ನಟ ಅಕ್ಷಯ್‌ ಕುಮಾರ್: ಯೂಟ್ಯೂಬರ್‌ಗೆ ₹ 500 ಕೋಟಿ ರೂ. ಮಾನನಷ್ಟ ನೋಟಿಸ್!

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ವಿರುದ್ಧ “ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು” ಮಾಡಿದ್ದಕ್ಕಾಗಿ ಬಿಹಾರ ಮೂಲದ ಯೂಟ್ಯೂಬರ್‌ಗೆ ನಟ ಅಕ್ಷಯ್ ಕುಮಾರ್ ಮಾನನಷ್ಟದ ನೋಟಿಸ್ ನೀಡಿದ್ದಾರೆ.

ರಶೀದ್ ಸಿದ್ದಿಕಿ ಎಂಬತಾ, ಆತನ ಯೂಟ್ಯೂಬ್ ಚಾನೆಲ್ ಎಫ್‌ಎಫ್ ನ್ಯೂಸ್‌ನಲ್ಲಿ ತಮ್ಮ ವಿರುದ್ಧ ಹಲವಾರು ಮಾನಹಾನಿಕರ ಮತ್ತು ಅವಹೇಳನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ನೋಟಿಸ್‌ನಲ್ಲಿ ಅಕ್ಷಯ್‌ ಕುಮಾರ್‌ ಹೇಳಿದರು.

ಯೂಟ್ಯೂಬರ್‌ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಅಕ್ಷಯ್‌ ಕುಮಾರ್‌ ಕೇಳಿದ್ದಾರೆ, ಈಗಾಗಲೇ ಆದೇ ಯೂಟ್ಯೂಬರ್ ವಿರುದ್ದು ಪ್ರತ್ಯೇಕ (ಬೇರೊಂದು) ಮಾನಹಾನಿ ಪ್ರಕರಣದಲ್ಲಿ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ ಮತ್ತು ಆತನ ಚಾನೆಲ್‌ನಿಂದ ಆಕ್ಷೇಪಾರ್ಹ ವೀಡಿಯೊಗಳನ್ನು ತೆಗೆದುಹಾಕಿದ್ದಾರೆ.

ಯೂಟ್ಯೂಬರ್‌ ಅಪ್‌ಲೋಡ್‌ ಮಾಡಿರುವ ಮಾನಹಾನಿಕರ ಮತ್ತು ಅವಹೇಳನಕಾರ ವಿಡಿಯೋಗಳಿಂದಾಗಿ ಅಕ್ಷಯ್‌ ಕುಮಾರ್‌ ಅವರು ಮಾನಸಿಕ ಆಘಾತ, ಸಂಕಟ ಮತ್ತು ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಪ್ರತಿಷ್ಟೆ ಮತ್ತು ಸದ್ಬಾವನೆಯ ನಷ್ಟವಾಗಿದೆ. ಹಾಗಾಗಿ ಅದರ ನಷ್ಟವನ್ನು 500 ಕೋಟಿ ರೂಗಳು ಎಂದು ಪ್ರಮಾಣೀಕರಿಸುತ್ತದೆ ಎಂದು ನೋಟಿಸ್‌ ಹೇಳಿದೆ.

ನಟಿ ರಿಯಾ ಚಕ್ರವರ್ತಿ ಅವರು ಕೆನಡಾಗೆ ಪರಾರಿಯಾಗಲು ನಟ ಅಕ್ಷಯ್‌ ಕುಮಾರ್‌ ಸಹಾಯ ಮಾಡಿದ್ದಾರೆ. ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಪ್ರಕರಣ ಮತ್ತು ಇನ್ನಿತರ ಪ್ರಕರಣಗಳ ಬಗ್ಗೆ ಅವರು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರೊಂದಿಗೆ ರಹಸ್ಯ ಸಭೆ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ. ಇಂತಹ ಹಲವಾರು ಸುಳ್ಳು ಮತ್ತು ಆಧಾರರಹಿತವಾಗಿ ಆರೋಪಿಸಿ ವಿಡಿಯೋಗಳನ್ನು ಮಾಡಲಾಗಿದೆ. ಇದರಿಂದಾಗಿ  ನಟನ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ವೀಡಿಯೊಗಳು ಸುಳ್ಳು, ಆಧಾರರಹಿತ, ಮಾನಹಾನಿಕರ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸಲು ಉದ್ದೇಶಪೂರ್ವಕವಾಗಿ ಪ್ರಕಟಿಸಲ್ಪಟ್ಟಿವೆ. ಇದು ಕೇವಲ ಅಗ್ಗದ ಪ್ರಚಾರದ ಸಾಹಸವಾಗಿದೆ. ಇಂತಹ ವಿಡಿಯೋಗಳಿಂದಾಗಿ ಅಕ್ಷಯ್‌ ಕುಮಾರ್ ಸಾರ್ವಜನಿಕ ಕಿರಿಕಿರಿ, ಅಸ್ವಸ್ಥತೆ, ಆತಂಕದಿಂದಾಗಿ ಬಳಲಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.

ಯೂಟ್ಯೋಬರ್‌ ರಶೀದ್‌ ಸಿದ್ದಿಕಿ ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಅದನ್ನು ತಮ್ಮ ಚಾನೆಲ್‌ನಲ್ಲೂ ಪ್ರಕರಟಿಸಬೇಕು. ತಮ್ಮ ಬಗ್ಗೆ ಪ್ರಕಟಿಸಲಾಗಿರುವ ಎಲ್ಲಾ ವಿಡಿಯೋಗಳನ್ನು ತೆಗೆದುಹಾಕಬೇಕು. ಮುಂದಿನ ದಿನಗಳಲ್ಲಿಯೂ ಇಂತಹ ವಿಡಿಯೋಗಳನ್ನು ಪ್ರಕರಟಿಸುವುದನ್ನು ನಿಲ್ಲಿಸಬೇಕು ಎಂದು ಅಕ್ಷಯ್‌ ಕುಮಾರ್ ಕೇಳಿದ್ದಾರೆ.

ಮೂರು ದಿನಗಳ ಅವಧಿಯಲ್ಲಿ ರಶೀದ್ ಸಿದ್ದಿಕಿ ನೋಟಿಸ್‌ಗೆ ಪ್ರತಿಕ್ರಿಯಿಸಲು ವಿಫಲವಾದರೆ, ಆತನ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸುತ್ತಾನೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ನಗರ ಪೊಲೀಸರು, ಮಹಾರಾಷ್ಟ್ರ ಸರ್ಕಾರ ಮತ್ತು ಸಚಿವ ಆದಿತ್ಯ ಠಾಕ್ರೆ ಅವರ ವಿರುದ್ಧ ಮಾನಹಾನಿ, ಸಾರ್ವಜನಿಕ ಕಿಡಿಗೇಡಿತನ ಮತ್ತು ಅವರ ಹುದ್ದೆಗಳಿಗೆ ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಪ್ರತ್ಯೇಕವಾಗಿ ರಶೀದ್ ಸಿದ್ದಿಕಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ: ಮೀಸಲಾತಿಯನ್ನು ಚರ್ಚೆಗೆ ತಂದ ಪಟಾಕಿ ವಿಚಾರ: ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights