ಆರ್ಯನ್‌ ಡ್ರಗ್ಸ್‌ ಪ್ರಕರಣ: ಬಾಲಿವುಡ್ ನಟ ಶಾರುಖ್‌ ಖಾನ್‌ ಮನೆಗೆ NCB ಭೇಟಿ!

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತಂಡವು ಬಾಲಿವುಡ್ ನಟ ಶಾರುಖ್‌ ಖಾನ್ ಅವರ ಮುಂಬೈ ಮನೆ “ಮನ್ನತ್”ಗೆ ಭೇಟಿ ನೀಡಿ, ಕೆಲವು ಗಂಟೆಗಳ ಕಾಲ ಚರ್ಚಿಸಿದೆ ಎಂದು ಎಂದು ಮೂಲಗಳು ತಿಳಿಸಿವೆ.

ಶಾರುಖ್ ಅವರು ತಮ್ಮ ಮಗ ಆರ್ಯನ್‌ ಖಾನ್‌ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ ಕೆಲವು ಗಂಟೆಗಳ ನಂತರ,  ಎನ್‌ಸಿಬಿ  ಅಧಿಕಾರಿಗಳ ತಂಡವು ಶಾರುಖ್‌ ಅವರ ಮನೆಗೆ ಭೇಟಿ ನೀಡಿದೆ. ಅಧಿಕಾರಿಗಳು “ಪೇಪರ್‌ವರ್ಕ್ ಪೂರ್ಣಗೊಳಿಸುವುದಕ್ಕಾಗಿ” ಶಾರುಖ್‌ ಅವರ ಮನೆಗೆ ಭೇಟಿ ನೀಡಿತ್ತು. ಯಾವುದೇ ಪರಿಶೀಲನೆಗಾಗಿ ಅಲ್ಲ ಎಂದು ಶಾರುಖ್‌ ಹೇಳಿದ್ದಾರೆ.

ಇಂದು ಬೆಳಗ್ಗೆ ಶಾರುಖ್ ಅವರು ಮುಂಬೈನ ಆರ್ಥರ್ ರೋಡ್ ಜೈಲಿಗೆ ಭೇಟಿ ನೀಡಿ ತಮ್ಮ ಮಗನನ್ನು ನೋಡಿ ಬಂದಿದ್ದರು. ಅಕ್ಟೋಬರ್ 2 ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತಿದ್ದ ವೇಳೆ ದಾಳಿ ನಡೆಸಿದ್ದ ಎನ್‌ಸಿಬಿ ಆರ್ಯನ್ ಅವರನ್ನು ಬಂಧಿಸಿತ್ತು.

14 ದಿನಗಳ ಕಾಲ ಜೈಲಿನಲ್ಲಿರುವ 23 ವರ್ಷದ ಆರ್ಯನ್ ಖಾನ್ ಅವರಿಗೆ ಜಾಮೀನು ನೀಡಲು ನಿನ್ನೆ ಮುಂಬೈನ ವಿಶೇಷ ನ್ಯಾಯಾಲಯವು ನಿರಾಕರಿಸಿದೆ. ಹೀಗಾಗಿ, ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಮಂಗಳವಾರ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ; ಆದರೆ, ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ

ನಿನ್ನೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ವಿಶೇಷ ನ್ಯಾಯಾಲಯವು, ಆರ್ಯನ್ ಖಾನ್ ಅವರ ವಾಟ್ಸಾಪ್ ಚಾಟ್‌ಗಳು ಆತ “ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ” ಭಾಗಿಯಾಗಿರುವುದನ್ನು ತೋರಿಸುತ್ತದೆ.  ಆದ್ದರಿಂದ ಜಾಮೀನಿನ ಮೇಲೆ ಖಾನ್ ಹೊರಬಂದರೆ ಮತ್ತೆ ಇದೇ ರೀತಿಯ ಅಪರಾಧ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗುವುದಿಲ್ಲ” ಎಂದು ಹೇಳಿತ್ತು.

ದಾಖಲೆಯಲ್ಲಿ ಇರಿಸಲಾಗಿರುವ ವಸ್ತುವು ಆರ್ಯನ್ ಖಾನ್ ಮತ್ತು ಪೂರೈಕೆದಾರರು ಮತ್ತು ಪೆಡ್ಲರ್‌ಗಳ ನಡುವಿನ “ಸಂಬಂಧವನ್ನು” ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಆರ್ಯನ್ ಖಾನ್ ಅವರಲ್ಲಿ ಯಾವುದೇ ಡ್ರಗ್ಸ್‌ ಕಂಡುಬಂದಿಲ್ಲವಾದರೂ, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಶೂನಲ್ಲಿ ದೊರೆತ ಆರು ಗ್ರಾಂ ಡ್ರಗ್ಸ್‌ ಬಗ್ಗೆ ಆರ್ಯನ್‌ಗೆ ತಿಳಿದಿತ್ತು. ಅದನ್ನು ಅವರು “ಪ್ರಜ್ಞಾಪೂರ್ವಕ ಮುಚ್ಚಿಟ್ಟಿದ್ದರು” ಎಂದು ನ್ಯಾಯಾಲಯ ಹೇಳಿದೆ.

“ಆರೋಪಿ 1 ಮತ್ತು 2 ಇಬ್ಬರೂ ಬಹಳ ಹಿಂದಿನಿಂದಲೂ ಸ್ನೇಹಿತರು. ಅವರು ಒಟ್ಟಿಗೆ ಪ್ರಯಾಣಿಸಿದ್ದಾರೆ. ಅವರನ್ನು ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಒಟ್ಟಿಗೆ ಬಂಧಿಸಲಾಯಿತು. ಇದಲ್ಲದೆ, ತಮ್ಮ ಸ್ವಯಂಪ್ರೇರಿತ ಹೇಳಿಕೆಗಳಲ್ಲಿ, ಇಬ್ಬರೂ ತಮ್ಮ ಬಳಕೆ ಮತ್ತು ಆನಂದಕ್ಕಾಗಿ ತಾವು ಮಾದಕ ವಸ್ತುವನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ ಎಂಬುದನ್ನು ಕೋರ್ಟ್‌ ಉಲ್ಲೇಖಿಸಿದೆ.

ಇದನ್ನೂ ಓದಿ: ರಾಜಸ್ಥಾನ: ಹೋಂವರ್ಕ್‌ ಮಾಡದ ಕಾರಣಕ್ಕೆ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights