ಮಳೆಯ ಅಬ್ಬರಕ್ಕೆ ನಲುಗಿದ ಚಿಕ್ಕಮಗಳೂರು; ಹಲವೆಡೆ ಭೂಕುಸಿತ; ಬೆಳೆ-ಆಸ್ತಿ-ಪಾಸ್ತಿ ಹಾನಿ

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಚಂದ್ರದ್ರೋಣ ಶ್ರೇಣಿಗಳ ಗುಡ್ಡಗಾಡು ಪ್ರದೇಶಗಳಲ್ಲಿ ಅಕ್ಟೋಬರ್ 21 ರಿಂದ ಭಾರೀ ಮಳೆಯಾಗುತ್ತಿದೆ. ಇದು, ಹಲವೆಡೆ ಭೂಕುಸಿತಕ್ಕೆ ಕಾರಣವಾಗಿದ್ದು, ಇದೇ ಮೊದಲ ಬಾರಿಗೆ, ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆಗಳಲ್ಲಿ ಭೂಕುಸಿತಗಳಾಗಿವೆ ಎಂದು ವರದಿಯಾಗಿವೆ.

ಹೊನ್ನಮ್ಮನಹಳ್ಳ ಜಲಪಾತದ ಸುತ್ತಮುತ್ತ ಭೂಕುಸಿತವಾಗಿದ್ದಾಗಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಕವಿಕಲ್ ಗಂಡಿ ರಸ್ತೆಯ ಕರ್ವ್‌ನಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ರಸ್ತೆಯ ಅಂಚಿನ ಭಾಗದ ಗಾರೆಗಳ ಜೊತೆಗೆ ಸಪೋರ್ಟ್ ರೈಲಿಂಗ್‌ಗಳೂ ಕೂಡ ಕೊಚ್ಚಿಹೋಗಿವೆ. ಹೀಗಾಗಿ ರಸ್ತೆ ಮಾರ್ಗವು ಕಿರಿದಾಗುತ್ತಿದೆ ಮತ್ತು ವಾಹನ ಸವಾರರಿಗೆ ಅಪಾಯವನ್ನು ತಂದೊಡ್ಡಿವೆ.

ಕಾಫಿ ತೋಟಗಳ ಇಳಿಜಾರಿನಲ್ಲಿ ಮಣ್ಣು ಜಾರಿ ಎರಡು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಾಫಿ ತೋಟಗಳ ಮಧ್ಯೆ ತುಂಬಿ ಹರಿಯುತ್ತಿರುವ ತೊರೆಗಳು ಕೂಡ ಬೆಳೆಗೆ ಹಾನಿ ಮಾಡುತ್ತಿವೆ.

ವಿವಿಧ ರಸ್ತೆಗಳಲ್ಲಿನ ಚೆಕ್ ಗೋಡೆಗಳು ಕುಸಿದಿವೆ. ದೊಡ್ಡಿಕಾನ್ ಎಸ್ಟೇಟ್ ಬಳಿ ನೂರಾರು ಅಡಿಗಳಷ್ಟು ಎತ್ತರದಿಂದ ಮಣ್ಣು ಜಾರಿ ಬಂದಿದ್ದು, ಕಾಫಿ ಎಸ್ಟೇಟ್‌ನಲ್ಲಿರುವ ಕೆರೆಯನ್ನು ಕೆಸರಿನಿಂದ ಸಮತಟ್ಟುಗೊಳಿಸಿದೆ.

ಅರಣ್ಯ ಅಧಿಕಾರಿಗಳು, ಪಿಡಬ್ಲ್ಯೂಡಿ ಮತ್ತು ಸಿಎಮ್‌ಸಿ ಆಯುಕ್ತ ಬಸವರಾಜ್ ಅವರು ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಹಿರೇಮಗಳೂರಿನಲ್ಲಿ, ದಿನಗೂಲಿ ಮಾಡುವ ಪರಮೇಶರಪ್ಪ ಅವರ ಮನೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ಕಾಫಿ, ಅರೆಕಾ ಮತ್ತು ಇತರ ಬೆಳೆಗಳನ್ನು ನೆಡುವವರಿಗೆ ಅನಾನುಕೂಲವಾಗಿದೆ.

ಇದನ್ನೂ ಓದಿ: ಸಮುದ್ರದಲ್ಲಿ ಸುಳಿಗಾಳಿ: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights