ 11 ಹೊಸ ನಿಯಮಗಳ ಜಾರಿ!

ಅಫ್ಘಾನಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು 11 ಹೊಸ ನಿಯಮಗಳನ್ನು ತಾಲಿಬಾನ್ ರೂಪಿಸಿದೆ.

ಅಫ್ಘಾನಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಹಿಡಿತದಲ್ಲಿಟ್ಟುಕೊಳ್ಳು ತಾಲಿಬಾನ್ ಸುದ್ದಿ ಸಂಸ್ಥೆಗಳ ವಿರುದ್ಧ ’11 ನಿಯಮಗಳನ್ನು ‘ಪರಿಚಯಿಸಿದೆ. ಇದರಲ್ಲಿ ಇಸ್ಲಾಂ ಧರ್ಮದೊಂದಿಗೆ ಸಂಘರ್ಷವಿರುವ ಅಥವಾ ರಾಷ್ಟ್ರೀಯ ವ್ಯಕ್ತಿಗಳಿಗೆ ಅವಮಾನಿಸುವಂತಹ ವಿಷಯವನ್ನು ಪ್ರಕಟಿಸುವುದನ್ನು ನಿರ್ಬಂಧಿಸಲಾಗಿದೆ.

ಮಾತ್ರವಲ್ಲದೆ ತಾಲಿಬಾನ್ ಆಡಳಿತದ ಪರ ಪತ್ರಕರ್ತರು ಸುದ್ದಿಗಳನ್ನು ಪ್ರಕಟಿಸುವಂತೆ ಒತ್ತಡ ಹೇರಿದೆ. ಯುಎಸ್ ಮೂಲದ ಪತ್ರಿಕಾ ಸ್ವಾತಂತ್ರ್ಯ ಸಂಸ್ಥೆಯ ಹಿರಿಯ ಸದಸ್ಯ ಸ್ಟೀವನ್ ಬಟ್ಲರ್ “ಪತ್ರಕರ್ತರು ಆಫ್ಘಾನಿಸ್ತಾನದಲ್ಲಿ ಭಯಭೀತರಾಗಿದ್ದಾರೆ ಮಾತ್ರವಲ್ಲದೆ ಸಂಸ್ಥೆಯು [ಅಫಘಾನ್] ಪತ್ರಕರ್ತರಿಂದ ಸಹಾಯಕ್ಕಾಗಿ ನೂರಾರು ಇಮೇಲ್‌ಗಳನ್ನು ಸ್ವೀಕರಿಸುತ್ತಿದೆ” ಎಂದು ಹೇಳಿದ್ದಾರೆ. ನಿಜಕ್ಕೂ ಇದು ಭಯ ಹುಟ್ಟಿಸುವಂತ ವಿಷಯ.

ಯಾಕೆಂದ್ರೆ ಅಫಘಾನ್ ಸರ್ಕಾರ ಪತನವಾದಾಗಿನಿಂದ ಅಫ್ಘಾನಿಸ್ತಾನದಲ್ಲಿ 150 ಕ್ಕೂ ಹೆಚ್ಚು ಮಾಧ್ಯಮಗಳು ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸಲು ವಿಫಲವಾಗಿವೆ. ಹಲವಾರು ಮಾಧ್ಯಮ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ. ಮಾಧ್ಯಮದ ಮಾಹಿತಿ ಹಕ್ಕಿನಲ್ಲಿ ತಾಲಿಬಾನ್ ನಿರಂತರವಾಗಿ ಒಳನುಸುಳುವ ಪ್ರಯತ್ನ ಮಾಡುತ್ತಿದ್ದು ಮಾಧ್ಯಮ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಂಡಿದೆ. ತಾಲಿಬಾನ್ ಪತ್ರಕರ್ತರ ಕೆಲಸಕ್ಕೆ ಅಡ್ಡಿಯಾಗಿದ್ದು ಇದನ್ನು ವಿಶ್ವದ ಹಲವಾರು ಮಾಧ್ಯಮ ಸಂಸ್ಯೆಗಳು ಪ್ರಶ್ನಿಸಿವೆ.

ದೇಶದ ತೀವ್ರ ಆರ್ಥಿಕ ಕುಸಿತದ ನಡುವೆ ಕೆಲವು ಪ್ರಮುಖ ಪತ್ರಿಕೆಗಳು ಮುದ್ರಣ ಕಾರ್ಯಗಳನ್ನು ನಿಲ್ಲಿಸಲು ಮತ್ತು ಆನ್‌ಲೈನ್‌ಗೆ ಹೋಗಲು ತೀರ್ಮಾನಿಸಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ತಿಂಗಳ ಆರಂಭದಲ್ಲಿ ತಾಲಿಬಾನ್ ಸರ್ಕಾರದ ವಿರುದ್ಧ ಪ್ರತಿಭಟನೆಯ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್ ಸಿಡಿಮಿಡಿಗೊಂಡಿತು. ಮಾನವ ಮೌಲ್ಯಗಳನ್ನು ಗೌರವಿಸುವ ಮತ್ತು ಗೌರವಿಸುವ ಭರವಸೆಗಳನ್ನು ಉಳಿಸಿಕೊಳ್ಳುವ ಬದಲು ಗುಂಪು ಕಿರುಕುಳ, ಚಿತ್ರಹಿಂಸೆ ಮತ್ತು ಕೊಲ್ಲುವ ಮೂಲಕ ಮಾಧ್ಯಮ ಸಿಬ್ಬಂದಿಯ ಮೂಲ ಮಾನವ ಹಕ್ಕುಗಳನ್ನು ಕಸಿದುಕೊಂಡಿದೆ.

ತಾಲಿಬಾನ್ ಅಧಿಕಾರ ವಹಿಸಿಕೊಂಡಾಗಿನಿಂದ, ಖಾಸಗಿ ಟಿವಿ ಚಾನೆಲ್‌ಗಳಲ್ಲಿ ತೋರಿಸುತ್ತಿರುವ ವಿಷಯದಲ್ಲಿ ಬದಲಾವಣೆ ಕಂಡುಬಂದಿದೆ. ವಿಮರ್ಶಾತ್ಮಕ ಸುದ್ದಿ ಬುಲೆಟಿನ್ಗಳು, ರಾಜಕೀಯ ಚರ್ಚೆಗಳು, ಮನರಂಜನೆ, ಸಂಗೀತ ಕಾರ್ಯಕ್ರಮಗಳು ಮತ್ತು ವಿದೇಶಿ ನಾಟಕಗಳನ್ನು ತಾಲಿಬಾನ್ ಸರ್ಕಾರಕ್ಕೆ ತಕ್ಕಂತೆ ಕಾರ್ಯಕ್ರಮಗಳ ಮೂಲಕ ಬದಲಾಯಿಸಲಾಗಿದೆ.

ಪತ್ರಕರ್ತರನ್ನು ರಕ್ಷಿಸುವ ಸಮಿತಿಯು (ಸಿಪಿಜೆ) ತಾಲಿಬಾನ್‌ಗಳಿಗೆ ತಕ್ಷಣವೇ ಅಫ್ಘಾನಿಸ್ತಾನದಲ್ಲಿ ಪತ್ರಕರ್ತರನ್ನು ಬಂಧಿಸುವುದನ್ನು ನಿಲ್ಲಿಸಬೇಕು ಮತ್ತು ಮಾಧ್ಯಮಗಳು ಮುಕ್ತವಾಗಿ ಪ್ರತೀಕಾರದ ಭಯವಿಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಕೇಳಿದೆ.

ಕಾಬೂಲ್‌ನಲ್ಲಿರುವ ಅಫ್ಘಾನಿಸ್ತಾನದ ಸರ್ಕಾರಿ ಮಾಹಿತಿ ಮಾಧ್ಯಮ ಕೇಂದ್ರದ ನಿರ್ದೇಶಕ ದವಾ ಖಾನ್ ಮೆನಾಪಾಲ್ ಆಗಸ್ಟ್ ಮೊದಲ ವಾರದಲ್ಲಿ ಕೊಲ್ಲಲ್ಪಟ್ಟರು.

ಎರಡು ದಿನಗಳ ನಂತರ, ಪಾಕ್ತಿಯಾ ಘಾಗ್ ರೇಡಿಯೊದ ಪತ್ರಕರ್ತ ತೂಫಾನ್ ಒಮರ್ ಅವರನ್ನು ತಾಲಿಬಾನ್ ಹೋರಾಟಗಾರರು ಹತ್ಯೆಗೈದರು. ಕಾಬೂಲ್ ಪತನದ ನಂತರ, ತಾಲಿಬಾನ್ ಹೋರಾಟಗಾರರು ಪತ್ರಕರ್ತರನ್ನು ಹುಡುಕಿ ಹಿಂಸಿಸಿ ಕೊಲೆ ಮಾಡಿದರು. ಇದು ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಮಾಧ್ಯಮದ ಮೇಲೆ ಹಿಡಿತ ಸಾಧಿಸಲು ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ ಎಂದು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights